spider web: ಇಲಿ, ನೊಣ, ಸೊಳ್ಳೆ ಬಿಡಿ ಇವುಗಳ ನಂತರ ಮನೆಯಲ್ಲಿ ಗೂಡು ಕಟ್ಟುತ್ತಾ ತಲೆ ನೋವು ಹೆಚ್ಚು ಮಾಡೋದು ಜೇಡದ ಹುಳು. ಎಷ್ಟೇ ಭಾರಿ ನಾಶ ಮಾಡಿದರೂ, ಈ ಹುಳುಗಳು ಪದೇ ಪದೇ ಗೂಡು ಕಟ್ಟುತ್ತಲೇ ಇರುತ್ತವೆ. ಹಾಗಾದರೆ ಈ ಜೇಡಗಳನ್ನು ತಡೆಯುವುದು ಹೇಗೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನೋಡಿ ಸಿಂಪಲ್ ಟಿಪ್ಸ್
ಕಷ್ಟ ಪಟ್ಟು ಗೃಹಿಣಿಯರು ಮನೆಯನ್ನು ಸ್ವಚ್ಛಮಾಡುತ್ತಾರೆ. ಆದರೆ ಕ್ಷಣರ್ಧದಲ್ಲಿ ಮತ್ತೆ ಈ ಜೇಡಗಳು ಗೂಡು ಕಟ್ಟಿ ವಾಸಿಸಲು ಆರಂಭಿಸುತ್ತವೆ.
ಈ ಸಮಸ್ಯಗೆ ಪರಿಹಾರ ಇದೆ. ಈ ರೀತಿ ಮಾಡುವುದರಿಂದ ಜೇಡಗಳು ಮತ್ತೊಮ್ಮೆ ನಿಮ್ಮ ಮನೆಯಲ್ಲಿ ಬಲೇ ಕಟ್ಟದಂತೆ ತಡೆಯ ಬಹುದು. ಅದು ಹೇಗೆ ಮುಂದೆ ಓದಿ...
ಈಗಾಗಲೆ ನಿಮ್ಮ ಮನೆಯಲ್ಲಿ ಜೇಡ ಬಲೆ ಎಣೆದಿದ್ದರೆ, ಮೊದಲು ಒಂದು ಪೊರಕೆಯ ಸಹಾಯದಿಂದ ಅ ಗೂಡನ್ನು ನಾಶ ಮಾಡಿ ಸ್ಥಳವನ್ನು ಸ್ವಚ್ಛಗೊಳಿಸಿಡಿ. ನಂತರ ಬೌಲ್‌ನಲ್ಲಿ ಚೂರು ವೈಟ್ ವಿನೆಗರ್ ಹಾಕಿ ಅದಕ್ಕೆ ಚೂರು ನೀರು ಬೆರೆಸಿ.
ಇದನ್ನೂ ಓದಿ: Split ends: ಸೀಳಿದ ತುದಿಯ ಕಾರಣ ಕೂದಲು ಬೆಳೆಯುತ್ತಿಲ್ಲವೇ? ಈ ಟಿಪ್ಸ್ ಬಳಸಿ ಹಾವಿನಂತಹ ಜಡೆ ನಿಮ್ಮದಾಗುತ್ತೆ
ಈ ಮಿಶ್ರಣವನ್ನು ಸ್ವಲ್ಪ ಸಮಯದ ವರೆಗೆ ಹಾಗೆಯ ಇಡಿ, ಈ ಎರಡು ಪದಾರ್ಥಗಳು ಕೂಡ ಚಿನ್ನಾಗಿ ಮಿಕ್ಸ್ ಆಗಬೇಕು. ನಂತರ ಈ ಮಿಶ್ಣದ ಬೌಲ್‌ನಲ್ಲಿ ಒಂದು ಬಟ್ಟೆಯನ್ನು ಅದ್ದಿ ಒಂದು ಉದ್ದವಾದ ಕೋಲು ಅಥವಾ ಪೊರಕೆಗೆ ಇದನ್ನು ಕಟ್ಟಿ ತುದಿಯಿಂದ ಗೋಡೆಯನ್ನು ಒರೆಸಿಕೊಳ್ಳಿ.
ಇದು ಜೇಡಗಳು ಮತ್ತೆ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ.
ಕೇವಲ ವೈಟ್ ವಿನೆಗರ್ ಅಷ್ಟೆ ಅಲ್ಲ ಬೆಳ್ಳುಳ್ಳಿ ಹಾಗೂ ಚಕ್ಕೆಯ ಮಿಶ್ರಣ ಕೂಡ ಈ ಜೇಡಗಳು ಬಲೆ ಎಣೆಯದಂತೆ ತಡೆಯಲು ಸಹಾಯ ಮಾಡುತ್ತದೆ. ಒಂದು ಜಾರ್‌ನಲ್ಲಿ ಬೆಳ್ಳುಳ್ಳಿ ಹಾಗೂ ಚಕ್ಕೆಯ ತುಂಡುಗಳನ್ನು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ. ಇದಕ್ಕೆ ಸ್ವಾಲ್ಪ ನೀರು ಸೇರಿಸಿ ಸೋಸಿಕೊಳ್ಳಿ. ಮನೆ ಒರೆಸುವ ಮೋಪ್‌ನಲ್ಲಿ ಈ ರಸವನ್ನು ಅದ್ದಿಕೊಂಡು ಮನೆಯ ಗೋಡೆಯ ಮೂಲೆಗಳು ಹಾಗೂ ಜೇಡ ಬಲೆ ಎಣೆಯುವ ಜಾಗಗಳಲ್ಲಿ ಇದನ್ನು ಒರೆಸಿ. ಇದು ಜೇಡ ಆ ಸ್ಥಳದಲ್ಲಿ ಬಲೆ ಎಣೆಯದಂತೆ ತಡೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಗಮನಿಸಿ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.