ಮೊಸರಿಗೆ ಈ ಪುಡಿ ಸೇರಿಸಿ ಹಚ್ಚಿದ್ರೆ ಹತ್ತೇ ನಿಮಿಷದಲ್ಲಿ ಬಿಳಿಕೂದಲು ಶಾಶ್ವತವಾಗಿ ಕಪ್ಪಾಗುತ್ತೆ! ಮತ್ತೆಂದೂ ಬೆಳ್ಳಗಾಗಲ್ಲ..

White Hair Best remedy: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ, ಕೂದಲಿನ ಸಮಸ್ಯೆಗಳು. ವಿಶೇಷವಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ.  
 

1 /7

ಇಲ್ಲಿಯವರೆಗೆ, ದೊಡ್ಡವರು ಮಾತ್ರ ಈ ಬಿಳಿಕೂದಲಿನ ಗೊಂದಲಕ್ಕೊಳಗಾಗಿದ್ದರು.. ಆದರೆ ಈಗ ಬಾಲ್ಯದಲ್ಲಿ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಚಿಕ್ಕ ವಯಸ್ಸಿನಲ್ಲಿ ದೊಡ್ಡವರಂತೆ ಕಾಣುತ್ತಾರೆ.      

2 /7

ಹಲವಾರು ಪ್ರಾಡಕ್ಟ್‌ ಬಳಸಿದ ಮೇಲೂ ಯಾವುದೇ ಫಲಿತಾಂಶ ಕಾಣದಿದ್ದವರು ಮನೆಯಲ್ಲೇ ಸುಲಭವಾದ ಮತ್ತು ನೈಸರ್ಗಿಕ ವಿಧಾನದಿಂದ ಪೇಸ್ಟ್ ಅನ್ನು ತಯಾರಿಸಿ ಬಳಸುವುದರಿಂದ ಕೂದಲಿನ ಸಮಸ್ಯೆಯಿಂದ ಬಹಳ ಸುಲಭವಾಗಿ ಮುಕ್ತಿ ಪಡೆಯಬಹುದು.     

3 /7

ವಾರಕ್ಕೊಮ್ಮೆ ಈ ಟಿಪ್ಸ್ ಬಳಸಿದರೆ ಕೂದಲು ಉದುರುವುದು ಕಡಿಮೆಯಾಗುವುದಲ್ಲದೆ ಆರೋಗ್ಯಕರ ಮತ್ತು ಉದ್ದವಾಗುವುದು. ಹಾಗಾದ್ರೆ ಆ ಸಲಹೆ ಏನು? ಈಗ ಅದನ್ನು ಹೇಗೆ ಬಳಸುವುದು ಎಂದು ತಿಳಿಯೋಣ.    

4 /7

ಬೇಕಾಗುವ ಪದಾರ್ಥಗಳು: ಭೃಂಗರಾಜ ಪುಡಿ – ಎರಡು ಚಮಚ, ಆಮ್ಲಾ ಪುಡಿ – ಎರಡು ಚಮಚ, ಮೊಸರು – ನಾಲ್ಕು ಚಮಚ.    

5 /7

ಹೇರ್ ಪ್ಯಾಕ್ ಮಾಡುವುದು ಹೇಗೆ:ಒಂದು ಬಟ್ಟಲಿನಲ್ಲಿ ಮೂರು ಚಮಚ ಭೃಂಗರಾಜ ಪುಡಿಯನ್ನು ತೆಗೆದುಕೊಳ್ಳಿ. ಅದರ ನಂತರ ಎರಡು ಚಮಚ ಆಮ್ಲಾ ಪುಡಿ ಮತ್ತು ನಾಲ್ಕು ಟೀ ಚಮಚ ಮೊಸರು ಸೇರಿಸಿ.. ಪೇಸ್ಟ್ ರೀತಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ಕೂದಲಿನ ಬೇರುಗಳಿಂದ ತುದಿಯವರೆಗೆ ಚೆನ್ನಾಗಿ ಹಚ್ಚಿ. ಈ ರೀತಿ ಮಾಡುವುದರಿಂದ ಕೂದಲು ದಟ್ಟವಾಗಿ ಉದ್ದವಾಗುವುದು.     

6 /7

ಬಹುತೇಕ ಎಲ್ಲಾ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳು ಮಾಯವಾಗುತ್ತವೆ. ಈ ಪ್ರತಿಯೊಂದು ಪದಾರ್ಥಗಳು ಕೂದಲಿಗೆ ಉತ್ತಮ ಪೋಷಣೆಯನ್ನು ಒದಗಿಸುತ್ತದೆ. ಈ ಪೇಸ್ಟ್ ಅನ್ನು ತಯಾರಿಸಿ ವಾರಕ್ಕೊಮ್ಮೆ ಬಳಸುವುದರಿಂದ ನಿಮ್ಮ ಕೂದಲು ಕಪ್ಪಾಗಿ, ಉದ್ದವಾಗಿ ಮತ್ತು ಹೊಳೆಯುತ್ತದೆ.    

7 /7

 ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.