Rayaru Bandaru Mavana Manege: ಕೆಲವು ಚಲನಚಿತ್ರಗಳು ಎಷ್ಟೇ ವರ್ಷಗಳು ಕಳೆದರೂ ಅದರ ನಾವಿನ್ಯತೆಯನ್ನು ಹಾಗೆಯೇ ಉಳಿಸಿಕೊಂಡು ಎವರ್ ಗ್ರೀನ್ ಎನಿಸಿಕೊಳ್ಳುತ್ತವೆ. ಮತ್ತೆ ಮತ್ತೆ ನೋಡಿದರೂ ಬೇಸರ ಉಂಟಾಗುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಕಥಾವಸ್ತು ಹಾಗೂ ಆ ಕಥೆಯನ್ನು ನೋಡುಗರ ಮನಮುಟ್ಟುವಂತೆ ಚಿತ್ರರೂಪದಲ್ಲಿ ಕಟ್ಟಿಕೊಡುವ ನಿರ್ದೇಶಕನ ಪ್ರಾವಿಣ್ಯತೆ ಹಾಗೂ ಕಲಾವಿದರ ಮನೋಜ್ನ ಅಭಿನಯ. ಇಂತಹ ಚಲನಚಿತ್ರಗಳ ಸಾಲಿನಲ್ಲಿ ‘ರಾಯರು ಬಂದರು ಮಾವನ ಮನೆಗೆ’ ಚಿತ್ರವು ವಿಶೇಷ ಸ್ಥಾನ ಪಡೆಯುತ್ತದೆ.
ಪ್ರಿಯದರ್ಶನ್ ಅವರ ನಿರ್ದೇಶನದ ‘ಚಿತ್ರಮ್’ (1988) ಹೆಸರಿನ ಮಲಯಾಳಂ ಚಿತ್ರದ ರಿಮೇಕ್. ಮೂಲಚಿತ್ರದಲ್ಲಿ ಮೋಹನ್ ಲಾಲ್ ಮತ್ತು ರಂಜಿನಿಅವರು ಅತ್ಯುತ್ತಮಮವಾಗಿ ಅಭಿನಯಿಸಿದ್ದರು. ಆದರೆ ಅದನ್ನೂ ಮೀರಿಸುವಂತೆ ಕನ್ನಡಲ್ಲಿ ದಾದಾ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರು ಭಾವನಾತ್ಮಕ ಅಭಿನಯ ಮಾಡಿದ್ದಾರೆ. ಮಲಯಾಳಂ ಚಿತ್ರದ ಕಾಪಿರೈಟ್ ಪಡೆದ ನಟ, ನಿರ್ಮಾಪಕ ಮತ್ತು ನಿರ್ದೇಶಕ ದ್ವಾರಕೀಶ್ ಅವರು, ʼಈ ಚಿತ್ರದಲ್ಲಿ ‘ವಿಷ್ಣು’ ಪಾತ್ರವನ್ನು ವಿಷ್ಣುವರ್ಧನ್ ಅವರಿಂದ ಮಾತ್ರ ಮಾಡಲು ಸಾಧ್ಯ, ಈ ಕ್ಯಾರೆಕ್ಟರ್ ಅವರಿಗೆ ಹೇಳಿಮಾಡಿಸಿದಂತಿದೆʼ ಎಂದು ಸಂಕಲ್ಪ ಮಾಡಿಕೊಳ್ಳುತ್ತಾರೆ.
ಆದರೆ ಆ ಸಂದರ್ಭದಲ್ಲಿ ದಾದಾ-ದ್ವಾರಕೀಶ್ ಸಂಬಂಧ ಅಷ್ಟು ಚೆನ್ನಾಗಿರುವುದಿಲ್ಲ. ಆದರೆ ಮತ್ತೆ ಒಂದುಗೂಡಿದ ʼಆಪ್ತ-ಮಿತ್ರʼರ ಜೋಡಿ ಬಹಳ ಸಮಯವನ್ನು ತೆಗೆದುಕೊಂಡು ಅಂದರೆ 1993ರಲ್ಲಿ ಇಂತಹ ಅತ್ಯದ್ಭುತ ಚಿತ್ರವೊಂದನ್ನು ಅಭಿಮಾನಿಗಳೆದುರು ತರಲು ಶುಭ ಮುಹೂರ್ತ ಸಿಕ್ಕಿದ್ದು ಇತಿಹಾಸ. ಹಾಸ್ಯದಿಂದ ಪ್ರಾರಂಭವಾಗುವ ಇದರ ಕಥಾಭಾಗ ನಿಧಾನವಾಗಿ ನಮಗರಿವಿಲ್ಲದಂತೆ ನಮ್ಮನ್ನು ಕಥೆಯ ಒಳಭಾಗಕ್ಕೆ ಭಾವನಾತ್ಮಕವಾಗಿ ಸೆಳೆದುಕೊಳ್ಳುತ್ತದೆ.
ಇದನ್ನೂ ಓದಿ: ಇಬ್ಬರು ಸ್ಟಾರ್ ನಟರೊಂದಿಗೆ ಅಫೇರ್.. ಎಂಗೇಜ್‌ಮೆಂಟ್ ಬಳಿಕ ಮದುವೆ ಕ್ಯಾನ್ಸಲ್.. 41ನೇ ವಯಸ್ಸಿನಲ್ಲೂ ಒಂಟಿ ಈ ನಟಿ!
