ಕಪ್ಪು ದಾರ, ಹಳದಿ ಕರವಸ್ತ್ರ ಇಲ್ಲದೆ ಮೈದಾನಕ್ಕೆ ಇಳಿಯುತ್ತಿರಲಿಲ್ಲವಂತೆ ಈ ದಿಗ್ಗಜ್ಜ !ಕ್ರಿಕೆಟ್ ಅಂಗಣದಲ್ಲೂ ಶಕುನದ ಮಹಿಮೆ

ಶ್ರಮದ ಜೊತೆಗೆ ಶಕುನಕ್ಕೂ ಆದ್ಯತೆ ನೀಡಿ ಆಟಕ್ಕೆ ಇಳಿಯುತ್ತಿದ್ದ ಭಾರತೀಯ ಕ್ರಿಕೆಟ್‌ನ 5 ಲೆಜೆಂಡರಿ ಕ್ರಿಕೆಟಿಗರಿದ್ದಾರೆ.  

Written by - Ranjitha R K | Last Updated : Dec 3, 2024, 11:56 AM IST
  • ಕಠಿಣ ಪರಿಶ್ರಮ ಮಾತ್ರವಲ್ಲದೆ ಕೆಲವು ವಿಚಿತ್ರ ಶಕುನಗಳಿಗೂ ಮನ್ನಣೆ ನೀಡುವ ದಿಗ್ಗಜ್ಜರು
  • ಕ್ರಿಕೆಟ್ ಮೈದಾನಕ್ಕೆ ಇಳಿಯುವ ಮುನ್ನ ಕೆಲವು ಕಾರ್ಯಗಳನ್ನು ಮಾಡುತ್ತಾರೆ.
  • ಆಟಕ್ಕೆ ಇಳಿಯುತ್ತಿದ್ದ ಭಾರತೀಯ ಕ್ರಿಕೆಟ್‌ನ 5 ಲೆಜೆಂಡರಿ ಕ್ರಿಕೆಟಿಗರಿದ್ದಾರೆ.
ಕಪ್ಪು ದಾರ, ಹಳದಿ ಕರವಸ್ತ್ರ ಇಲ್ಲದೆ ಮೈದಾನಕ್ಕೆ ಇಳಿಯುತ್ತಿರಲಿಲ್ಲವಂತೆ ಈ ದಿಗ್ಗಜ್ಜ !ಕ್ರಿಕೆಟ್ ಅಂಗಣದಲ್ಲೂ ಶಕುನದ ಮಹಿಮೆ  title=

ಭಾರತೀಯ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಶ್ರೇಷ್ಠನಾಮರು ಸಾಕಷ್ಟು ಹೆಸರು ಗಳಿಸಿದ್ದಾರೆ.ಆದರೆ ಈ ಎಲ್ಲಾ ದಿಗ್ಗಜ್ಜರು ತಮ್ಮ ಕಠಿಣ ಪರಿಶ್ರಮ ಮಾತ್ರವಲ್ಲದೆ ಕೆಲವು ವಿಚಿತ್ರ ಶಕುನಗಳಿಗೂ  ಮನ್ನಣೆ ನೀಡುತ್ತಾರೆ. ತಮ್ಮ ಅದೃಷ್ಟ ಜೊತೆಗಿರಲಿ ಎನ್ನುವ ಕಾರಣಕ್ಕೆ ಕ್ರಿಕೆಟ್ ಮೈದಾನಕ್ಕೆ ಇಳಿಯುವ ಮುನ್ನ ಕೆಲವು ಕಾರ್ಯಗಳನ್ನು ಮಾಡುತ್ತಾರೆ. ಈ ರೀತಿ ಶ್ರಮದ ಜೊತೆಗೆ ಶಕುನಕ್ಕೂ ಆದ್ಯತೆ ನೀಡಿ ಆಟಕ್ಕೆ ಇಳಿಯುತ್ತಿದ್ದ ಭಾರತೀಯ ಕ್ರಿಕೆಟ್‌ನ 5 ಲೆಜೆಂಡರಿ ಕ್ರಿಕೆಟಿಗರಿದ್ದಾರೆ.

ಸಚಿನ್ ತೆಂಡೂಲ್ಕರ್: ಕ್ರಿಕೆಟ್ ದೇವರು ಎನಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಹೆಸರು ದಾಖಲೆ ಪುಸ್ತಕಗಳಲ್ಲಿ ಅಗ್ರಸ್ಥಾನದಲ್ಲಿದೆ. ಇವರು ಆಟದ ಮೈದಾನಕ್ಕೆ ಇಳಿಯುವ ಮುನ್ನ ಪ್ಯಾಡ್ ಕಟ್ಟಿಕೊಳ್ಳುವಾಗ ಮೊದಲು ಯಾವಾಗಲೂ ಎಡ ಪ್ಯಾಡನ್ನೇ ಕಟ್ಟುತ್ತಿದ್ದರು. ಇದು ಅವರಿಗೆ ಅದೃಷ್ಟ ಎನ್ನುವ ನಂಬಿಕೆ ಹೊಂದಿದ್ದರಂತೆ. ಹಾಗಾಗಿ ಪಂದ್ಯ ಯಾವುದೇ ಇರಲಿ ಎಲ್ಲಿಯೇ ಇರಲಿ ಇವರು  ಪಂದ್ಯದ ಮೊದಲು ಎಡ ಪ್ಯಾಡ್ ಅನ್ನೇ ಮೊದಲು ಕಟ್ಟುತ್ತಿದ್ದರು. 

