Nitish Kumar Reddy: ಭಾರತದ ಯುವ ಬ್ಯಾಟ್ಸ್ಮನ್ ನಿತೀಶ್ ಕುಮಾರ್ ರೆಡ್ಡಿ ಶನಿವಾರ (ಡಿಸೆಂಬರ್ 28) 171 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಗಳಿಸುವ ಮೂಲಕ ಬಾಕ್ಸಿಂಗ್ ಡೇ ಟೆಸ್ಟ್ನಲ್ಲಿ ಸಂಚಲನ ಮೂಡಿಸಿದರು. ಈ ಬಲಗೈ ಬ್ಯಾಟ್ಸ್ಮನ್ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್ನಲ್ಲಿ ಟೆಸ್ಟ್ ಶತಕ ಬಾರಿಸಿದ ಮೊದಲ 8ನೇ ಕ್ರಮಾಂಕದ ಬ್ಯಾಟ್ಸ್ಮನ್ ಎಂಬ ಇತಿಹಾಸವನ್ನೂ ಸೃಷ್ಟಿಸಿದ್ದಾರೆ. ಇದಷ್ಟೇ ಅಲ್ಲದೆ, ಈ ಇನ್ನಿಂಗ್ಸ್ನಲ್ಲಿ ನಿತೀಶ್ ಅನೇಕ ಇತರ ಸಾಧನೆಗಳನ್ನೂ ಮಾಡಿದ್ದಾರೆ.
ಇದನ್ನೂ ಓದಿ: ಈ ಹಣ್ಣು ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಫ್ಯಾಟಿ ಲಿವರ್ ಸಮಸ್ಯೆಯಿಂದ ಶಾಶ್ವತ ಮುಕ್ತಿ ಸಿಗುತ್ತೆ
ನಿತೀಶ್ ಅವರು ಮೆಲ್ಬೋರ್ನ್ನಲ್ಲಿ ಎಂಟನೇ ಶತಕ ಬಾರಿಸುವ ಮೂಲಕ ಮಿಚೆಲ್ ಜಾನ್ಸನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಡಿಸೆಂಬರ್ 2012 ರಲ್ಲಿ ಈ ಮೈದಾನದಲ್ಲಿ ಶ್ರೀಲಂಕಾ ವಿರುದ್ಧ ಜಾನ್ಸನ್ ಅಜೇಯ 92 ರನ್ ಗಳಿಸಿದ್ದರು. ಜನವರಿ 1947 ರಲ್ಲಿ ಇಂಗ್ಲೆಂಡ್ ವಿರುದ್ಧ ಡೊನಾಲ್ಡ್ ಟ್ಯಾಲನ್ 92 ರನ್ ಗಳಿಸಿದರು. ಆದರೆ ನಿತೀಶ್ ಅವರು ಶತಕದ ಸಾಧನೆ ಮಾಡಿದ್ದಾರೆ. ಇನ್ನು ಅನಿಲ್ ಕುಂಬ್ಳೆ ಅವರು ಜನವರಿ 2008 ರಲ್ಲಿ ಅಡಿಲೇಡ್ ಓವಲ್ನಲ್ಲಿ 87 ರನ್ಗಳ ಇನ್ನಿಂಗ್ಸ್ ಆಡುವ ಮೂಲಕ ಈ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಮಾಡಿಕೊಂಡಿದ್ದರು. ಆದರೆ ಇದೀಗ ನಿತೀಶ್ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.
ನಿತೀಶ್ 99 ರನ್ ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾ ರೂಪದಲ್ಲಿ ಭಾರತ ಒಂಬತ್ತನೇ ವಿಕೆಟ್ ಕಳೆದುಕೊಂಡಿತು. ಇದಾದ ಬಳಿಕ ಪ್ಯಾಟ್ ಕಮಿನ್ಸ್ ಅವರ ಮೂರು ಎಸೆತಗಳನ್ನು ಮೊಹಮ್ಮದ್ ಸಿರಾಜ್ ಬಲಿಷ್ಠವಾಗಿ ಎದುರಿಸಿದರು. ಮುಂದಿನ ಓವರ್ನಲ್ಲಿ ನಿತೀಶ್ ರೆಡ್ಡಿ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ ಶತಕ ಪೂರೈಸಿದರು. ಇದಕ್ಕೂ ಮುನ್ನ ಅವರು 81 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು.
ಆಸ್ಟ್ರೇಲಿಯಾದಲ್ಲಿ ಭಾರತದ ಪರ ಮೊದಲ ಟೆಸ್ಟ್ ಶತಕ ಸಿಡಿಸಿದ ಕಿರಿಯ ಆಟಗಾರ
18 ವರ್ಷ 256 ದಿನಗಳು: ಸಚಿನ್ ತೆಂಡೂಲ್ಕರ್, ಸಿಡ್ನಿ, 1992
21 ವರ್ಷ 92 ದಿನಗಳು: ರಿಷಬ್ ಪಂತ್, ಸಿಡ್ನಿ, 2019
21 ವರ್ಷ 216 ದಿನಗಳು: ನಿತೀಶ್ ರೆಡ್ಡಿ, ಮೆಲ್ಬೋರ್ನ್, 2024
22 ವರ್ಷ 46 ದಿನಗಳು: ದತ್ತು ಫಡ್ಕರ್, ಅಡಿಲೇಡ್, 1948
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಕಾಲು ಮುರಿತ..! ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ನಟಿ... ಏನಾಯ್ತು..?
ತೆಂಡೂಲ್ಕರ್ ದಾಖಲೆ ಜಸ್ಟ್ ಮಿಸ್
ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಎಂಟನೇ ವಿಕೆಟ್ಗೆ 127 ರನ್ಗಳ ಜೊತೆಯಾಟ ನೀಡಿದರು. ಆಸ್ಟ್ರೇಲಿಯನ್ ನೆಲದಲ್ಲಿ ಎಂಟನೇ ಅಥವಾ ಕೆಳ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಜೊತೆಯಾಟವನ್ನು ಮಾಡಿದ ಭಾರತೀಯ ಜೋಡಿ ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್. ಇವರಿಬ್ಬರೂ 2008ರಲ್ಲಿ ಸಿಡ್ನಿಯಲ್ಲಿ 129 ರನ್ ಸೇರಿಸಿದ್ದರು. ನಿತೀಶ್ ಮತ್ತು ಸುಂದರ್ ಇನ್ನೂ 3 ರನ್ ಜೊತೆಯಾಟ ನೀಡಿದ್ದರೆ ಸಚಿನ್-ಹರ್ಭಜನ್ ದಾಖಲೆ ಮುರಿಯುತ್ತಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.