Sandalwood BoX office Sultan: ಕೆಜಿಎಫ್ ಹೀರೋ ಯಶ್, ಕಿಚ್ಚ ಸುದೀಪ್, ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್, ರಿಷಬ್ ಶೆಟ್ಟಿ ಮತ್ತಿತರರಿಗಿಂತಲೂ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಬೇಡಿಕೆ ಇರುವುದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ. ಅವರ ವೈಯಕ್ತಿಕ ಬದುಕಿನಲ್ಲಾದ ಕಹಿ ಘಟನೆಯ ಹೊರತಾಗಿಯೂ ದಾಸ ದರ್ಶನ್ ತೂಗುದೀಪ ಅಭಿಮಾನಿಗಳ ಪಾಲಿಗೆ ಇವತ್ತಿಗೂ ಹಾಟ್ ಫೇವರಿಟ್ ಹೀರೋ ಆಗಿದ್ದಾರೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗುವ ಮುನ್ನ ಚಾಲೆಂಜಿಗ್ ಸ್ಟಾರ್ ದರ್ಶನ್ ಬಳಿ ಬರೋಬ್ಬರಿ 14 ಚಿತ್ರಗಳಿದ್ದವು. ಆ ಪೈಕಿ ‘ಡೆವಿಲ್’ ಸಿನಿಮಾದ ಚಿತ್ರೀಕರಣ ಬಹುತೇಕ ಮುಗಿದಿತ್ತು. ತದನಂತರ ಇನ್ನಿತರ ಸಿನಿಮಾಗಳ ಕೆಲಸ ಶುರುವಾಗಬೇಕಿತ್ತು. ಈ ನಡುವೆ ಅವರು ಜೈಲಿಗೆ ಹೋಗಿದ್ದರಿಂದ ಅವರ ಸಿನಿಮಾ ಪ್ರಾಜೆಕ್ಟ್ ಗಳು ನೆನೆಗುದಿಗಿ ಬಿದ್ದಿದ್ದವು. 7 ತಿಂಗಳ ನಂತರ ದರ್ಶನ್ ಅವರಿಗೆ ರೆಗ್ಯುಲರ್ ಬೇಲ್ ಸಿಕ್ಕಿದ್ದು ‘ಡೆವಿಲ್’ ನಂತರ ಯಾವ ಸಿನಿಮಾ ಸೆಟ್ಟೇರಬಹುದು ಎನ್ನುವ ಕುತೂಹಲ ಹುಟ್ಟುಕೊಂಡಿದೆ.
ಇದನ್ನೂ ಓದಿ- ‘ಪುಷ್ಪಾ-3 ದಿ ರಾಂಪೇಜ್’ ಚಿತ್ರದಿಂದ ಅಲ್ಲು ಅರ್ಜುನ್ ಔಟ್!: ಸಕ್ಸಸ್ ಫುಲ್ ಹೀರೋ ಚೇಂಜ್ ಮಾಡ್ತಿರೋದೇಕೆ ನಿರ್ದೇಶಕ ಸುಕುಮಾರ್?
ಬೆನ್ನು ನೋವಿನಿಂದ ಬಳಲುತ್ತಾ ಫಿಜಿಯೋಥೆರಪಿ ಪಡೆಯುತ್ತಿರುವ ದರ್ಶನ್ ಮೊದಲಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ನಂತರ ತರುಣ್ ಸುದೀರ್ ನಿರ್ದೇಶನದ ‘ಸಿಂಧೂರ ಲಕ್ಷ್ಮಣ’ದ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಏಕೆಂದರೆ ಕಳೆದ ವರ್ಷ ಬಿಡುಗಡೆಯಾಗಿದ್ದ ತರುಣ್ ಸುದೀರ್ ನಿರ್ದೇಶನದ ‘ಕಾಟೇರ’ ಸಿನಿಮಾ ಗಲ್ಲಪೆಟ್ಟಿಗೆಯನ್ನು ಉಡೀಸ್ ಮಾಡಿತ್ತು.
ಇದನ್ನೂ ಓದಿ- ‘ಪುಷ್ಪಾ-3 ದಿ ರಾಂಪೇಜ್’ ಚಿತ್ರದಿಂದ ಅಲ್ಲು ಅರ್ಜುನ್ ಔಟ್!: ಸಕ್ಸಸ್ ಫುಲ್ ಹೀರೋ ಚೇಂಜ್ ಮಾಡ್ತಿರೋದೇಕೆ ನಿರ್ದೇಶಕ ಸುಕುಮಾರ್?
ದರ್ಶನ್ ಅವರು ಒಟ್ಟು 14 ಸಿನಿಮಾಗಳನ್ನು ಒಪ್ಪಿಕೊಂಡು ಎಲ್ಲಾ ನಿರ್ಮಾಪಕರಿಂದ 2 ರಿಂದ 3 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದಿದ್ದಾರೆ. ವರ್ಷಕ್ಕೆ ಮೂರು ಸಿನಿಮಾ ಮುಗಿಸಿದರೂ ಒಪ್ಪಿಕೊಂಡಿರುವ 14 ಸಿನಿಮಾಗಳು ಬಿಡುಗಡೆ ಆಗಲು ಕನಿಷ್ಠ 5 ವರ್ಷ ಬೇಕು. ಅಷ್ಟರಮಟ್ಟಿಗೆ ದರ್ಶನ್ ಬ್ಯುಸಿಯಾಗಿದ್ದಾರೆ. ದರ್ಶನ್ ಮೇಲಿನ ಕ್ರೇಜು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು ಇನ್ನಷ್ಟು ಸಿನಿಮಾಗಳ ಆಫರ್ ಬರಬಹುದು. ಹಾಗಾಗಿ ಇವತ್ತಿಗೂ ಕನ್ನಡದಲ್ಲಿ ಅತ್ಯಂತ ಬೇಡಿಕೆ ಇರುವ ಹೀರೋ ಎಂದರೆ ಅದು ದರ್ಶನ್ ಎನ್ನುತ್ತವೆ ಗಾಂಧಿ ನಗರದ ಮೂಲಗಳು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.