ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಎಷ್ಟು ಕೋಟಿಯ ಒಡೆಯರಾಗಿದ್ರು ಗೊತ್ತೇ? ಇವರ ಮೊದಲ ಸಂಭಾವನೆ ಕೇವಲ..

Zakir Hussain Net Worth: ಖ್ಯಾತ ತಬಲಾ ವಾದಕ ಮತ್ತು ಸಂಗೀತ ಸಂಯೋಜಕ ಉಸ್ತಾದ್ ಜಾಕಿರ್ ಹುಸೇನ್ ನಿಧನರಾಗಿದ್ದಾರೆ. ಇವರು ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ  ಪ್ರಪಂಚದಾದ್ಯಂತ ಛಾಪು ಮೂಡಿಸಿದ್ದಾರೆ.. 

Written by - Savita M B | Last Updated : Dec 16, 2024, 08:19 AM IST
  • ಖ್ಯಾತ ತಬಲಾ ವಾದಕ ಮತ್ತು ಸಂಗೀತ ಸಂಯೋಜಕ ಉಸ್ತಾದ್ ಜಾಕಿರ್ ಹುಸೇನ್ ನಿಧನರಾಗಿದ್ದಾರೆ
  • ಉಸ್ತಾದ್ ಜಾಕಿರ್ ಹುಸೇನ್ 1951 ರಲ್ಲಿ ಮುಂಬೈನಲ್ಲಿ ಜನಿಸಿದರು.
 ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಎಷ್ಟು ಕೋಟಿಯ ಒಡೆಯರಾಗಿದ್ರು ಗೊತ್ತೇ? ಇವರ ಮೊದಲ ಸಂಭಾವನೆ ಕೇವಲ.. title=

Zakir Hussain : ಖ್ಯಾತ ತಬಲಾ ವಾದಕ ಮತ್ತು ಸಂಗೀತ ಸಂಯೋಜಕ ಉಸ್ತಾದ್ ಜಾಕಿರ್ ಹುಸೇನ್ ನಿಧನರಾಗಿದ್ದಾರೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಜಾಕಿರ್ ಹುಸೇನ್ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಕೊನೆಯುಸಿರೆಳೆದಿದ್ದಾರೆ. ಹುಸೇನ್ ಅವರಿಗೆ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಯಿತು.

ಹುಸೇನ್ ತಮ್ಮ ಮೊದಲ ಪ್ರದರ್ಶನಕ್ಕೆ ಕೇವಲ 5 ರೂ. ಸಂಭಾವನೆ ಪಡೆದಿದ್ದರು.. ಆ ಸಮಯದಲ್ಲಿ ಅವರ ತಂದೆ ಉಸ್ತಾದ್ ಅಲ್ಲಾ ರಖ್ ಅವರು ಸಹ ಪ್ರಸಿದ್ಧ ತಬಲಾ ವಾದಕರಾಗಿದ್ದರು. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಜಾಕೀರ್ ಪ್ರಪಂಚದಾದ್ಯಂತ ದೊಡ್ಡ ಛಾಪನ್ನು ಮೂಡಿಸಿದರು.. 

ಇದನ್ನೂ ಓದಿ-ಅಭಿಷೇಕ್‌ ಜೊತೆಗಿನ ವಿಚ್ಚೇದನ ವದಂತಿ ಮಧ್ಯ ಮುಂಬೈ ಬೀದಿಗಳಲ್ಲಿ ಐಶ್ವರ್ಯ-ಸಲ್ಮಾನ್‌ ಖಾನ್‌ ಸುತ್ತಾಟ!‌ ಪೋಟೋ ನೋಡಿ ಬೆಚ್ಚಿಬಿದ್ದ ಫ್ಯಾನ್ಸ್!!‌

ಜಾಕಿರ್ ಹುಸೇನ್ ಸುಮಾರು ರೂ.8 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಅವರು ಸುಮಾರು 10 ಲಕ್ಷ ಡಾಲರ್ ಮತ್ತು ಸುಮಾರು 8 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಅವರು ತಮ್ಮ ಒಂದು ಮ್ಯೂಸಿಕ್‌ ಕನ್ಸರ್ಟ್‌ಗೆ ಸುಮಾರು 5 ರಿಂದ 10 ಲಕ್ಷ ರೂಪಾಯಿಗಳನ್ನು ಪಡೆಯುತ್ತಿದ್ದರು.

ಉಸ್ತಾದ್ ಜಾಕಿರ್ ಹುಸೇನ್ 1951 ರಲ್ಲಿ ಮುಂಬೈನಲ್ಲಿ ಜನಿಸಿದರು. ಇವರನ್ನು ವಿಶ್ವದ ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಭಾರತೀಯ ಶಾಸ್ತ್ರೀಯ ಸಂಗೀತಕ್ಕೆ ಅವರ ಕೊಡುಗೆ ಅಪಾರ. ಜಾಕಿರ್ ಹುಸೇನ್ ಅವರ ಅಸಾಧಾರಣ ಪ್ರತಿಭೆಯು ಹಲವಾರು ವರ್ಷಗಳಿಂದ ಅವರಿಗೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಭಾರತ ಸರ್ಕಾರ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. 1999 ರಲ್ಲಿ US ನ್ಯಾಷನಲ್ ಎಂಡೋಮೆಂಟ್ ಫಾರ್ ದಿ ಆರ್ಟ್ಸ್‌ನಿಂದ ನ್ಯಾಷನಲ್ ಹೆರಿಟೇಜ್ ಫೆಲೋಶಿಪ್ ನೀಡಿದಾಗ ಜಾಕಿರ್ ಹುಸೇನ್ ಭಾರತೀಯ ಶಾಸ್ತ್ರೀಯ ಸಂಗೀತದ ಜಾಗತಿಕ ರಾಯಭಾರಿಯಾಗಿ ಗುರುತಿಸಲ್ಪಟ್ಟರು.

ಇದನ್ನೂ ಓದಿ-ವಿಶ್ವವಿಖ್ಯಾತ ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ಆರೋಗ್ಯ ಸ್ಥಿತಿ ಗಂಭೀರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News