ಬೆಂಗಳೂರು : ವಾಲ್ಮೀಕಿ ನಿಗಮದ ಹಗರಣದ ತನಿಖೆ ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಲಾಕ್ ಆಗಿರುವ ನಾಗೇಂದ್ರ ಇಡಿ ಅ ಅಧಿಕಾರಿಗಳ ಪ್ರಶ್ನೆಗೆ ಥಂಡಾ ಹೊಡೆದಿದ್ದಾರೆ. ಬಂಧನ ಭೀತಿಯಿಂದ ಶಾಸಕ ದದ್ದಲ್ ಎಸ್ಕೇಪ್ ಆಗಿದ್ದಾರೆ. ಹಾಗಾದ್ರೆ ತನಿಖೆಯಲ್ಲಿ ಇವತ್ತು ಏನೆಲ್ಲಾ ಡೆವಲಪ್ಮೆಂಟ್ ಇಲ್ಲಿದೆ ನೋಡಿ.
ಮಾಜಿ ಸಚಿವ ನಾಗೇಂದ್ರರಿಗೆ ಸುಧಾರಿಸಿಕೊಳ್ಳೋಕು ಬಿಡದ ರೀತಿಯಲ್ಲಿ ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಾಗೇಂದ್ರ ಹಾಗೂ ಅವರ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಕಳೆದ ಒಂದು ವರ್ಷದ ಹಣದ ವ್ಯವಹಾರದ ವಿವರಗಳನ್ನ ಪಡೆದಿರುವ ಇ.ಡಿ ಅಧಿಕಾರಿಗಳು, ಅವುಗಳನ್ನ ಮುಂದಿಟ್ಟು ಪ್ರಶ್ನಿಸುತ್ತಿದ್ದಾರೆ. ಆದರೆ ನಾಗೇಂದ್ರ ಅವರು ಮಾತ್ರ 'ತನಗೇನು ಗೊತ್ತಿಲ್ಲ, ವಕೀಲರೊಂದಿಗೆ ಮಾತನಾಡಬೇಕು'ಎಂದು ಉತ್ತರಿಸುತ್ತಿದ್ದಾರೆ. ಮತ್ತೊಂದೆಡೆ ನ್ಯಾಯಾಂಗ ಬಂಧನದಲ್ಲಿರುವ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನನ್ನು ವಿಚಾರಣೆ ನಡೆಸಿರುವ ಇ.ಡಿ ಅಧಿಕಾರಿಗಳು ಆರೋಪಿಗಳಾದ ನೆಕ್ಕುಂಟಿ ನಾಗರಾಜ್, ನಾಗೇಂದ್ರ ಸಂಬಂಧಿ ನಾಗೇಶ್ವರ್ ರಾವ್ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ್ ನಗರದ ಖಾಸಗಿ ಹೋಟೆಲ್ನಲ್ಲಿ ಮಾತುಕತೆ ನಡೆಸಿದ್ದುದರ ಕುರಿತು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ:ಕಾವೇರಿ ನೀರು ನಿರ್ವಹಣಾ ಸಮಿತಿಯ ತೀರ್ಮಾನ ಪ್ರಶ್ನಿಸಿ ಮೇಲ್ಮನವಿ : ಡಿಸಿಎಂ
