Valentine's Day 2023: ಸಂಗಾತಿ ಜೊತೆಗಿನ ಸಂಬಂಧ ಸುಮಧುರತೆಗೆ ಇಲ್ಲಿವೆ 8 ಉಪಾಯಗಳು, ಶೀಘ್ರವೇ ಪ್ರೇಮ ವಿವಾಹ ಯೋಗ ಪ್ರಾಪ್ತಿ!

Valentine's Day 2023: ಫೆಬ್ರವರಿ 14, 2023 ರ ವ್ಯಾಲೆಂಟೈನ್ಸ್ ಡೇ ಹಿನ್ನೆಲೆ ಇಂದು ನಾವು ನಿಮಗೆ ನಿಮ್ಮ ಯಶಸ್ವಿ ಪ್ರೇಮ ಜೀವನ, ಪ್ರೇಮ ವಿವಾಹ ಹಾಗೂ ಸುಖಕರ ದಾಂಪತ್ಯ ಜೀವನಕ್ಕೆ ಕೆಲ ಉಪಾಯಗಳನ್ನು ಈ ಲೇಖನದ ಮೂಲಕ ಹೇಳಿಕೊಡಲಿದ್ದೇವೆ.  

Written by - Nitin Tabib | Last Updated : Feb 7, 2023, 05:28 PM IST
  • ಆದರೆ ಜೋತಿಷ್ಯ ಶಾಸ್ತ್ರದಲ್ಲಿ ಸೂಚಿಸಲಾಗಿರುವ ಕೆಲ ಪರಿಹಾರಗಳೂ ಕೂಡ ಪ್ರೇಮ ವಿವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತವೆ.
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೇಮ ಜೀವನ ಯಶಸ್ವಿಯಾಗಲು, ಪ್ರೇಮವಿವಾಹಕ್ಕೆ ಯೋಗ, ದಾಂಪತ್ಯ ಜೀವನದ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ.
Valentine's Day 2023: ಸಂಗಾತಿ ಜೊತೆಗಿನ ಸಂಬಂಧ ಸುಮಧುರತೆಗೆ ಇಲ್ಲಿವೆ 8 ಉಪಾಯಗಳು, ಶೀಘ್ರವೇ ಪ್ರೇಮ ವಿವಾಹ ಯೋಗ ಪ್ರಾಪ್ತಿ! title=
ಪ್ರೇಮಿಗಳ ದಿನ 2023 ಜೋತಿಷ್ಯ ಸಲಹೆಗಳು

Valentine's Day 2023 Tips: ಯಾವುದೇ ಓರ್ವ ವ್ಯಕ್ತಿಯ ಪ್ರೇಮ ವಿವಾಹವು ಆತನ ಜಾತಕದ ಸಪ್ತಮ ಭಾವಕ್ಕೆ ಸಂಬಂಧಿಸಿರುತ್ತದೆ. ಸಪ್ತಮೇಶನಾದವನು ತೃತೀಯ, ಪಂಚಮ, ನವಮ, ಏಕಾದಶ ಮತ್ತು ದ್ವಾದಶ ಭಾವದವರ ಹತ್ತಿರಕ್ಕೆ ಬಂದಾಗ, ಜಾತಕದಲ್ಲಿ ಪ್ರೇಮ ವಿವಾಹದ ಸಕಲ ಸಾಧ್ಯತೆ ರೂಪುಗೊಳ್ಳುತ್ತದೆ. ಆದರೆ ಜೋತಿಷ್ಯ ಶಾಸ್ತ್ರದಲ್ಲಿ ಸೂಚಿಸಲಾಗಿರುವ ಕೆಲ ಪರಿಹಾರಗಳೂ ಕೂಡ ಪ್ರೇಮ ವಿವಾಹದ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೇಮ ಜೀವನ ಯಶಸ್ವಿಯಾಗಲು, ಪ್ರೇಮವಿವಾಹಕ್ಕೆ ಯೋಗ, ದಾಂಪತ್ಯ ಜೀವನದ ಪ್ರೀತಿ ಮತ್ತು ಸಂತೋಷವನ್ನು ಹೆಚ್ಚಿಸಲು ಹಲವು ಉಪಾಯಗಳನ್ನು ಸೂಚಿಸಲಾಗಿದೆ. ಫೆಬ್ರವರಿ 14 ಪ್ರೇಮಿಗಳ ದಿನದ ಹಿನ್ನೆಲೆ ಇಂದು ನಾವು ನಿಮಗೆ ಯಶಸ್ವಿ ಪ್ರೇಮ ಜೀವನ, ಪ್ರೇಮ ವಿವಾಹ ಮತ್ತು ಸುಖಕರ  ದಾಂಪತ್ಯ ಜೀವನಕ್ಕೆ ಈ ಲೇಖನದ ಮೂಲಕ ಜೋತಿಷ್ಯ ಸಲಹೆಗಳನ್ನು ನೀಡುತ್ತಿದ್ದೇವೆ.

