ಬೆಂಗಳೂರು: ಖ್ಯಾತ ಹಾಲಿವುಡ್ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘Avatar: The Way of Water’ ಚಿತ್ರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಬ್ಬರಿಸುತ್ತಿದೆ. ಅತಿಹೆಚ್ಚಿನ ಪ್ರದರ್ಶನಗಳನ್ನು ಕಾಣುವ ಮೂಲಕ ಈ ಸಿನಿಮಾ ಕನ್ನಡದ ‘ಜೇಮ್ಸ್’ ಮತ್ತು ‘ವಿಕ್ರಾಂತ್ ರೋಣ’ ಸಿನಿಮಾದ ದಾಖಲೆಗಳನ್ನು ಊಡಿಸ್ ಮಾಡಿದೆ.
ಬೆಂಗಳೂರಿನಲ್ಲಿ ಅತಿಹೆಚ್ಚಿನ ಸಂಖ್ಯೆಯ ಪ್ರದರ್ಶನಗಳನ್ನು ಕಾಣುವ ಮೂಲಕ ‘ಅವತಾರ್-2’ ಹೊಸ ದಾಖಲೆ ನಿರ್ಮಿಸಿದೆ. ಅವತಾರ್ ಅಬ್ಬರದ ಎದುರು ‘ಕೆಜಿಎಫ್-2’ನ ದಾಖಲೆ ಜಸ್ಟ್ ಮಿಸ್ ಆಗಿದೆ. ಮೊದಲ ದಿನವೇ ಬಾಕ್ಸ್ ಆಫೀಸ್ ಊಡಿಸ್ ಮಾಡಿರುವ ‘ಅವತಾರ್-2’ ಸಿನಿಮಾ ಹಲವು ದಾಖಲೆಗಳನ್ನು ನಿರ್ಮಿಸಿದೆ. ಈ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚಿನ ಶೋ ಪಡೆದ ಚಿತ್ರಗಳ ಪೈಕಿ 2ನೇ ಸ್ಥಾನ ಗಳಿಸಿದೆ. 2022ರಲ್ಲಿ ಬೆಂಗಳೂರಿನಲ್ಲಿ ಬಿಡುಗಡೆಯಾದ ದಿನವೇ ಅತಿಹೆಚ್ಚು ಪ್ರದರ್ಶನ ಕಂಡ ಟಾಪ್ 10ರ ಪಟ್ಟಿಯಲ್ಲಿ ಜೇಮ್ಸ್ ಕ್ಯಾಮರೂನ್ ನಿರ್ದೇಶನದ ‘ಅವತಾರ್-2’ ಹೊಸ ದಾಖಲೆ ನಿರ್ಮಿಸಿದೆ.
ಇದನ್ನೂ ಓದಿ: Year Ender 2022 : ಈ ವರ್ಷದ ಟಾಪ್ ಹಾಡುಗಳ ಪಟ್ಟಿಯಲ್ಲಿ ʻರಾ ರಾ ರಕ್ಕಮ್ಮʼ
ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಕಂಡ ಚಿತ್ರಗಳು
1. ಕೆಜಿಎಫ್- ಚಾಪ್ಟರ್ 2 - 1037 ಪ್ರದರ್ಶನಗಳು
2. ಅವತಾರ್ - ದಿ ವೇ ಆಫ್ ವಾಟರ್ - 1014 ಪ್ರದರ್ಶನಗಳು
3. ವಿಕ್ರಾಂತ್ ರೋಣ - 987
4. ಬೀಸ್ಟ್ - 963
5. RRR- 934 ಪ್ರದರ್ಶನಗಳು
6. ಜೇಮ್ಸ್ - 919
7. ವಾಲಿಮೈ - 719
8. ಲೈಗರ್ - 703
9. ಮಲ್ಟಿವರ್ಸ ಆಫ್ ಮ್ಯಾಡ್ನೆಸ್ - 592
10. ಸರ್ಕಾರು ವಾರಿ ಪಾಟ - 592
‘ಅವತಾರ್ - ದಿ ವೇ ಆಫ್ ವಾಟರ್’ ಸಿನಿಮಾ ಶುಕ್ರವಾರ(ಡಿ.16) ದೇಶ-ವಿದೇಶಗಳಲ್ಲಿ ರಿಲೀಸ್ ಆಗಿದೆ. ಬಿಡುಗಡೆಯ ದಿನವೇ ಬೆಂಗಳೂರಿನಲ್ಲಿ 1014 ಪ್ರದರ್ಶನಗಳನ್ನು ಕಂಡಿದೆ. 2022ರಲ್ಲಿ ತೆರೆಕಂಡ ಚಿತ್ರಗಳ ಪೈಕಿ ಬೆಂಗಳೂರಿನಲ್ಲಿ ಅತಿಹೆಚ್ಚು ಪ್ರದರ್ಶನ ಪಡೆದುಕೊಂಡ 2ನೇ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ‘ಜೇಮ್ಸ್’ ಹಾಗೂ ‘ವಿಕ್ರಾಂತ್ ರೋಣ’ ಸಿನಿಮಾಗಳಿಗಿಂತಲೂ ಹೆಚ್ಚಿನ ಪ್ರದರ್ಶನ ಕಾಣುವ ಮೂಲಕ ದಾಖಲೆ ನಿರ್ಮಿಸಿದೆ. ಇನ್ನು ರಾಕಿಂಗ್ ಸ್ಟಾರ್ ಯಶ್ ಅವರ ‘ಕೆಜಿಎಫ್-2’ ದಾಖಲೆ ಜಸ್ಟ್ ಮಿಸ್ ಆಗಿದೆ.
ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆಯನ್ನೇ ನಿರ್ಮಿಸಿದ್ದ ‘ಕೆಜಿಎಫ್-2’ ಸಿನಿಮಾ ಬೆಂಗಳೂರಿನಲ್ಲಿ ಬಿಡುಗಡೆಯಾದ ಮೊದಲ ದಿನ ಬರೋಬ್ಬರಿ 1037 ಪ್ರದರ್ಶನಗಳನ್ನು ಕಂಡಿತ್ತು. ಆದರೆ ‘ಅವತಾರ್ - ದಿ ವೇ ಆಫ್ ವಾಟರ್’ ಸಿನಿಮಾ 1014 ಪ್ರದರ್ಶನಗಳನ್ನು ಕಂಡಿದೆ. ಕೆಜಿಎಫ್ಗೂ ಅವತಾರ್ಗೂ ಕೇವಲ 13 ಪ್ರದರ್ಶನ ಮಾತ್ರ ಹೆಚ್ಚುಕಮ್ಮಿಯಾಗಿದೆ. ಆದರೂ ಈ ರೇಸ್ನಲ್ಲಿ ಕೆಜಿಎಫ್ ನಂ.1 ಸ್ಥಾನವನ್ನು ಕಾಪಾಡಿಕೊಂಡಿದೆ.
ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ್’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.