ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರ !ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ !ನಾಮಿನಿಯಿಂದ ಎಫ್‌ಡಿವರೆಗೂ ರೂಲ್ಸ್ ಚೇಂಜ್

ಗ್ರಾಹಕರ ಅನುಕೂಲಕ್ಕಾಗಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಈ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ. ಇದರೊಂದಿಗೆ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. 

Written by - Ranjitha R K | Last Updated : Dec 4, 2024, 01:10 PM IST
  • ಬ್ಯಾಂಕಿಂಗ್ ತಿದ್ದುಪಡಿ ಮಸೂದೆ 2024 ಲೋಕಸಭೆಯಲ್ಲಿ ಅಂಗೀಕಾರ
  • 19 ತಿದ್ದುಪಡಿಗಳ ಬಗ್ಗೆ ಚರ್ಚಿಸಿದ ನಿರ್ಮಲಾ ಸೀತಾರಾಮನ್
  • ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆ
ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಮಸೂದೆ ಅಂಗೀಕಾರ !ಬ್ಯಾಂಕಿಂಗ್ ನಿಯಮಗಳಲ್ಲಿ ಬದಲಾವಣೆ !ನಾಮಿನಿಯಿಂದ ಎಫ್‌ಡಿವರೆಗೂ ರೂಲ್ಸ್ ಚೇಂಜ್  title=

ಬ್ಯಾಂಕಿಂಗ್ ತಿದ್ದುಪಡಿ ಮಸೂದೆ 2024 ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟಿದೆ. ಮಸೂದೆಯನ್ನು ಮಂಡಿಸುವಾಗ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅದರ 19 ತಿದ್ದುಪಡಿಗಳ ಬಗ್ಗೆ ಚರ್ಚಿಸಿದರು. ಈ ಮಸೂದೆ ಅಂಗೀಕಾರವಾದ ಹಿನ್ನೆಲೆಯಲ್ಲಿ  ಬ್ಯಾಂಕ್ ಖಾತೆಯಿಂದ FDವರೆಗೆ ಅನೇಕ ರೀತಿಯ ಬದಲಾವಣೆಗಳಾಗಳಿವೆ. ಗ್ರಾಹಕರ ಅನುಕೂಲಕ್ಕಾಗಿ ಮತ್ತು ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸಲು ಈ ತಿದ್ದುಪಡಿಯನ್ನು ಅಂಗೀಕರಿಸಲಾಗಿದೆ.ಇದರೊಂದಿಗೆ ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಆಗಲಿವೆ. 

 4 ನಾಮಿನಿ : 
ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ 2024 ತಿದ್ದುಪಡಿ ಪ್ರಕಾರ ಖಾತೆದಾರರು ತಮ್ಮ ಬ್ಯಾಂಕ್ ಖಾತೆ ಮತ್ತು ಎಫ್‌ಡಿಯಲ್ಲಿ 4 ನಾಮಿನಿಗಳನ್ನು ಸೇರಿಸುವ ಹಕ್ಕನ್ನು ಪಡೆಯುತ್ತಾರೆ.ಇಲ್ಲಿಯವರೆಗೆ ನಿಮ್ಮ ಎಫ್‌ಡಿ ಖಾತೆಯಲ್ಲಿ ಒಬ್ಬ ನಾಮಿನಿಯನ್ನು ಮಾತ್ರ ಸೇರಿಸಬಹುದಾಗಿತ್ತು. 

ಇದನ್ನೂ ಓದಿ : Business Idea: ಚಳಿಗಾಲದಲ್ಲಿ ಕೇವಲ 4 ರಿಂದ 5 ಗಂಟೆ ಕೆಲಸ ಮಾಡಿ, ಕೈ ತುಂಬಾ ಹಣ ಸಂಪಾದಿಸಿ!