ಪತಿಯ ಪಾತ್ರವನ್ನು ಮಾಡಲು ಬಾಡಿಗೆ ವ್ಯಕ್ತಿಯಾಗಿ ಬಂದಿದ್ದ ಕಥಾನಾಯಕ ‘ವಿಷ್ಣು’ ಆತನ ಗುಣದಿಂದ ಎಲ್ಲರ ಹೃದಯವನ್ನು ಗೆಲ್ಲುತ್ತಾನೆ. ಆತನನ್ನು ದ್ವೇಷಿಸುತ್ತಿದ್ದ ಕಥಾನಾಯಕಿ ಜೇವಕ್ಕಿಂತಲು ಹೆಚ್ಚಾಗಿ ಆತನನ್ನು ಇಷ್ಟಪಡತೊಡಗುತ್ತಾಳೆ. ವಿಷ್ಣು ಕೂಡ ತನಗರಿವಿಲ್ಲದಂತೆ ಪ್ರೀತಿಯಲ್ಲಿ ಬೀಳುತ್ತಾನೆ. ಆಗಲೇ ಖ್ಯಾತ ಖಳನಟ ವಜ್ರಮುನಿಯವರ ಎಂಟ್ರಿಯೊಂದಿಗೆ ಕಥೆಗೆ ಇನ್ನೊಂದು ಹೊಸ ತಿರುವು ಸಿಗುತ್ತದೆ.
ತನ್ನ ಹೆಂಡತಿಯನ್ನು ಆಕಸ್ಮಿಕವಾಗಿ ಕೊಲೆ ಮಾಡಿದ್ದ ವಿಷ್ಣು ಮರಣದಂಡನೆಗೆ ಗುರಿಯಾದ ವ್ಯಕ್ತಿಯಾಗಿದ್ದು, ತನ್ನ ಪುಟ್ಟ ಮಗನ ಆಪರೇಷನ್‌ಗೆ ಅಗತ್ಯವಿರುವ ಹಣವನ್ನು ಹೇಗಾದರೂ ಹೊಂದಿಸುವ ಉದ್ದೇಶದಿಂದ ಜೈಲಿನಿಂದ ತಪ್ಪಿಸಿಕೊಂಡು ಬಂದು, ಸುಮಾಳ ಗಂಡನಾಗಿ ಅಭಿನಯಿಸಲು ಒಪ್ಪಿಕೊಂಡಿರುತ್ತಾನೆ. ಜೈಲರ್ ವಜ್ರಮುನಿ ಈಗ ವಿಷ್ಣು ಇರುವ ಜಾಗವನ್ನು ಪತ್ತೆಹಚ್ಚಿ ಪುನಃ ಸೆರೆಮನೆಗೆ ಕರೆದೊಯ್ಯುವ ಸನ್ನಿವೇಶ. ವಜ್ರಮುನಿ ಅವರ ಪ್ರವೇಶದ ನಂತರ ಪ್ರತಿಯೊಂದು ಸನ್ನಿವೇಶ ಅತ್ಯಂತ ಭಾವನಾತ್ಮಕವಾಗಿ ಮೂಡಿಬಂದಿದೆ.
ಈ ಚಿತ್ರದ ಕ್ಲೈಮ್ಯಾಕ್ಸ್ ಅಂತೂ ಎಂತಹ ಕಲ್ಲು ಹೃದಯದವರಿಗೂ ಕಣ್ಣೀರು ತರಿಸುತ್ತದೆ. ವಿಷ್ಣುದಾದಾ ಅವರ ಭಾವನಾತ್ಮಕ ಅಭಿನಯ, ದುಃಖದ ಸಂಭಾಷಣೆಯಲ್ಲಿ ಅವರು ತೋರುವ ಮುಖಭಾವ ಇನ್ನೊಬ್ಬ ನಟ ಮಾಡಲು ಸಾಧ್ಯವಿಲ್ಲ. ಇಂತಹ ಶ್ರೇಷ್ಠ ನಟನನ್ನು ಪಡೆದಿದ್ದ ಕನ್ನಡಿಗರಾದ ನಾವೇ ಧನ್ಯರು. ರಾಜ್-ಕೋಟಿ ಅವರ ಹಿನ್ನೆಲೆ ಸಂಗೀತ ಕಥೆಯ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸಿ.ಆರ್.ಸಿಂಹ, ವಜ್ರಮುನಿ, ದ್ವಾರಕೀಶ್, ಡಾಲಿ, ಬಿಂದಿಯಾ ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ರಿಮೇಕ್ ಕಥೆಯನ್ನೂ ಇಷ್ಟೊಂದು ಹೊಸತನದಿಂದ ಸಂಪದ್ಭರಿತವಾಗಿ ಕಟ್ಟಿಕೊಡಬಹುದು ಎನ್ನುವುದನ್ನು ಈ ಚಿತ್ರದಲ್ಲಿ ದ್ವಾರಕೀಶ್ ತೋರಿಸಿಕೊಟ್ಟಿದ್ದಾರೆ.
(✍🏾 ಇದು ಫೇಸ್‌ಬುಕ್‌ನಲ್ಲಿ ಪ್ರಕಟವಾದ ಬರಹ)
ಇದನ್ನೂ ಓದಿ: ʼಲ್ಯಾಂಡ್ ಲಾರ್ಡ್ʼ ಶೂಟಿಂಗ್ ಸೆಟ್‌ನಲ್ಲಿ ದುನಿಯಾ ವಿಜಯ್ ಬರ್ತ್‌ಡೇ ಸೆಲೆಬ್ರೇಷನ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.