1. ನಿಮ್ಮ ಮನಸ್ಸಿಗೆ ನೆಚ್ಚಿದ ಬಾಳ ಸಂಗಾತಿಯನ್ನು ಪಡೆಯಲು ಸೋಮವಾರ ಉಪವಾಸವನ್ನು ಕೈಗೊಳ್ಳಿ. ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಪಠಿಸುವಾಗ ಶಿವನಿಗೆ ಬೇಲ್ಪತ್ರವನ್ನು ಅರ್ಪಿಸಿ.

2. ಪ್ರೇಮ ಸಂಬಂಧವನ್ನು ಗಟ್ಟಿಗೊಳಿಸಲು ಕಾಮದೇವನ "ಓಂ ನಮೋ ಭಗವತೇ ಕಾಮದೇವಾಯ ಯಸ್ಯ ಯಸ್ಯ ದೃಶ್ಯೋ ಭವಾಮಿ ಯಸ್ಯ ಯಸ್ಯ ಮಾಮ್ ಮುಖಂ ಪಶ್ಯತಿ ತಾನ್ ತನ್ ಮೋಹಯತು ಸ್ವಾಹಾ" ಎಂಬ ಮಂತ್ರವನ್ನು ಪಠಿಸಿ ಪ್ರೇಮ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳಿ.ಕಾಮದೇವ ಮತ್ತು ರತಿಯನ್ನು ಒಟ್ಟಿಗೆ ಪೂಜಿಸುವುದು ಪ್ರೇಮದಲ್ಲಿರುವ ದಂಪತಿಗಳಿಗೆ ಲಾಭದಾಯಕ ಸಾಬೀತಾಗುತ್ತದೆ.

3. ವೈವಾಹಿಕ ಜೀವನದಲ್ಲಿ ಹೆಚ್ಚು ಏರಿಳಿತಗಳಿದ್ದರೆ. ವೈಮನಸ್ಯ ಇದ್ದರೆ, ಗಂಡ-ಹೆಂಡತಿ ಅಥವಾ ಪ್ರೇಯಸಿ ದಂಪತಿಗಳು ಗುರುವಾರದಂದು ವಿಷ್ಣುವಿಗೆ ಪೂಜೆ ಸಲ್ಲಿಸುವುದರಿಂದ ಲಾಭ ಪ್ರಾಪ್ತಿಯಾಗುತ್ತದೆ.

4. ನೀವು ನಿಮ್ಮ ಪ್ರೇಮಿಯನ್ನು ಮದುವೆಯಾಗಲು ಬಯಸಿದರೆ, ಜೋತಿಷ್ಯ ಪಂಡಿತರನ್ನು ಸಂಪರ್ಕಿಸಿ ನೀವು ವಜ್ರ ಅಥವಾ ಓಪಲ್ ಅನ್ನು ಧರಿಸಬೇಕು. ಇವೆರಡೂ ಶುಕ್ರನಿಗೆ ಸಂಬಂಧಿಸಿದ ರತ್ನಗಲಾಗಿವೆ. ಪ್ರಣಯ ಮತ್ತು ಯಶಸ್ವಿ ಪ್ರೀತಿಗೆ ಶುಕ್ರವನ್ನು ಅತ್ಯುತ್ತಮ ಗ್ರಹವೆಂದು ಪರಿಗಣಿಸಲಾಗಿದೆ.

