Basic Salary Hike: ತುಟ್ಟಿಭತ್ಯೆ ಹೆಚ್ಚಳ ಆಯ್ತು, ಇದೀಗ ಮೂಲ ವೇತನ ಹೆಚ್ಚಳದ ಸರದಿ, ಯಾವಾಗ ಸಿಗಲಿದೆ ಗುಡ್ ನ್ಯೂಸ್?

Hike In Basic Salary: ಇತ್ತೀಚೆಗಷ್ಟೇ ಕೇಂದ್ರದ ಪ್ರಧಾನಿ ಮೋದಿ (PM Narendra Modi) ನೇತೃತ್ವದ ಸರ್ಕಾರ ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು  ಶೇ 4ರಷ್ಟು ಹೆಚ್ಚಿಸಿ ಅನುಮೋದನೆ ನೀಡಿದೆ. ಇದಲ್ಲದೇ ಎಚ್‌ಆರ್‌ಎಯಲ್ಲಿಯೂ ಕೂಡ ಗಣನೀಯ ಏರಿಕೆಯಾಗಿದೆ. ಇದೆ ವೇಳೆ, ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದೆ, ಶೀಘ್ರದಲ್ಲಿ ಅದು ಶೂನ್ಯಕ್ಕೆ ಪರಿವರ್ತನೆಯಾಗಲಿದೆ ಎಂಬ ಚರ್ಚೆಗಳು ಇದೀಗ ವೇಗ ಪಡೆದುಕೊಳ್ಳಲಾರಂಭಿಸಿವೆ (Business News In Kannada)  

Written by - Nitin Tabib | Last Updated : Mar 9, 2024, 08:01 PM IST
  • ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 50ಕ್ಕೆ ಹೆಚ್ಚಿಸಲಾಗಿದೆ.
  • ಇದನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗಿದೆ. ಇದೀಗ ಮುಂದಿನ ಪರಿಷ್ಕರಣೆ ಜುಲೈ 2024 ರಲ್ಲಿ ನಡೆಯಲಿದೆ.
  • ಅಂದರೆ ಜುಲೈ ನಂತರ, ತುಟ್ಟಿಭತ್ಯೆಯ ದರವು 0 ರಿಂದ 3 ಅಥವಾ 4 ಪ್ರತಿಶತ ಹೆಚ್ಚಾಗಲಿದೆ.
Basic Salary Hike: ತುಟ್ಟಿಭತ್ಯೆ ಹೆಚ್ಚಳ ಆಯ್ತು, ಇದೀಗ ಮೂಲ ವೇತನ ಹೆಚ್ಚಳದ ಸರದಿ, ಯಾವಾಗ ಸಿಗಲಿದೆ ಗುಡ್ ನ್ಯೂಸ್? title=

Hike In Basic Salary: ಕೇಂದ್ರ ಸರ್ಕಾರಿ ನೌಕರರ (Central Government Employees) ಮೇಲೆ ಭಾರಿ ಹಣದ ಸುರಿಮಳೆಯಾಗಲಿದೆ. ಹೌದು, ಪ್ರತಿ ವರ್ಷ ಎರಡು ಬಾರಿ ತುಟ್ಟಿಭತ್ಯೆಯನ್ನು ಪರಿಷ್ಕರಿಸಲಾಗುತ್ತದೆ ಆದರೆ ಇದರ ಹೊರತಾಗಿ, ಇನ್ನೂ ಅನೇಕ ಉಡುಗೊರೆಗಳನ್ನು ಪಡೆಯಲಿದ್ದಾರೆ.  ಹೋಳಿ ಹಬ್ಬಕ್ಕೂ ಮುನ್ನ ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿ  ಅನುಮೋದನೆ ನೀಡಿದೆ. ಇದಲ್ಲದೇ ಎಚ್‌ಆರ್‌ಎಯಲ್ಲಿ (HRA Hike) ಕೂಡ ಗಣನೀಯ ಏರಿಕೆಯಾಗಿದೆ. ಸರ್ಕಾರದ ಈ ಘೋಷಣೆಯಿಂದ ಸರ್ಕಾರಿ ನೌಕರರ ತುಟ್ಟಿಭತ್ಯೆ  ಇದೀಗ ಶೇಕಡಾ 50 ಕ್ಕೆ ತಲುಪಿದೆ. ಆದರೆ ಅದು ಶೀಘ್ರದಲ್ಲಿಯೇ ಶೂನ್ಯಕ್ಕೆ ತಲುಪಲಿದೆ ಎಂಬ ಚರ್ಚೆಗಳು ಇದೀಗ ಆರಂಭಗೊಂಡಿವೆ.  ಇದರಿಂದ ಉದ್ಯೋಗಿಗಳಿಗೆ ಮೂಲ ವೇತನದ ರೂಪದಲ್ಲಿ ಹೆಚ್ಚಿನ ಲಾಭ ಸಿಗಲಿದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ (Business News In Kannada)

