Shoaib Akhtar on ICC: ಅಂತರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಚೆಂಡನ್ನು ಎಸೆದ ದಾಖಲೆಯನ್ನು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ಈಗಲೂ ಹೊಂದಿದ್ದಾರೆ. 2003ರ ವಿಶ್ವಕಪ್‌ಲ್ಲಿ ಇಂಗ್ಲೆಂಡ್ ವಿರುದ್ಧ ಗಂಟೆಗೆ 161.3 ಕಿಲೋಮೀಟರ್ ವೇಗದಲ್ಲಿ ಚೆಂಡನ್ನು ಎಸೆದ ಸಾಧನೆ ಮಾಡಿದರು. ಆದರೆ ಇದೀಗ ಈ ಮಾಜಿ ವೇಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದೀರಾ..? ಬ್ಲಡ್ ಶುಗರ್ ನಾರ್ಮಲ್ ಆಗಲು ಈ ಆಹಾರಗಳನ್ನ ಪ್ರತಿದಿನವೂ ಸೇವಿಸಿರಿ!!
"ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನನ್ನ ಪಾದಗಳನ್ನು ತೊಳೆದ ನೀರು ಕುಡಿಯಬೇಕು" ಎಂದು ಹೇಳಿದ್ದಾರೆ. TNKS ಪಾಡ್‌ಕ್ಯಾಸ್ಟ್‌ನಲ್ಲಿ, ʼಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗದ ಚೆಂಡಿನ ದಾಖಲೆಯನ್ನು ಯಾರಾದರೂ ಮುರಿಯಬಹುದೇ?ʼ ಎಂದು ಪ್ರಶ್ನೆ ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಇದು ಸಂಭವಿಸಬಹುದು ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.
"ನಾನು ಪ್ರಪಂಚದಾದ್ಯಂತದ ಆಟಗಾರರನ್ನು ಒಟ್ಟಾಗಿಸಿ ತರಬೇತಿ ನೀಡಿದರೆ, ನನ್ನ ದಾಖಲೆಯು 6 ತಿಂಗಳೊಳಗೆ ಮುರಿಯುವಂತೆ ಮಾಡಬಲ್ಲೆ. ಪ್ರಪಂಚದಾದ್ಯಂತ ಇರುವ ಎರಡು-ಮೂರು ಸಾವಿರ ಮಕ್ಕಳನ್ನು ಸಂಗ್ರಹಿಸಿ ಅವರಿಗೆ ಟ್ರೈನಿಂಗ್ ನೀಡುವಲ್ಲಿ ನಾನು ಯಶಸ್ವಿಯಾದರೆ, ನನ್ನ ದಾಖಲೆಯನ್ನು ನಾನು ಮುರಿಯುತ್ತೇನೆ. ಯುವ ಆಟಗಾರರು 160-170 ವರೆಗೆ ಹೋಗಬಹುದು. ಕನಿಷ್ಟಪಕ್ಷ ಗಂಟೆಗೆ 150, 140 ಮತ್ತು 145 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಹೆಚ್ಚಿನ ಸಂಖ್ಯೆಯ ವೇಗದ ಬೌಲರ್‌ಗಳನ್ನು ನಾನು ನಿಮಗೆ ನೀಡುತ್ತೇನೆ. ಆಗ ಭಾರತ-ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಅವಕಾಶ ನೀಡುತ್ತವೆಯೋ ಇಲ್ಲವೋ ಅದು ಅವರ ಆಯ್ಕೆಯಾಗಿದೆ" ಎಂದಿದ್ದಾರೆ.
ಇದನ್ನೂ ಓದಿ: ಧನುರ್ಮಾಸದಲ್ಲಿ ಸೂರ್ಯನಂತೆ ಪ್ರಜ್ವಲಿಸಲಿದೆ ಈ ರಾಶಿಯವರ ಬಾಳು, ಸೂರ್ಯ ದೇವನಿಂದ ಸುಖದ ಸುಪ್ಪತ್ತಿಗೆಯಲ್ಲೇ ಜೀವನ..!
"ಯಾರಾದರೂ ಬಂದು ನನ್ನ ದಾಖಲೆಯನ್ನು ಮುರಿಯಲಿ ಎಂದು ನಾನು ನಿಜವಾಗಿಯೂ ಬಯಸುತ್ತೇನೆ. ಒಂದು ವೇಳೆ ನಾನು ಐಸಿಸಿಗೆ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬೌಲರ್‌ನ್ನು ನೀಡಿದರೆ, ಐಸಿಸಿ ನನ್ನ ಪಾದಗಳನ್ನು ತೊಳೆದು ನೀರು ಕುಡಿಯಬೇಕು" ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು ʼಬೌಲರ್‌ಗಳನ್ನು ನೀಡುವುದಕ್ಕೂ, ಐಸಿಸಿ ಕಾಲು ತೊಳೆಯುವುದಕ್ಕೂ ಏನು ಸಂಬಂಧʼ ಎಂದು ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