ಯೆಸ್ ಕಳೆದ ಜನವರಿಯಲ್ಲಿ ಸರ್ಕಾರದಿಂದ ಯೂನಿಯನ್ ಬ್ಯಾಂಕ್ನ ಹೊಸ ಖಾತೆಗೆ ಹಣ ವರ್ಗಾವಣೆ ಮಾಡಲಾಗಿತ್ತು. ಜನವರಿ ಮತ್ತು ಫೆಬ್ರವರಿಯಲ್ಲಿ ಹೈದರಾಬಾದ್ ಫಸ್ಟ್ ಬ್ಯಾಂಕ್ ನಲ್ಲಿ 18 ನಕಲಿ ಖಾತೆಗಳು ಓಪನ್ ಮಾಡಲಾಗಿತ್ತು. ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ 18 ನಕಲಿ ಖಾತೆಗಳಿಗೆ 89 ಕೋಟಿ ಹಣ ವರ್ಗಾವಣೆಯಾಗಿದೆ. ಕಳೆದ ಮೇ 7 ರಂದು ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಗೂ ಒಂದು ದಿನ ಮುಂಚೆ ಅಂದ್ರೆ ಮೇ 6 ರಂದು ಕೂಡ ಒಂದು ನಕಲಿ ಖಾತೆಗೆ 5 ಕೋಟಿ ವರ್ಗಾವಣೆ ಆಗಿತ್ತು. ಒಟ್ಟಾರೆ ಮೇ 7ಕ್ಕಿಂತ ಮುನ್ನ ನಿಗಮದ ಹಣ ಅಕ್ರಮವಾಗಿ ಆರೋಪಿಗಳ ಕೈ ಸೇರಿತ್ತು. ಇದೇ ಹಣದಲ್ಲೇ ನಾಗೇಂದ್ರರಿಂದ 20.19 ಕೋಟಿ ರೂ. ಹಣ ಚುನಾವಣೆಗೆ ಬಳಕೆ ಆರೋಪ ಚುನಾವಣೆಗೂ ಮುನ್ನವೇ ಹಣ ವರ್ಗಾವಣೆ ಆಗಿರೋದು ಇಡಿ ಆರೋಪಕ್ಕೆ ಪುಷ್ಟಿ ನೀಡ್ತಿದೆ.
ಇನ್ನು ಬಂಧನದ ಭೀತಿಯಿಂದ ಎಸ್ಕೇಪ್ ಆಗಿರುವ ಬಸನಗೌಡ ದದ್ದಲ್ ರನ್ನ ಇಡಿ ಹುಡುಕಾಟ ನಡೆಸುತ್ತಿದೆ. ಶಾಸಕ ಮಂತ್ರಾಲಯಕ್ಕೆ ತೆರಳಿದ್ದಾರೆಂಬ ಮಾಹಿತಿ ಕೂಡ ಇದೆ. ಈಗಾಗಲೇ ಅವರ ಬ್ಯಾಕ್ ಗ್ರೌಂಡ್ ಗಳ ಪರಿಶಿಲನೆ ನಡೆಸಿರುವ ಇಡಿ ಅಧಿಕಾರಿಗಳಿಗೆ, ಕಳೆದ ಜೂನ್ 27 ರಂದು ತನ್ನ ಪುತ್ರ ತ್ರಿಶೂಲ್ ಗೆ ರಾಯಚೂರಿನ ಗಣದಿನ್ನಿ ಬಳಿ 4 ಎಕರೆ 31 ಗುಂಟೆ ಜಮೀನು ಖರೀದಿ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಅದೇ ರೀತಿ ದದ್ದಲ್ ಕುಟುಂಬ ಕಳೆದೊಂದು ವರ್ಷದಲ್ಲಿ ಎಷ್ಟು ಆಸ್ತಿಗಳನ್ನ ಖರೀದಿ ಮಾಡಿದ್ದಾರೆಂಬ ಮಾಹಿತಿಯನ್ನ ಕಲೆ ಹಾಕುತ್ತಿದೆ ಇಡಿ. ಅದೇ ರೀತಿ ದದ್ದಲ್ ಕುಟುಂಬಸ್ಥರು ನೆಲೆಸಿರುವ ಆಯಾ ಭಾಗದ ಸಬ್ ರಿಜಿಸ್ಟರ್ ಆಫೀಸಿನಲ್ಲಿ ಮಾಹಿತಿ ಕಲೆ ಹಾಕುವ ಕೆಲಸವನ್ನ ಇಡಿ ಗೌಪ್ಯವಾಗಿ ಮಾಡ್ತಿದೆ. ದದ್ದಲ್ ನ ವಿಚಾರಣೆ ಇಡಿಗೆ ಅಗತ್ಯವಿದೆ. ಹೀಗಾಗಿ ಆದಷ್ಟು ಬೇಗ ಇಡಿ ತನ್ನ ವಶಕ್ಕೆ ಪಡೆಯಲಿದೆ. ಸದ್ಯ ಇಡಿ ಅಧಿಕಾರಿಗಳು ಈಗಾಗಲೆ ರಾಯಚೂರಿನಲ್ಲಿ ಬೀಡುಬಿಟ್ಟಿದ್ದು, ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.