Sun Transit November 2021: ಸೂರ್ಯ ರಾಶಿ ಪರಿವರ್ತನೆ; ಈ 5 ರಾಶಿಗಳ ಮೇಲೆ ಹೆಚ್ಚು ಪರಿಣಾಮ

Surya Rashi Parivartan: ಸೂರ್ಯನ ರಾಶಿಚಕ್ರ ಬದಲಾವಣೆ (Surya Rashi Parivartan) ದೊಡ್ಡ ಬದಲಾವಣೆಗಳನ್ನು ತರುತ್ತದೆ. ಈ ಬಾರಿಯೂ ವೃಶ್ಚಿಕರಾಶಿಗೆ ಪ್ರವೇಶಿಸುವ ಸೂರ್ಯನು ಡಿಸೆಂಬರ್ 16ರ ವರೆಗೆ ಈ ರಾಶಿಯಲ್ಲಿಯೇ ಇದ್ದು 5 ರಾಶಿಗಳ ಭವಿಷ್ಯದಲ್ಲಿ ಬೆಳಗುತ್ತಾನೆ. 

Written by - Yashaswini V | Last Updated : Nov 8, 2021, 07:57 AM IST
  • ನವೆಂಬರ್ 16 ರಂದು ಸೂರ್ಯ ವೃಶ್ಚಿಕ ರಾಶಿಗೆ ಪ್ರವೇಶಿಸುತ್ತಾನೆ
  • 5 ರಾಶಿಯ ಜನರು ಗೌರವ, ಯಶಸ್ಸು ಮತ್ತು ಹಣವನ್ನು ಪಡೆಯುತ್ತಾರೆ
  • ಸೂರ್ಯನು ಈ ರಾಶಿಯಲ್ಲಿ ಒಂದು ತಿಂಗಳ ಕಾಲ ಇರುತ್ತಾನೆ
Sun Transit November 2021: ಸೂರ್ಯ ರಾಶಿ ಪರಿವರ್ತನೆ;  ಈ 5 ರಾಶಿಗಳ ಮೇಲೆ ಹೆಚ್ಚು ಪರಿಣಾಮ title=
Sun Transit Effects on zodiac signs

Surya Rashi Parivartan: ಯಶಸ್ಸು ಮತ್ತು ಗೌರವದ ಅಂಶವಾಗಿರುವ ಸೂರ್ಯ ಗ್ರಹವು ಕೆಲವೇ ದಿನಗಳಲ್ಲಿ ರಾಶಿಚಕ್ರವನ್ನು ಬದಲಾಯಿಸಲಿದೆ. ಇದು ಎಲ್ಲಾ 12 ರಾಶಿಚಕ್ರ ಚಿಹ್ನೆಗಳ ಜನರ ಮೇಲೆ ಪರಿಣಾಮ ಬೀರುತ್ತದೆ. 16 ನವೆಂಬರ್ 2021 ರಂದು, ಸೂರ್ಯನು ತನ್ನ ರಾಶಿಯನ್ನು ಬದಲಾಯಿಸುವ ಮೂಲಕ ವೃಶ್ಚಿಕ ರಾಶಿಯನ್ನು ಪ್ರವೇಶಿಸುತ್ತಾನೆ ಮತ್ತು ಮುಂದಿನ ಒಂದು ತಿಂಗಳು ಈ ರಾಶಿಯಲ್ಲಿಯೇ ಉಳಿಯುತ್ತಾನೆ. ಈ ಬದಲಾವಣೆಯು ಕೆಲವು ರಾಶಿಚಕ್ರ ಚಿಹ್ನೆಗಳ ಜನರಿಗೆ ವೃತ್ತಿಜೀವನವನ್ನು ಉಜ್ವಲಗೊಳಿಸುತ್ತದೆ. ಈ ಜನರು ತಮ್ಮ ವೃತ್ತಿಜೀವನದಲ್ಲಿ ಬಡ್ತಿ ಮತ್ತು ಗೌರವವನ್ನು ಪಡೆಯುತ್ತಾರೆ, ಜೊತೆಗೆ ಹಣಕಾಸಿನ ಪ್ರಯೋಜನಗಳನ್ನು ಪಡೆಯುತ್ತಾರೆ. 