5. ಪ್ರೇಮ ವಿವಾಹಕ್ಕಾಗಿ, ದಂಪತಿಗಳು 16 ಸೋಮವಾರದಂದು ಉಪವಾಸ ಕೈಗೊಳ್ಳಬೇಕು. ಇದರೊಂದಿಗೆ ತ್ವಂ ಶಂಕರ ಪ್ರಿಯ ಮತ್ತು ಮಾಮ್ ಕುರು ಕಲ್ಯಾಣಿ ಕಾಂತ ಕಾಂತ ಸುದುರ್ಲಭಂ ಎಂದು 108 ಬಾರಿ ಜಪಿಸಬೇಕು.

6. ಪ್ರೇಮ ವಿವಾಹಕ್ಕೆ ಚಂದ್ರನ ಆರಾಧನೆ ಕೂಡ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಚಂದ್ರನ ರತ್ನವಾದ ಮುತ್ತು ಧರಿಸುವುದರಿಂದ ಪ್ರೇಮ ವಿವಾಹದ ಸಾಧ್ಯತೆ ಹೆಚ್ಚಾಗುತ್ತದೆ. 

ಇದನ್ನೂ ಓದಿ-ಹಂಸ-ಮಾಲವ್ಯ ರಾಜಯೋಗಗಳ ನಿರ್ಮಾಣದಿಂದ 3 ರಾಶಿಗಳ ಜನರಿಗೆ ಭಾರಿ ಧನಲಾಭ-ಬಡ್ತಿ ಭಾಗ್ಯ!

7. ಗುರು ಮತ್ತು ಶುಕ್ರ ಬಲದಿಂದ ಜಾತಕದಲ್ಲಿ ವಿವಾಹ ಯೋಗವು ರೂಪುಗೊಳ್ಳುತ್ತದೆ. ಈ ಸಂದರ್ಭದಲ್ಲಿ, ನೀವು ಗುರುವಾರ ಹಳದಿ ಬಟ್ಟೆ ಮತ್ತು ಶುಕ್ರವಾರ ಬಿಳಿ ಬಟ್ಟೆಗಳನ್ನು ಧರಿಸಬೇಕು. ಇದರಿಂದ ನಿಮಗೆ ಸಾಕಷ್ಟು ಲಾಭ ಕೂಡ ಸಿಗಲಿದೆ.

ಇದನ್ನೂ ಓದಿ-Mahashivratri 2023 ರಂದು ರೂಪುಗೊಳ್ಳುತ್ತಿದೆ ಅಪರೂಪದ ಕಾಕತಾಳೀಯ, ಮರೆತೂ ಈ ತಪ್ಪುಗಳನ್ನು ಮಾಡ್ಬೇಡಿ

8. ನೀವು ಕೃಷ್ಣ-ರಾಧೆಯರನ್ನು ಒಟ್ಟಿಗೆ ಪೂಜಿಸಿ, ಶ್ರೀ ಕೃಷ್ಣನಿಗೆ ಪಾನ್ ಮತ್ತು ಕೊಳಲು ಅರ್ಪಿಸಿಸಿದರೆ, ಸಂಗಾತಿ ಜೊತೆಗಿನ ನಿಮ್ಮ ಪ್ರೇಮ ಸಂಬಂಧ ಮಧುರವಾಗುತ್ತವೆ.

ಇದನ್ನೂ ಓದಿ-ಕುಂಭ ರಾಶಿಯಲ್ಲಿ 12 ತಿಂಗಳುಗಳ ಬಳಿಕ ಸೂರ್ಯ-ಶುಕ್ರರ ಮೈತ್ರಿ, ಈ ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕಾಣದ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News