BSF Recruitment 2023 : BSF ನಲ್ಲಿ 1410 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ

BSF Recruitment 2023: BSF ನೇಮಕಾತಿಗಾಗಿ ಅರ್ಹತಾ ಮಾನದಂಡ 2023 ಅಭ್ಯರ್ಥಿಗಳು ಮಾನ್ಯತೆ ಪಡೆದ ಆಡಳಿತ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನವನ್ನು ಹೊಂದಿರಬೇಕು. ಆನ್‌ಲೈನ್ ಅರ್ಜಿಗಳಿಗೆ ಅಂತಿಮ ದಿನಾಂಕದಂದು ಅರ್ಜಿದಾರರ ವಯಸ್ಸು 18 ರಿಂದ 25 ವರ್ಷ ವಯಸ್ಸಿನವರಾಗಿರಬೇಕು.  

Written by - Zee Kannada News Desk | Last Updated : Feb 4, 2023, 05:30 PM IST
  • ಬಿಎಸ್‌ ಎಫ್ ನಲ್ಲಿ 1410 ಕಾನ್ಸ್‌ಟೇಬಲ್ ಹುದ್ದೆ
  • BSF ನೇಮಕಾತಿಗಾಗಿ ಅರ್ಜಿ ಆಹ್ವಾನ
  • 18 ಮತ್ತು 25 ರ ನಡುವಿನ ವಯಸ್ಸಿನವರಾಗಿರಬೇಕು
BSF Recruitment 2023 : BSF ನಲ್ಲಿ 1410 ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ : ಇಲ್ಲಿದೆ ಸಂಪೂರ್ಣ ಮಾಹಿತಿ title=

BSF Recruitment 2023 : ಗಡಿ ಭದ್ರತಾ ಪಡೆ (BSF) 1410 ಕಾನ್ಸ್‌ಟೇಬಲ್ (ಟ್ರೇಡ್ಸ್‌ಮ್ಯಾನ್) ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ. ಆಸಕ್ತ ಅಭ್ಯರ್ಥಿಗಳು ಜಾಹೀರಾತು ಪ್ರಕಟವಾದ 30 ದಿನಗಳ ನಂತರ ಅಪ್ಲಿಕೇಶನ್ ಹಾಕಲು ಗಡವು ಇರುತ್ತದೆ.

ಹುದ್ದೆಯ ವಿವರಗಳು :

ಪುರುಷ ಅರ್ಜಿದಾರರು : 1343 ಸ್ಥಾನಗಳು

ಮಹಿಳಾ ಅರ್ಜಿದಾರರು : 67 ಸ್ಥಾನಗಳು 

ಅರ್ಹತಾ ಮಾನದಂಡ

ಅಭ್ಯರ್ಥಿಗಳು ಮಾನ್ಯತೆ ಪಡೆದ ಆಡಳಿತ ಮಂಡಳಿಯಿಂದ ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನವನ್ನು ಹೊಂದಿರಬೇಕು.

ಅರ್ಜಿ ಶುಲ್ಕ

ಎಸ್ಸಿ ಎಸ್ಟಿ , ಓಬಿಸಿ ,  ಅಭ್ಯರ್ಥಿಗಳು  ಅರ್ಜಿ ಶುಲ್ಕ ಪಾವತಿಯನ್ನು  ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಚಲನ್ ಮೂಲಕ  ಮಾಡಬಹುದು

 ವಯೋಮಿತಿ 

 18 ಮತ್ತು 25 ರ ನಡುವಿನ ವಯಸ್ಸಿನವರಾಗಿರಬೇಕು. .  ಎಸ್ಸಿ , ಎಸ್ಟಿ , ಓಬಿಸಿ ,ಅಭ್ಯರ್ಥಿಗಳು ಸರ್ಕಾರಿ ನಿಯಮಗಳ ಅಡಿಯಲ್ಲಿ ವಯಸ್ಸಿನ ಸಡಿಲಿಕೆಗೆ ಅರ್ಹರಾಗಿರುತ್ತಾರೆ.

ಬಿಎಸ್‌ ಎಫ್ ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ? 

- BSF ನ ಅಧಿಕೃತ ವೆಬ್‌ಸೈಟ್‌ https://rectt.bsf.gov.in/ ಭೇಟಿ ನೀಡಿ.

- ಮುಖಪುಟದಲ್ಲಿ ಕಾನ್‌ಸ್ಟೆಬಲ್ ಟ್ರೇಡ್ಸ್‌ಮ್ಯಾನ್ ಪೋಸ್ಟ್ ಲಿಂಕ್ ಅನ್ನು ಕ್ಲಿಕ್ ಮಾಡಿ.

- ಅಗತ್ಯ ಮಾಹಿತಿಯೊಂದಿಗೆ ನೋಂದಣಿ ಫಾರ್ಮ್ ಅನ್ನು ಭರ್ತಿ ಮಾಡಿ.

- ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ವೆಚ್ಚವನ್ನು ಪಾವತಿಸಿ. 

- ಪೂರ್ಣಗೊಂಡ ನಂತರದ Submit ಬಟನ್ ಕ್ಲಿಕ್ ಮಾಡಿ. 

- ಮುಂದಿನ ಕೆಲಸಗಳಿಗಾಗಿ ಹಾರ್ಡ್ ಕಾಪಿ ಪ್ರಿಂಟ್‌ ತೆಗೆದುಕೊಳ್ಳಿ 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News