Salman Khan marriage: ಬಾಲಿವುಡ್ನ ಬಾಕ್ಸ್ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
Why salman khan didn't marry?: ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ಗೆ ಸದ್ಯ 59 ವರ್ಷ ವಯಸ್ಸು. ಸಲ್ಲುಮಿಯಾ ಯಾವಾಗ ಮದುವೆಯಾಗುತ್ತಾರೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗೆ ಇಂದಿಗೂ ಉತ್ತರ ಸಿಕ್ಕಿಲ್ಲ. ಸಲ್ಮಾನ್ ಜೀವನದಲ್ಲಿ ಹಲವು ಹುಡುಗಿಯರು ಬಂದು ಹೋದರೂ ಯಾರು ಕೂಡ ಮದುವೆಯಾಗುವ ಮನಸ್ಸು ಮಾಡಲಿಲ್ಲ. ಸಲ್ಮಾನ್ ಖಾನ್ ಯಾಕೆ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆಗೆ ಇದೀಗ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಉತ್ತರಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.
ಬಾಲಿವುಡ್ನ ಬಾಕ್ಸ್ಆಫೀಸ್ ಸುಲ್ತಾನ ಅಂತಾನೇ ಫೇಮಸ್ ಆಗಿರೋ ನಟ ಸಲ್ಮಾನ್ ಖಾನ್ ಅವರು ತಮ್ಮ ಡೇಟಿಂಗ್ ವದಂತಿಗಳ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ನಟ ಸಲ್ಮಾನ್ ಖಾನ್ 59 ವರ್ಷ ವಯಸ್ಸಾದರೂ ಕೂಡ ಮದುವೆಯಾಗದೆ ಉಳಿದಿರುವ ಕಾರಣವನ್ನು ಅವರ ತಂದೆ ಸಲೀಂ ಖಾನ್ ಬಿಚ್ಚಿಟ್ಟಿದ್ದಾರೆ.
ಸಲೀಂ ಖಾನ್ ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ನಟ ಸಲ್ಮಾನ್ ಖಾನ್ ಅವರ ತಂದೆ ತಮ್ಮ ಮಗ ಇನ್ನೂ ಮದುವೆಯಾಗದೆ ಉಳಿದಿರಲು ಕಾರಣವೇನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ನನ್ನ ಪುತ್ರ ಸಲ್ಮಾನ್ ಖಾನ್ ಮಗ್ದ ಮನಸ್ಸು ಹೊಂದಿದ್ದಾನೆ. ಆತ ಸುಲಭವಾಗಿ ಸಂಬಂಧದೊಳಗೆ ಸಿಲುಕಿಹಾಕಿಕೊಳ್ಳುತ್ತಾನೆ. ಆದರೆ ಅವನಿಗೆ ಮದುವೆಯಾಗಲು ಧೈರ್ಯವಿಲ್ಲ. ಏಕೆಂದರೆ ನನ್ನ ಮಗ ತುಂಬಾ ಸರಳ ಸ್ವಭಾವ ಹೊಂದಿದ್ದಾನೆ ಮತ್ತು ಅತೀಬೇಗನೆ ಎಲ್ಲರ ಕಡೆಗೆ ಆಕರ್ಷಿತನಾಗುತ್ತಾನೆ. ತಾನು ಮದುವೆಯಾಗುವ ಹೆಣ್ಣು ತನ್ನ ತಾಯಿಯಂತೆ ಕುಟುಂಬವನ್ನು ನಿರ್ವಹಿಸಬಹುದೇ ಎಂಬ ಅನುಮಾನ ಅವನಿಗೆ ಸದಾ ಇದ್ದೇ ಇರುತ್ತದೆ ಎಂದು ಹೇಳಿದ್ದಾರೆ.
ಸಲ್ಮಾನ್ ಖಾನ್ ತನ್ನ ಪತ್ನಿ ಮತ್ತು ತಾಯಿಯಂತೆ ಪತ್ನಿ-ಮಕ್ಕಳನ್ನು ನೋಡಿಕೊಳ್ಳಬೇಕು ಹಾಗೂ ಮಕ್ಕಳಿಗೆ ಊಟವನ್ನು ತಯಾರಿಸಬೇಕು, ಅವರು ತಯಾರಾಗಲು ಸಹಾಯ ಮಾಡಬೇಕು, ಮನೆಯ ಕೆಲಸವನ್ನು ಮಾಡಿಕೊಂಡು ಹೋಗಬೇಕೆಂದು ಬಯಸುತ್ತಾನೆ. ಇಂದಿನ ಕಾಲದಲ್ಲಿ ಇದು ಸುಲಭವಲ್ಲ ಎಂದಿದ್ದಾರೆ.
ಇಷ್ಟು ವರ್ಷಗಳಲ್ಲಿ ನಟ ಸಲ್ಮಾನ್ ಖಾನ್ ಅವರು ಸೋಮಿ ಅಲಿ, ಸಂಗೀತ ಬಿಜಲಾನಿ, ಐಶ್ವರ್ಯ ರೈ, ಕತ್ರೀನಾ ಕೈಫ್, ಯೂಲಿಯಾ ವಂತೂರ್ ಅವರ ಜೊತೆ ಸಂಬಂಧ ಹೊಂದಿದ್ದರಾದರೂ, ಇವರ್ಯಾರನ್ನು ಮದುವೆಯಾಗಿಲ್ಲ. ಸಲ್ಲುಮಿಯಾ ಅವರು ಮದುವೆಯಾಗದೆ ಸಿಂಗಲ್ ಆಗಿರುವ ಹಿಂದಿನ ಸತ್ಯವನ್ನು ಸ್ವತಃ ಅವರ ತಂದೆ ಬಿಚ್ಚಿಟ್ಟಿದ್ದಾರೆ. ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.