ನವದೆಹಲಿ: ಬೇ ಎಲೆ ಅಥವಾ ಪುಲಾವ್ ಎಲೆ ಒಂದು ಮಸಾಲೆ ಪದಾರ್ಥವಾಗಿದ್ದು, ಇದನ್ನು ಬಹುತೇಕರು ಬಳಸುತ್ತಾರೆ. ರುಚಿಗೆ ವರದಾನವಾಗಿರುವ ಈ ಪುಲಾವ್ ಎಲೆಯು ಔಷಧೀಯ ಗುಣ(Bay Leaf Benefits)ಗಳಿಗೂ ಹೆಸರುವಾಸಿ. ಹೆಚ್ಚಿನವರು ಇದನ್ನು ಆಹಾರದಲ್ಲಿನ ರುಚಿ ಹೆಚ್ಚಿಸಲು ಮಾತ್ರ ಬಳಸುತ್ತಾರೆ. ಆದರೆ ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅಡುಗೆಮನೆಯಲ್ಲಿ ಈ ವಸ್ತುವಿಗೆ ವಿಶೇಷ ಸ್ಥಾನವಿದೆ. ಯಾವುದೇ ತರಕಾರಿ ಅಥವಾ ಆಹಾರ ಪದಾರ್ಥಗಳಿಗೆ ಈ ಎಲೆ ಸೇರಿಸಿದ ತಕ್ಷಣ ಅದರ ರುಚಿ ಮತ್ತು ವಾಸನೆ ಎರಡೂ ಹೆಚ್ಚಾಗುತ್ತದೆ.
ಪುಲಾವ್ ಎಲೆ ಆರೋಗ್ಯಕ್ಕೆ ಮತ್ತು ರುಚಿಗೆ ತುಂಬಾ ಪ್ರಯೋಜನಕಾರಿ ಎಂಬುದು ಕೆಲವೇ ಜನರಿಗೆ ತಿಳಿದಿದೆ. ಇದರ ನಿಯಮಿತ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿ(Bay Leaf Health benefits) ಹೆಚ್ಚಾಗುವುದಲ್ಲದೆ, ಅನೇಕ ರೋಗಗಳು ದೂರ ಹೋಗುತ್ತವೆ. ಈ ಎಲೆ ಸೇವಿಸುವುದರಿಂದ ಏನು ಪ್ರಯೋಜನವೆಂದು ತಿಳಿದುಕೊಳ್ಳಿರಿ.
ಮೂತ್ರಪಿಂಡದ ಕಾಯಿಲೆಗಳಲ್ಲಿ ಪ್ರಯೋಜನ
ಪುಲಾವ್ ಎಲೆಯ ಸೇವನೆಯು ಮೂತ್ರಪಿಂಡದ ಸಮಸ್ಯೆಗಳಲ್ಲಿ ಹೆಚ್ಚಿನ ಪ್ರಯೋಜನ(Bay Leaf Nutrition)ವನ್ನು ನೀಡುತ್ತದೆ. ಇದರ ಬಳಕೆಯಿಂದ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳುವುದಿಲ್ಲ ಮತ್ತು ಅದು ತನ್ನ ಕಾರ್ಯವನ್ನು ಸರಾಗವಾಗಿ ನಿರ್ವಹಿಸುತ್ತದೆ. ಇದರಿಂದ ಮೂತ್ರ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಗಳೂ ಶಾಶ್ವತವಾಗಿ ದೂರವಾಗುತ್ತವೆ.
ಇದನ್ನೂ ಓದಿ: ಈ ಎಲೆಯನ್ನು ಬಳಸುವುದರಿಂದ ಪೂರ್ತಿಯಾಗಿ ಹೋಗಲಾಡಿಸಬಹುದು ಬಿಳಿ ಕೂದಲಿನ ಸಮಸ್ಯೆ
ಜೀರ್ಣಕ್ರಿಯೆಯಲ್ಲಿ ಸಹಕಾರಿ
ಅನೇಕ ಜನರು ಆಹಾರವನ್ನು ಜೀರ್ಣಿಸಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಆಹಾರ ಸೇವಿಸಿದ ತಕ್ಷಣ ಮಲಬದ್ಧತೆ, ಸೆಳೆತ ಅಥವಾ ಅಸಿಡಿಟಿಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನೀವು ಈ ಎಲೆ(Bay Leaf) ಬಳಸಿ ತರಕಾರಿಗಳನ್ನು ಸೇವಿಸಿದರೆ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಂದ ಪರಿಹಾರ ಪಡೆಯಬಹುದು.
ಕಣ್ಣು ಮತ್ತು ರಕ್ತಕ್ಕೆ ಪ್ರಯೋಜನಕಾರಿ
ವಿಟಮಿನ್ C ಮತ್ತು ವಿಟಮಿನ್ A ಈ ಪುಲಾವ್ ಎಲೆ(Bay Leaf Benefits)ಯಲ್ಲಿ ಕಂಡುಬರುತ್ತವೆ. ಈ ಎರಡೂ ಜೀವಸತ್ವಗಳು ನಮ್ಮ ದೇಹದ ಬೆಳವಣಿಗೆಗೆ ಬಹಳ ಮುಖ್ಯ. ವಿಟಮಿನ್ C ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದೇ ರೀತಿ ವಿಟಮಿನ್ A ನಮ್ಮ ಕಣ್ಣುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇನ್ಸುಲಿನ್ ಅನ್ನು ನಿಯಂತ್ರಿಸುತ್ತದೆ
ಶುಗರ್ ರೋಗಿಗಳಿಗೆ ಪುಲಾವ್ ಎಲೆ(Bay Leaf Benefits) ರಾಮಬಾಣದಂತೆ ಕೆಲಸ ಮಾಡುತ್ತದೆ. ಇದರ ಸೇವನೆಯು ಮಧುಮೇಹ ರೋಗಿಗಳಲ್ಲಿ ಹೆಚ್ಚುತ್ತಿರುವ ಅಥವಾ ಕಡಿಮೆಯಾಗುತ್ತಿರುವ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಿಸಲು ಕೆಲಸ ಮಾಡುತ್ತದೆ. ನೀವು ಆಹಾರದಲ್ಲಿ ಸಂಪೂರ್ಣ ಎಲೆ ಅಥವಾ ಇದರ ತುಂಡುಗಳನ್ನು ಹಾಕಿ ಅಡುಗೆ ಮಾಡಿ ಸೇವಿಸಬಹುದು.
ಇದನ್ನೂ ಓದಿ: Milk Powder Side Effects: ಆರೋಗ್ಯದ ಮೇಲೆ ಹಾಲಿನ ಪುಡಿ ಗಂಭೀರ ಹಾನಿ ಉಂಟುಮಾಡಬಹುದು, ಎಚ್ಚರ
ನಿದ್ರಾಹೀನತೆಯ ಸಮಸ್ಯೆ ದೂರ ಮಾಡುತ್ತದೆ
ನಿದ್ರಾಹೀನತೆಯ ಸಮಸ್ಯೆಯಿಂದ ನೀವು ತೊಂದರೆಗೊಳಗಾಗಿದ್ದರೆ ಪುಲಾವ್ ಎಲೆ(Bay Leaf) ನಿಮಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ರಾತ್ರಿ ಮಲಗುವ ಮುನ್ನ ಈ ಎಲೆಯನ್ನು ಉಪಯೋಗಿಸಿ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಬೆಚ್ಚನೆಯ ನೀರಿನಲ್ಲಿ ಕೆಲವು ಹನಿ ಎಲೆಯ ಎಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆ ಬರುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.