ಪಾಕಿಸ್ತಾನದಲ್ಲಿ ತ್ರಿಶತಕ ಬಾರಿಸಿದ ಟೀಂ ಇಂಡಿಯಾದ ಮೊದಲ ಬ್ಯಾಟ್ಸ್‌ಮನ್ ಯಾರು ಗೊತ್ತಾ? 39 ಬೌಂಡರಿ, 6 ಸಿಕ್ಸರ್‌ ಸೇರಿ 309 ರನ್‌ ಸಿಡಿಸಿ ಬೌಲರ್‌ಗಳ ಚಳಿ ಬಿಡಿಸಿದ ದಿಗ್ಗಜನಿವ

Virender Sehwag Triple Century in Pakistan: ಟೀಂ ಇಂಡಿಯಾ 2004ರಲ್ಲಿ ಕೈಗೊಂಡ ಪಾಕಿಸ್ತಾನ ಪ್ರವಾಸ ಇಂದಿಗೂ ಸ್ಮರಣೀಯ. ಅಂದು ಪಾಕ್‌ ಪ್ರವಾಸದಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಟೀಂ ಇಂಡಿಯಾ 2004ರಲ್ಲಿ ಕೈಗೊಂಡ ಪಾಕಿಸ್ತಾನ ಪ್ರವಾಸ ಇಂದಿಗೂ ಸ್ಮರಣೀಯ. ಅಂದು ಪಾಕ್‌ ಪ್ರವಾಸದಲ್ಲಿ ಸೌರವ್ ಗಂಗೂಲಿ ಭಾರತ ತಂಡದ ನಾಯಕರಾಗಿದ್ದರು. ಅಷ್ಟೇ ಅಲ್ಲದೆ, 49 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕ್‌ ನೆಲದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ ಟೆಸ್ಟ್ ಸರಣಿ ಗೆದ್ದು ಇತಿಹಾಸವನ್ನೇ ಸೃಷ್ಟಿಸಿತ್ತು.

2 /7

ಭಾರತವು 1954-55ರಲ್ಲಿ ಟೆಸ್ಟ್ ಸರಣಿಗಾಗಿ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಪ್ರವಾಸ ಮಾಡಿದ್ದು, ಅಂದು ಪಾಕಿಸ್ತಾನದ ನೆಲದಲ್ಲಿ ಮೊದಲ ಟೆಸ್ಟ್ ಸರಣಿ ಗೆಲುವು ಕಂಡಿತ್ತು. ಅದಾದ ನಂತರ 2003-04 ಪ್ರವಾಸದಲ್ಲಿ ಸೌರವ್ ಗಂಗೂಲಿ ನಾಯಕತ್ವದಲ್ಲಿ ಭಾರತವು ಪಾಕಿಸ್ತಾನವನ್ನು 2-1 ಅಂತರದಿಂದ ಸೋಲಿಸಿತು.

3 /7

ಈ ಸರಣಿಯ ಗೆಲುವಿನಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್, ಭಾರತ ಪರ ಟೆಸ್ಟ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡರು. 375 ಎಸೆತಗಳನ್ನು ಎದುರಿಸಿದ್ದ ಸೆಹ್ವಾಗ್‌ 309 ರನ್‌ಗಳ ಇನಿಂಗ್ಸ್ ಆಡಿದ್ದು, ಇದರಲ್ಲಿ 39 ಬೌಂಡರಿ ಮತ್ತು 6 ಸಿಕ್ಸರ್‌ ಸೇರಿತ್ತು.  

