Rashmika Mandanna: ರಶ್ಮಿಕಾ ಮಂದಣ್ಣ ದಕ್ಷಿಣದ ಸ್ಟಾರ್ ನಾಯಕಿಯರಲ್ಲಿ ಒಬ್ಬರು, ಅವರು ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
Rashmika Mandanna: ರಶ್ಮಿಕಾ ಮಂದಣ್ಣ ದಕ್ಷಿಣದ ಸ್ಟಾರ್ ನಾಯಕಿಯರಲ್ಲಿ ಒಬ್ಬರು, ಅವರು ಬಾಲಿವುಡ್ ಚಿತ್ರರಂಗಕ್ಕೂ ಕಾಲಿಟ್ಟಿದ್ದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಪುಷ್ಪಾ 2 ಸಿನಿಮಾ ಪ್ರಚಾರದ ನಂತರ ಎಲ್ಲಿಯೂ ಕೂಡ ಕಾಣಿಸಿಕೊಂಡಿಲ್ಲ, ಇದರಿಂದ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಏನಾಯಿತೋ ಏನೋ ಎಂದು ಆತಂಕಗೊಂಡಿದ್ದರು.
ಈ ನಡುವೆ ರಶ್ಮಿಕಾ ಮಂದಣ್ಣ ಅವರು ಗಾಯಗೊಂಡಿರವ ಕಾರಣ ಸಲ್ಮಾನ್ ಖಾನ್ ಅವರು ಸಿಕಂದರ್ ಸಿನಿಮಾದ ಶೂಟಿಂಗ್ ಅನ್ನು ಸ್ಥಗಿತಗೊಳಿಸಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಅದ್ದು ಮಾಡಿತ್ತು.
ಈ ಸುದ್ದಿ ಕೇಳಿ ಅಭಿಮಾನಿಗಳು ಆತಂಕಗೊಂಡಿದ್ದರು, ಅಷ್ಟಕ್ಕೂ ರಶ್ಮಿಕಾ ಮಂದಣ್ಣ ಅವರಿಗೆ ಆಗಿರುವುದಾದರೂ ಏನು, ಎಲ್ಲಿಯೂ ಕಾಣಿಸಿಕೊಳ್ಳದಿರುವ ಮಟ್ಟಿಗೆ ಅವರಿಗೆ ಏನಾಗಿದೆ ಎಂದು ಕಂಗಾಲಾಗಿದ್ದರು.
ಇದೀಗ, ರಶ್ಮಿಕಾ ಮಂದಣ್ಣ ತಮ್ಮ ಕಾಲಿಗೆ ಗಂಭೀರವಾದ ಗಾಯವಾಗಿರುವ ವಿಚಾರವನ್ನು ಇನ್ಸ್ಸ್ಟಾಗಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕೆಲವು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ರಶ್ಮಿಕಾ ಮಂದಣ್ಣ ವಾರು ತಮ್ಮ ಕಾಲಿಗೆ ಗಾಯವಾಗಿದೆ ಎಂಬುದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಜಿಮ್ ಮಾಡುವಾಗ ಗಾಯಗೊಂಡಿದ್ದೇನೆ ಎಂದು ಹೇಳಿರುವ ರಶ್ಮಿಕಾ ಮಂದಣ್ಣ ಅವರು ಸಿಕಂದರ್ ಹಾಗೂ ಕುಬೇರ ಸಿನಿಮಾದ ಶೂಟಿಂಗ್ ನನ್ನ ಕಾರಣದಿಂದಾಗಿ ನಿಂತಿದೆ, ಇದಕ್ಕೆ ಕ್ಷಮೆ ಇರಲಿ, ಶೀಘ್ರವೇ ನಾನು ಸಿನಿಮಾ ಶೂಟಿಂಗ್ಗೆ ಹಿಂತಿರುಗುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಸದ್ಯತಮ್ಮ ನೆಚ್ಚನ ನಟಿಗೆ ಏನಾಗುತ್ತೋ ಏನೋ ಎಂದು ಗಾಬರಯಲ್ಲಿದ್ದ ಅಭಿಮಾನಿಗಳು ಇದೀಗ ಸುದ್ದಿ ಕೇಳಿ, ನಿಟ್ಟುಸಿರು ಬಿಟ್ಟಿದ್ದಾರೆ.