ಇದನ್ನೂ ಓದಿ : ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗೂ ಮುನ್ನ ಪಿಚ್‌ ಫೋಟೋ ವೈರಲ್‌! ಹೇಗಿದೆ ನೋಡಿ ಅಡಿಲೇಡ್‌ ಗ್ರೌಂಡ್‌... ಈ ಮೈದಾನ ಯಾರಿಗೆ ಸ್ನೇಹಿ?

ವಿರಾಟ್ ಕೊಹ್ಲಿ : ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಗೆ ಒಂದು ಜೋಡಿ ಗ್ಲೌಸ್ ಅದೃಷ್ಟವಾಗಿ ಸಾಬೀತಾಗಿತ್ತಂತೆ. ಹಾಗಾಗಿ ಆ ಗ್ಲೌಸ್ ಎಂದರೆ ಕೊಹ್ಲಿಗೆ ಅಪಾರವಾದ ವ್ಯಾಮೋಹ. ಅತಿ ಹೆಚ್ಚು ಬಳಸಿರುವ ಕಾರಣ ಈ ಗ್ಲೌಸ್  ಹರಿದುಹೋಗುವುದಕ್ಕೆ ಪ್ರಾರಂಭಿಸಿದ ಕಾರಣ ಬಹಳ ಒತ್ತಡ ಹೇರಿ ಈ ಗ್ಲೌಸ್ ಬದಲಿಸಲು ಮನವೊಲಿಸಲಾಗಿತ್ತಂತೆ.

ಎಂಎಸ್ ಧೋನಿ: ಭಾರತಕ್ಕೆ ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದಿರುವ ಕ್ಯಾಪ್ಟನ್ ಕೂಲ್ ಅಂದರೆ ಎಂಎಸ್ ಧೋನಿಗೆ ನಂಬರ್ 7 ಅದೃಷ್ಟದ ಸಂಖ್ಯೆ. ಹಾಗಾಗಿ ಅವರ ಜರ್ಸಿ ಸಂಖ್ಯೆಯೂ ಏಳು. ಈ ಸಂಖ್ಯೆಯನ್ನು ಧೋನಿ ಅದೃಷ್ಟ ಎನ್ನುವುದು ಅವರ ನಂಬಿಕೆ. ಇಲ್ಲಿಯವರೆಗೆ ಮಾಹಿ ಭಾರತದ ಅತ್ಯಂತ ಯಶಸ್ವಿ ನಾಯಕ. 

ಯುವರಾಜ್ ಸಿಂಗ್: ಒಂದು ಓವರ್‌ನಲ್ಲಿ 6 ಸಿಕ್ಸರ್‌ಗಳ ದಾಖಲೆ ಮಾಡಿದ ಸ್ಫೋಟಕ ಯುವರಾಜ್ ಸಿಂಗ್‌ಗೆ ಕಪ್ಪು ದಾರ ಶುಭವಾಗಿತ್ತು. ಪಂದ್ಯದ ವೇಳೆ ಅವರು ತಮ್ಮ ಮಣಿಕಟ್ಟಿನ ಮೇಲೆ ಕಪ್ಪು ದಾರವನ್ನು ಧರಿಸುತ್ತಿದ್ದರು. ಯುವರಾಜ್ ಅವರ ಜನ್ಮದಿನವು ಡಿಸೆಂಬರ್ 12 ಆಗಿದ್ದು, ಇದೇ ಸಂಖ್ಯೆ ಅವರಿಗೆ ಲಕ್ಕಿ ಅಂತೆ. ಹಾಗಾಗಿ ಅವರ ಜರ್ಸಿ ಸಂಖ್ಯೆ ಕೂಡಾ 12.  

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಜಹೀರ್ ಖಾನ್: ಭಾರತದ ಮಾಜಿ ಬೌಲರ್ ಜಹೀರ್ ಖಾನ್‌ಗೆ ಹಳದಿ ಕರವಸ್ತ್ರ ಅದೃಷ್ಟವಾಗಿತ್ತು.ಈ ಕರವಸ್ತ್ರವನ್ನು ಜೇಬಿನಲ್ಲಿ ಇಟ್ಟುಕೊಂಡೆ ಅಂಗಣಕ್ಕೆ  ಇಳಿಯುತ್ತಿದ್ದರು. ಒಂದು ಕಾಲದಲ್ಲಿ ಜಹೀರ್ ಖಾನ್ ಟೀಂ ಇಂಡಿಯಾದ ಬೆನ್ನೆಲುಬಾಗಿ ನಿಂತಿದ್ದ ಬೌಲರ್. ಅವರ ಆಕ್ರಮಣಕಾರಿ ಬೌಲಿಂಗ್‌ನಿಂದಲೇ  ಭಾರತ ಅನೇಕ ಪಂದ್ಯಗಳಲ್ಲಿ ಗೆಲುವಿನ ದಡ ಸೇರಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News