4 /7

ವೀರೇಂದ್ರ ಸೆಹ್ವಾಗ್‌ಗಿಂತ ಮೊದಲು ಯಾವುದೇ ಭಾರತೀಯ ಬ್ಯಾಟ್ಸ್‌ಮನ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಗಳಿಸಿದ ಸಾಧನೆ ಮಾಡಿರಲಿಲ್ಲ.  ಸೆಹ್ವಾಗ್ ಅವರಿಗಿಂತ ಮೊದಲು, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವೈಯಕ್ತಿಕ ಸ್ಕೋರ್ ಮಾಡಿದ ದಾಖಲೆ ವಿವಿಎಸ್ ಲಕ್ಷ್ಮಣ್ ಹೆಸರಿನಲ್ಲಿತ್ತು. ಅವರು 2001 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೋಲ್ಕತ್ತಾ ಟೆಸ್ಟ್‌ನಲ್ಲಿ 281 ರನ್‌ಗಳ ಇನ್ನಿಂಗ್ಸ್ ಆಡಿದ್ದರು.  

5 /7

ಮುಲ್ತಾನ್‌ನಲ್ಲಿ ಪಾಕಿಸ್ತಾನದ ವಿರುದ್ಧ ತ್ರಿಶತಕ ಬಾರಿಸಿದ ನಂತರ, ವೀರೇಂದ್ರ ಸೆಹ್ವಾಗ್ ಅವರನ್ನು 'ಮುಲ್ತಾನ್ ಸುಲ್ತಾನ್' ಎಂದು ಕರೆಯಲಾಗುತ್ತದೆ.  

6 /7

ಭಾರತದ ಪರ ಅತಿ ಹೆಚ್ಚು ಟೆಸ್ಟ್ ಸ್ಕೋರ್ ಗಳಿಸಿದ ಬ್ಯಾಟ್ಸ್‌ಮನ್ 1. ವೀರೇಂದ್ರ ಸೆಹ್ವಾಗ್ 319 ರನ್, ವಿರುದ್ಧ - ದಕ್ಷಿಣ ಆಫ್ರಿಕಾ (2008) 2. ವೀರೇಂದ್ರ ಸೆಹ್ವಾಗ್ 309 ರನ್, ಪಾಕಿಸ್ತಾನ ವಿರುದ್ಧ (2004) 3. ಕರುಣ್ ನಾಯರ್, 303 ರನ್, ವಿರುದ್ಧ - ಇಂಗ್ಲೆಂಡ್ (2016) 4. ವೀರೇಂದ್ರ ಸೆಹ್ವಾಗ್ 293 ರನ್, ವಿರುದ್ಧ - ಶ್ರೀಲಂಕಾ (2009) 5. ವಿವಿಎಸ್ ಲಕ್ಷ್ಮಣ್ 281 ರನ್, ಆಸ್ಟ್ರೇಲಿಯಾ ವಿರುದ್ಧ (2001)  

7 /7

ಮುಲ್ತಾನ್ ಟೆಸ್ಟ್‌ನಲ್ಲಿ ಬೌಲಿಂಗ್ ಮಾಡಿದ ಶೋಯೆಬ್ ಅಖ್ತರ್, ಸಕ್ಲೇನ್ ಮುಷ್ತಾಕ್, ಅಬ್ದುಲ್ ರಜಾಕ್ ಮತ್ತು ಶಬ್ಬೀರ್ ಅಹ್ಮದ್ ಅವರಂತಹ ಬೌಲರ್‌ಗಳು ಸಹ ವೀರೇಂದ್ರ ಸೆಹ್ವಾಗ್ ಮುಂದೆ ಮಂಡಿಯೂರಿದ್ದರು. ಅಷ್ಟೇ ಅಲ್ಲದೆ, ಈ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ಇನ್ನಿಂಗ್ಸ್‌, ಸಕ್ಲೇನ್ ಮುಷ್ತಾಕ್ ಅವರ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನೇ ಕೊನೆಗೊಳಿಸುವಂತೆ ಮಾಡಿತ್ತು. ಸಕ್ಲೇನ್ ಮುಷ್ತಾಕ್ ಅವರ ಎಸೆತದಲ್ಲಿ ವೀರೇಂದ್ರ ಸೆಹ್ವಾಗ್ ಸಿಕ್ಸರ್ ಬಾರಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಟ್ರಿಪಲ್ ಸೆಂಚುರಿ ಗಳಿಸಿದ ಸಾಧನೆ ಮಾಡಿದರು.