ತುಟ್ಟಿಭತ್ಯೆ ಮೂಲವೇತನಕ್ಕೆ ಸೇರ್ಪಡೆಯಾಗಲಿದೆ!
ಸರ್ಕಾರದ ಈ ನಿರ್ಧಾರದಿಂದ ನೌಕರರ ಮೂಲವೇತನ (Basic Salary) ಹೇಗೆ ಹೆಚ್ಚಾಗಲಿದೆ? ಈ ಪ್ರಶ್ನೆಗೆ ಉತ್ತರ ಕಂಡು ಹಿಡಿಯಲು ಮೊದಲು ಇದರ ಹಿಂದಿನ ಇತಿಹಾಸ ತಿಳಿದುಕೊಳ್ಳೋಣ ಬನ್ನಿ, 2016ರಲ್ಲಿ ಸರ್ಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ತುಟ್ಟಿಭತ್ಯೆಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು. ಲೆಕ್ಕಾಚಾರಗಳಿಗಾಗಿ ಹೊಸ ಮೂಲ ವರ್ಷವನ್ನು ನಿರ್ಧರಿಸಲಾಯಿತು. ಡಿಎ ಶೂನ್ಯವಾದ ಕಾರಣ, ಹಿಂದಿನ ತುಟ್ಟಿಭತ್ಯೆಯನ್ನು (DA Hike) ನೌಕರರ ಮೂಲ ವೇತನಕ್ಕೆ ಸೇರಿಸಿದ ಲಾಭವನ್ನು ನೌಕರರು ಪಡೆದರು. ಇದೀಗ ಮತ್ತೊಮ್ಮೆ ಅಂಥದ್ದೇ ಘಟನೆ ನಡೆದಿದ್ದು. ತುಟ್ಟಿಭತ್ಯೆಯನ್ನು ಮೂಲ ವೇತನದೊಂದಿಗೆ ಮತ್ತೊಮ್ಮೆ ವಿಲೀನಗೊಳಿಸಿ, ತುಟ್ಟಿಭತ್ಯೆ 0 ಆಗುವ ಮೂಲಕ ವೇತನವನ್ನು ಹೆಚ್ಚಿಸುವ ಸಾಧ್ಯತೆ ಇದೇ

ತುಟ್ಟಿಭತ್ಯೆ ಏಕೆ 0 ಆಗುತ್ತದೆ?
ಈಗ ಇದು ಏಕೆ ಸಂಭವಿಸುತ್ತದೆ? ಎಂಬ ಪ್ರಶ್ನೆಗೆ ಬರೋಣ. ವಾಸ್ತವದ್ಲಲಿ 2016 ರಲ್ಲಿ ಇದಕ್ಕೆ ಸಂಬಂಧಿಸಿದಂತೆ ಒಂದು ಜ್ಞಾಪಕ ಪತ್ರ ಜಾರಿಗೊಳಿಸಲಾಗಿತ್ತು, ತುಟ್ಟಿಭತ್ಯೆ ಶೇ.50 ಅಂದರೆ ಮೂಲ ವೇತನದ 50% ಆಗಿದ್ದರೆ, ನಂತರ ಅದನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ ಎಂದು ಹೇಳಲಾಗಿದೆ. ಅಂದರೆ ಶೂನ್ಯವಾದ ನಂತರ ಇದೀಗ ನೌಕರರು ಪಡೆಯುತ್ತಿರುವ ತುಟ್ಟಿಭತ್ಯೆಯ ಲೆಕ್ಕಾಚಾರ ಮತ್ತೆ ಆರಂಭವಾಗುತ್ತದೆ. ಇದು ಸಂಭವಿಸಿದಲ್ಲಿ, ಪ್ರಸ್ತುತ ಇರುವ ಶೇ.50 ರಷ್ಟು ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಗುತ್ತದೆ. ಇದರಿಂದ ನೌಕರರ ವೇತನ ಪರಿಷ್ಕರಣೆಯಾಗಲಿದೆ. ಇದರ ಅನುಕೂಲವೆಂದರೆ ನೌಕರರು ತಮ್ಮ ಸಂಬಳದಲ್ಲಿ ಪರಿಷ್ಕರಣೆಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ. ಮುಂಚೆ ತುಟ್ಟಿಭತ್ಯೆ ಶೇ. 100 ಪ್ರತಿಶತಕ್ಕಿಂತ ಹೆಚ್ಚಾಗಿತ್ತು. ಆರನೇ ವೇತನ ಆಯೋಗದವರೆಗೂ ಡಿಎ ಯನ್ನು ಮೂಲ ವೇತನಕ್ಕೆ ಸೇರಿಸದೆಯೇ ಹೆಚ್ಚಿಸಲಾಗುತ್ತಿತ್ತು. 