ನಾಮಿನಿಯನ್ನು ಸೇರಿಸಲು ಈ ಎರಡು ಆಯ್ಕೆಗಳು ಲಭ್ಯ : 
 ತಮ್ಮ ಖಾತೆಯ ನಾಮಿನಿಯನ್ನು ಸೇರಿಸಲು ಎರಡು ವಿಧಾನಗಳು ಇರುತ್ತವೆ. ಮೊದಲ ವಿಧಾನದ ಅಡಿಯಲ್ಲಿ, ಎಲ್ಲಾ ನಾಮಿನಿಗಳಿಗೆ ನಿಗದಿತ ಪಾಲನ್ನು ನೀಡಬೇಕು. ಅಂದರೆ ಯಾರಿಗೆ ಎಷ್ಟು ಪಾಲು ಸಿಗಬೇಕು ಎನ್ನುವುದನ್ನು ಮೊದಲೇ ನಿರ್ಧರಿಸಬಹುದು.ಅದಕ್ಕೆ ತಕ್ಕಂತೆ ಅವರ ಹೆಸರುಗಳನ್ನು ಸೇರಿಸಬಹುದು.ಎರಡನೇ ವಿಧಾನದಲ್ಲಿ ಎಲ್ಲರಿಗೂ ಒಂದೇ ಸಮನದಾ ಮೊತ್ತಸಿಗಲಿದೆ. ಈ ಎರಡರಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಬಹುದು. 

ಹೊಸ ಮಸೂದೆಯ ಪ್ರಕಾರ, ಈಗ ಕೇಂದ್ರ ಸಹಕಾರ ಬ್ಯಾಂಕ್‌ನ ನಿರ್ದೇಶಕರು ರಾಜ್ಯ ಸಹಕಾರ ಬ್ಯಾಂಕ್‌ನಲ್ಲಿಯೂ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಸೂದೆಯಲ್ಲಿ ಸಹಕಾರಿ ಬ್ಯಾಂಕ್‌ಗಳ ನಿರ್ದೇಶಕರ ಅವಧಿಯನ್ನು 8 ವರ್ಷದಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ. ಆದರೆ ಈ ನಿಯಮವು ಅಧ್ಯಕ್ಷರು ಮತ್ತು ಪೂರ್ಣ ಸಮಯದ ನಿರ್ದೇಶಕರಿಗೆ ಅನ್ವಯಿಸುವುದಿಲ್ಲ.ಈ ಮಸೂದೆಯ ಅಡಿಯಲ್ಲಿ, ಲೆಕ್ಕಪರಿಶೋಧಕರ ಶುಲ್ಕವನ್ನು ನಿರ್ಧರಿಸುವ ಮತ್ತು ಉನ್ನತ ಮಟ್ಟದ ಪ್ರತಿಭಾವಂತರನ್ನು ನೇಮಿಸಿಕೊಳ್ಳುವ ಹಕ್ಕನ್ನು ಸರ್ಕಾರಿ ಬ್ಯಾಂಕ್‌ಗಳು ಪಡೆಯುತ್ತವೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ವರದಿಗಳನ್ನು ನೀಡುವ ನಿಯಮಗಳು ಬದಲಾಗುತ್ತವೆ  :  
ಹೊಸ ನಿಯಮದ ಪ್ರಕಾರ, ಬ್ಯಾಂಕ್‌ಗಳು ಆರ್‌ಬಿಐಗೆ ವರದಿ ಸಲ್ಲಿಸುವ ಸಮಯ ಮಿತಿಯನ್ನು ಬದಲಾಯಿಸಲಾಗಿದೆ. ಈಗ ಬ್ಯಾಂಕ್‌ಗಳು 15 ದಿನಗಳು, ಒಂದು ತಿಂಗಳು ಮತ್ತು ತ್ರೈಮಾಸಿಕದ ಕೊನೆಯಲ್ಲಿ ಆರ್‌ಬಿಐಗೆ ವರದಿಗಳನ್ನು ಸಲ್ಲಿಸಬಹುದು. ಪ್ರಸ್ತುತ ಬ್ಯಾಂಕ್‌ಗಳು ಪ್ರತಿ ಶುಕ್ರವಾರ ಆರ್‌ಬಿಐಗೆ ವರದಿಗಳನ್ನು ನೀಡಬೇಕಾಗಿತ್ತು.  

ಸಂರಕ್ಷಣಾ ನಿಧಿಗೆ ವರ್ಗಾಯಿಸುವ ಸೌಲಭ್ಯ : 
ಇದರ ಹೊರತಾಗಿ, ಹೊಸ ಮಸೂದೆಯ ಅಡಿಯಲ್ಲಿ, 7 ವರ್ಷಗಳವರೆಗೆ ಕ್ಲೈಮ್ ಮಾಡದ ಲಾಭಾಂಶ, ಷೇರುಗಳು, ಬಡ್ಡಿ ಮತ್ತು ಪ್ರಬುದ್ಧ ಬಾಂಡ್‌ಗಳ ಮೊತ್ತವನ್ನು ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಗೆ ವರ್ಗಾಯಿಸಲಾಗುತ್ತದೆ.     

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News