ನವದೆಹಲಿ: ಮಾಜಿ ಸಂಸದೆ ಹಾಗೂ ಹಿರಿಯ ನಟಿ ಜಯಪ್ರದಾ ಮಂಗಳವಾರದಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಜಯಪ್ರದಾ 2004 ಹಾಗೂ 2009 ರಲ್ಲಿ ರಾಂಪುರ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದಿಂದ ಆಯ್ಕೆಯಾಗಿದ್ದರು.ಬಿಜೆಪಿಗೆ ಸೇರಿದ ನಂತರ ಪ್ರತಿಕ್ರಿಯಿಸಿದ ಜಯಪ್ರದಾ " ನಾನು ಟಿಡಿಪಿಯೊಂದಿಗೆ ಹಾಗೂ ಸಮಾಜವಾದಿ ಪಕ್ಷದೊಂದಿಗೆ ಕಾರ್ಯನಿರ್ವಹಿಸಿದ್ದೇನೆ.ಈಗ ನನಗೆ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಕಾರ್ಯನಿರ್ವಹಿಸುವ ಅವಕಾಶ ದೊರೆತಿದೆ.ಆದ್ದರಿಂದ ಈಗ ನಾನು ಈ ಪಕ್ಷ ಹಾಗೂ ದೇಶಕ್ಕೆ ನನ್ನನ್ನು ಸಮರ್ಪಿಸಿಕೊಂಡಿದ್ದೇನೆ" ಎಂದರು.
Delhi: Veteran actor and former MP Jaya Prada joins Bharatiya Janata Party. pic.twitter.com/vmZD3H1PSL
— ANI (@ANI) March 26, 2019
"ಅದು ಸಿನಿಮಾ ಆಗಿರಬಹುದು ಅಥವಾ ರಾಜಕೀಯವಾಗಿರಬಹುದು, ನಾನು ಉತ್ತಮವಾದುದ್ದನ್ನೇ ನೀಡಿದ್ದೇನೆ.ಪಕ್ಷವು ನನ್ನನ್ನು ಸ್ವಾಗತಿಸಿರುವುದಕ್ಕೆ ನಾನು ಕೃತಜ್ಞಳಾಗಿದ್ದೇನೆ" ಎಂದರು. ಈಗ ಜಯಾಪ್ರದಾ ಅವರು ರಾಂಪುರ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಜಂಖಾನ್ ವಿರುದ್ಧ ಸ್ಪರ್ಧಿಸಲಿದ್ದಾರೆ ಎನ್ನಲಾಗಿದೆ. 2014 ರ ಚುನಾವಣೆಯಲ್ಲಿ ಆರ್ಎಲ್ಡಿ ಟಿಕೆಟ್ ಮೂಲಕ ಸ್ಪರ್ಧಿಸಿದ್ದ ಅವರು ಬಿಜೆಪಿ ನೇಪಾಲ್ ಸಿಂಗ್ ವಿರುದ್ಧ ಸೋಲನ್ನು ಅನುಭವಿಸಿದ್ದರು.