ಈ ರಾಶಿಚಕ್ರದವರಿಗೆ ಸೂರ್ಯನ ಸಂಚಾರವು ತುಂಬಾ ಮಂಗಳಕರವಾಗಿದೆ:
ವೃಷಭ ರಾಶಿ :
ವೃಷಭ ರಾಶಿಯವರಿಗೆ ಸೂರ್ಯನ ಬದಲಾವಣೆಯು (Surya Rashi Parivartan) ತುಂಬಾ ಶುಭಕರವಾಗಿರುತ್ತದೆ. ಈ ಜನರು ಕೆಲಸದಲ್ಲಿ ಯಶಸ್ಸು ಮತ್ತು ಗೌರವವನ್ನು ಪಡೆಯುತ್ತಾರೆ. ನೀವು ಮನೆ ಕಾರು ಖರೀದಿಸಬಹುದು. ಆದಾಯವನ್ನು ಹೆಚ್ಚಿಸುವ ಬಲವಾದ ಅವಕಾಶಗಳಿವೆ. ಒಟ್ಟಿನಲ್ಲಿ ಅದೃಷ್ಟ ಎಲ್ಲ ಕ್ಷೇತ್ರದಲ್ಲೂ ಇರುತ್ತದೆ. 

ಮಿಥುನ ರಾಶಿ: ಮಿಥುನ ರಾಶಿಯ ಜನರು ತಮ್ಮ ಉದ್ಯೋಗ ಮತ್ತು ವ್ಯವಹಾರ ಎರಡರಲ್ಲೂ ಸಾಕಷ್ಟು ಪ್ರಗತಿಯನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗದಲ್ಲಿರುವ ಅಥವಾ ಸರ್ಕಾರಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ತುಂಬಾ ಶುಭವಾಗಿರುತ್ತದೆ. ಅವರು ದೊಡ್ಡ ಲಾಭವನ್ನು ಪಡೆಯಬಹುದು. ಹಣಕಾಸಿನ ಸ್ಥಿತಿಯೂ (Financial Status) ಉತ್ತಮವಾಗಿರುತ್ತದೆ. 

ಇದನ್ನೂ ಓದಿ- November 2021 Astrology : ಈ 5 ರಾಶಿಯವರಿಗೆ ನವೆಂಬರ್ ತಿಂಗಳು ತುಂಬಾ ಅದೃಷ್ಟ: ನಿಮ್ಮ ರಾಶಿ ಕೂಡ ಇದೆಯಾ ಚೆಕ್ ಮಾಡಿ

ಸಿಂಹ ರಾಶಿ: ಸಿಂಹ ರಾಶಿಯವರಿಗೆ ಆರ್ಥಿಕ ಮತ್ತು ಆಸ್ತಿ ಸಂಬಂಧಿತ ಲಾಭಗಳು ದೊರೆಯಲಿವೆ. ಕ್ಷೇತ್ರದಲ್ಲಿ ಪ್ರಗತಿ ಕಂಡುಬರುವುದು. ಗೌರವ ಹೆಚ್ಚುವುದು. ಪ್ರವಾಸಕ್ಕೆ ಹೋಗಬಹುದು. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. 

ಕನ್ಯಾ ರಾಶಿ: ಕನ್ಯಾ ರಾಶಿಯ ಜನರು ಧನಲಾಭವನ್ನು ಹೊಂದುತ್ತಾರೆ, ಇದರ ಪರಿಣಾಮವು ಆರ್ಥಿಕ ಪರಿಸ್ಥಿತಿಯ ಸುಧಾರಣೆಯ ರೂಪದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಸೂರ್ಯನ ಕೃಪೆಯಿಂದ ಆತ್ಮವಿಶ್ವಾಸ ಹೆಚ್ಚುತ್ತದೆ, ಆರೋಗ್ಯ ಚೆನ್ನಾಗಿರುತ್ತದೆ. ಗೌರವ ಸಿಗಲಿದೆ 

ಇದನ್ನೂ ಓದಿ- Shani Rashi Parivartan: ಶನಿಯ ಸ್ಥಾನ ಬದಲಾವಣೆಯಿಂದ ಈ ರಾಶಿಯವರಿಗೆ ತೊಂದರೆ, ನೀವು ಇದ್ದೀರಾ ನೋಡಿ..?

ಮಕರ ರಾಶಿ: ಮಕರ ರಾಶಿಯವರ ಆರ್ಥಿಕ ಸ್ಥಿತಿ, ವೃತ್ತಿ, ಶಿಕ್ಷಣಕ್ಕೆ ಈ ಸಮಯ ಅತ್ಯುತ್ತಮವಾಗಿರುತ್ತದೆ. ಪ್ರತಿಯೊಂದು ಕೆಲಸದಲ್ಲೂ ಯಶಸ್ಸನ್ನು ಪಡೆಯುವಿರಿ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಲ್ಲಿ ಸಂತೋಷ ಇರುತ್ತದೆ. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಊಹೆಗಳನ್ನು ಆಧರಿಸಿದೆ. ಜೀ ಹಿಂದೂಸ್ಥಾನ್ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News