ಕೇಂದ್ರ ನೌಕರರ ಮೂಲ ವೇತನದಲ್ಲಿ ಭಾರಿ ಏರಿಕೆ
ಪ್ರಸ್ತುತ, ಪೇ-ಬ್ಯಾಂಡ್  ಹಂತ-1 ರಲ್ಲಿ  ಮೂಲ ವೇತನವು 18000 ರೂ. ಆಗಿದ್ದು, ಇದು ಅತ್ಯಂತ ಕನಿಷ್ಠ ಮೂಲ ವೇತನವಾಗಿದೆ. ಅದರ ಲೆಕ್ಕಾಚಾರವನ್ನು ನೋಡಿದರೆ, ಪ್ರಸ್ತುತ ತುಟ್ಟಿಭತ್ಯೆಯಾಗಿ ಲಭ್ಯವಿರುವ ಒಟ್ಟು ಮೊತ್ತ 7560 ರೂ. ಆಗಿದೆ. ಆದರೆ, ಅದೇ ಲೆಕ್ಕಾಚಾರದಲ್ಲಿ 50 ಪ್ರತಿಶತ ತುಟ್ಟಿಭತ್ಯೆಯನ್ನು ನೋಡಿದರೆ, ನಮಗೆ 9000 ರೂ.ಸಿಗುತ್ತದೆ.  50 ರಷ್ಟು ಡಿಎ ಬಂದ ತಕ್ಷಣ ಅದನ್ನು ಶೂನ್ಯಕ್ಕೆ ಇಳಿಸಿ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಂದರೆ 18000 ರೂ.ಗಳ ವೇತನಕ್ಕೆ 9000 ರೂ.ಸೇರ್ಪಡೆಯಾಗುವುದರಿಂದ ನೌಕರರ ಕನಿಷ್ಠ ಮೂಲ ವೇತನ  27000 ರೂ. ಗಳಿಗೆ ತಲುಪಲಿದೆ. ಇದರ ನಂತರ ತುಟ್ಟಿಭತ್ಯೆಯನ್ನು 27000 ರೂ. ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. 0 ಆದ ನಂತರ DA 3% ರಷ್ಟು ಹೆಚ್ಚಾದರೆ, ನಂತರ ಅವರ ಸಂಬಳವು ತಿಂಗಳಿಗೆ 810 ರೂಪಾಯಿಗಳಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ-Right To Repair: ಇನ್ಮುಂದೆ RO ಕಂಪನಿಯ ಪ್ರತಿನಿಧಿಗಳು ನಿಮ್ಮನ್ನು ಸುಲಭವಾಗಿ ವಂಚಿಸಲು ಸಾಧ್ಯವಿಲ್ಲ, ಕಾರಣ ಇಲ್ಲಿದೆ!

ಮೂಲ ವೇತನ ಹೆಚ್ಚಳ ಯಾವಾಗ?
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 50ಕ್ಕೆ ಹೆಚ್ಚಿಸಲಾಗಿದೆ. ಇದನ್ನು ಜನವರಿ 1, 2024 ರಿಂದ ಜಾರಿಗೆ ತರಲಾಗಿದೆ. ಇದೀಗ ಮುಂದಿನ ಪರಿಷ್ಕರಣೆ ಜುಲೈ 2024 ರಲ್ಲಿ ನಡೆಯಲಿದೆ. ಅಂದರೆ ಜುಲೈ ನಂತರ, ತುಟ್ಟಿಭತ್ಯೆಯ ದರವು 0 ರಿಂದ 3 ಅಥವಾ 4 ಪ್ರತಿಶತ ಹೆಚ್ಚಾಗಲಿದೆ. ಇದರರ್ಥ ಜುಲೈ 2024 ಕ್ಕೆ ತುಟ್ಟಿಭತ್ಯೆಯ ದರವನ್ನು ನಿರ್ಧರಿಸುವ ಮೊದಲು, ಮೂಲ ವೇತನದೊಂದಿಗೆ ಶೇ. 50 ಡಿಎ ವಿಲೀನಗೊಳಿಸಲು ಸರ್ಕಾರ ಅನುಮೋದನೆ ನೀಡಬಹುದು. ವಿಲೀನವಾದ ತಕ್ಷಣ, ಪೇ ಬ್ಯಾಂಡ್ ಲೆವೆಲ್-1 ನೌಕರರ ವೇತನದಲ್ಲಿ ನೇರವಾಗಿ 9000 ರೂ.ಏರಿಕೆಯಾಗಲಿದೆ

ಇದನ್ನೂ ಓದಿ-Gratuity Rule Change: 15 ಸಾವಿರ ಮೂಲ ವೇತನ ಇರುವವರಿಗೆ ಗ್ರ್ಯಾಚೂಟಿ ಲೆಕ್ಕಾಚಾರ ಹೇಗಿರುತ್ತದೆ, ಇಲ್ಲಿ ತಿಳಿದುಕೊಳ್ಳಿ!

2016 ರಲ್ಲಿ ಮೊದಲ ಬಾರಿಗೆ ಡಿಎ ವಿಲೀನಗೊಳಿಸಲಾಗಿತ್ತು 
ಹೊಸ ವೇತನ ಶ್ರೇಣಿಯನ್ನು (7th Pay Commission) ಜಾರಿಗೆ ಬಂದಾಗ, ನೌಕರರು ಪಡೆಯುವ ಡಿಎಯನ್ನು ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ನಿಯಮದಂತೆ ನೌಕರರು ಪಡೆಯುವ ಶೇ.100 ಡಿಎಯನ್ನು ಮೂಲ ವೇತನಕ್ಕೆ ಸೇರಿಸಬೇಕು ಆದರೆ ಇದು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು. ಹಣಕಾಸಿನ ಪರಿಸ್ಥಿತಿಗೆ ಇದರಿಂದ ಅಡ್ಡಿಯಾಗುತ್ತದೆ. ಆದಾಗ್ಯೂ, ಇದನ್ನು 2016 ರಲ್ಲಿ ನಡೆಸಲಾಲಾಗಿತ್ತು. ಅದಕ್ಕೂ ಮುನ್ನ 2006ರಲ್ಲಿ ಆರನೇ ವೇತನ ಶ್ರೇಣಿ ಜಾರಿಗೆ ಬಂದಾಗ, ಐದನೇ ವೇತನ ಶ್ರೇಣಿಯಲ್ಲಿ ಡಿಸೆಂಬರ್ ವರೆಗೆ ಶೇ.187 ಡಿಎ ನೀಡಲಾಗುತ್ತಿತ್ತು. ಸಂಪೂರ್ಣ ಡಿಎಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಲಾಯಿತು. ಆದ್ದರಿಂದ ಆರನೇ ವೇತನ ಶ್ರೇಣಿಯ ಗುಣಾಂಕ 1.87 ಆಗಿತ್ತು. ನಂತರ ಹೊಸ ಪೇ ಬ್ಯಾಂಡ್ ಮತ್ತು ಹೊಸ ದರ್ಜೆಯ ವೇತನವನ್ನು ಸಹ ರಚಿಸಲಾಗಿದೆ. ಆದರೆ, ಅದನ್ನು ತಲುಪಿಸಲು ಮೂರು ವರ್ಷ ಬೇಕಾಯಿತು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News