Appu Rakhi: ಸದ್ಯ ಎಲ್ಲೆಲ್ಲೂ ರಕ್ಷಾ ಬಂಧನದ ತಯಾರಿ ಜೋರಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ರಾಖಿಗಳು ಬಂದಿವೆ. ಸಹೋದರ-ಸಹೋದರಿಯರ ಬಾಂಧವ್ಯದ ಸಂಕೇತವಾಗಿರುವ ರಕ್ಷಾ ಬಂಧನದ ಪ್ರಯುಕ್ತ ರಾಜ್ಯದ ಅನೇಕ ಕಡೆಗಳಲ್ಲಿ ಪುನೀತ್ ರಾಜ್‌ಕುಮಾರ್ ಫೋಟೋ ಇರುವ ರಾಖಿಗಳು ಮಾರುಕಟ್ಟೆಗೆ ಬಂದಿವೆ. ಅಪ್ಪು ಮೇಲಿನ ಅಭಿಮಾನದಿಂದ ಜನ ಈ ರಾಖಿಗಳನ್ನು ಕೊಳ್ಳುತ್ತಿದ್ದಾರೆ. ನಟ ಪುನೀತ್ ರಾಜ್‌ಕುಮಾರ್ ಅವರು ಇಹಲೋಕ ತ್ಯಜಿಸಿ ಹಲವು ತಿಂಗಳುಗಳು ಕಳೆದರೂ ಅವರು ಜನಮಾನಸದಲ್ಲಿ ಅಜಾರಾಮರರಾಗಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಅನೇಕ ಉದಾಹರಣೆಗಳು ಸಿಗುತ್ತಿವೆ. ಪ್ರತಿ ವಿಶೇಷ ಸಂದರ್ಭದಲ್ಲೂ, ಹಬ್ಬ-ಹರಿದಿನಗಳಲ್ಲೂ ಪುನೀತ್ ಅವರ ಸ್ಮರಣೆ ಇದ್ದೇಇರುತ್ತದೆ. ಇದೀಗ ರಕ್ಷಾ ಬಂಧನದ ಪ್ರಯುಕ್ತ ಮಾರುಕಟ್ಟೆಯಲ್ಲಿ ಪುನೀತ್ ರಾಜ್‌ಕುಮಾರ್ ಅವರ ಫೋಟೋ ಇರುವ ಅಪ್ಪು ರಾಖಿ ಬಂದಿದ್ದು, ಜನರ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಆಗಸ್ಟ್ 11ರಂದು ಅಂದರೆ ನಾಳೆ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಬಗೆಬಗೆಯ ರಾಖಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಸಿಂಪಲ್ ಹಾಗೂ ಬಜೆಟ್ ಫ್ರೆಂಡ್ಲಿ ರಾಖಿಯಿಂದ ದುಬಾರಿ ಬೆಲೆಯ ರಾಖಿಗಳು, ಹಲವು ಡಿಸೈನ್ಗಳ ರಾಖಿಗಳನ್ನು ನಾವು ಮಾರ್ಕೆಟ್‌ನಲ್ಲಿ ಕಾಣಬಹುದು.
ಇದನ್ನೂ ಓದಿ : Vastu tips : ಬೆಲ್ಲದಲ್ಲಿ ಅಡಗಿದೆ ನಿಮ್ಮ ಆರ್ಥಿಕ ಪ್ರಗತಿಯ ಗುಟ್ಟು! ಆರೋಗ್ಯ ಮಾತ್ರವಲ್ಲ ಅದೃಷ್ಟಕ್ಕೂ ಬೇಕು ಬೆಲ್ಲ
ಇದೀಗ ಕೊಪ್ಪಳ ಸೇರಿದಂತೆ ಕರ್ನಾಟಕದ ಹಲವು ಕಡೆಗಳಲ್ಲಿಅಪ್ಪು ಅವರ ಫೋಟೋ ಇರುವ ರಾಖಿಗಳನ್ನು ತಯಾರಿಸಲಾಗಿದ್ದು, ಆ ಮೂಲಕ ರಕ್ಷಾ ಬಂಧನಕ್ಕೆ ವಿಶೇಷ ಕಳೆ ಬಂದತಾಗಿದೆ. ಕೇವಲ ಸಿನಿಮಾ, ನಟನೆ ಮಾತ್ರವಲ್ಲದೇ ತಮ್ಮ ನಗು, ವ್ಯಕ್ತಿತ್ವ, ಸಮಾಜಮುಖಿ ಕಾರ್ಯಗಳಿಂದ ಪುನೀತ್ ರಾಜ್‌ಕುಮಾರ್ ಅವರು ಜನಮನ ಗೆದ್ದಿದ್ದಾರೆ. ಇದೇ ಕಾರಣಕ್ಕೆ ಇಂದಿಗೂ ಅವರನ್ನು ದ್ವೇಷಿಸುವವರಿಲ್ಲ. ಪ್ರತಿ ಮನೆಯ ಮಗನಂತಿದ್ದ ಅಪ್ಪು ಅಗಲಿಕೆಗೆ ಇಡೀ ಕರುನಾಡೇ ಕಣ್ಣೀರಿಟ್ಟಿತ್ತು. ಈಗಲೂ ಅದೊಂದು ಕರಾಳ ದಿನದಂತೆಯೇ ಎಲ್ಲರೀಗೂ ಭಾಸವಾಗುತ್ತಿದೆ. ನಾಡು-ನುಡಿಯ ಮೇಲೆ ಅಪಾರ ಗೌರವ ಇಟ್ಟಿದ್ದ ಪುನೀತ್ ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ.
ಅಪ್ಪು ರಕ್ಷಾ ಬಂಧನ #PuneethRajkumar #appu @RRK_Official_ @Ashwini_PRK @PuneethRajkumar #Rakhi #RakshaBandhan pic.twitter.com/qJp5LvEMYd
— Shankar B Miskin (@shankar_miskin) July 21, 2022
ಪುನೀತ್ ಅವರ ಮಾದರಿ ಕೆಲಸಗಳನ್ನು ಪರಿಗಣಿಸಿ, ಮರಣೋತ್ತರವಾಗಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡಿತು. ನವೆಂಬರ್ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಇನ್ನೂ ಅವರ ‘ಗಂಧದ ಗುಡಿ’ ಸಾಕ್ಷ್ಯಚಿತ್ರದಲ್ಲಿ ಕರುನಾಡಿನ ಅರಣ್ಯ ಮತ್ತು ವನ್ಯ ಜೀವಿಗಳ ಬಗ್ಗೆ ಬಿಚ್ಚಿಡಲಾಗಿದೆ. ಈ ಡಾಕ್ಯುಮೆಂಟರಿ ಮೂವಿ ಅಕ್ಟೋಬರ್ 28ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ : Vastu Tips : ಮನೆಯ ಈ ದಿಕ್ಕಿನಲ್ಲಿ ಗಡಿಯಾರ ಹಾಕಿದ್ರೆ ನಿಮ್ಮ ಕೆಟ್ಟ ಸಮಯ ಶುರುವಾದಂತೆ
ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಪರಾಹ್ನ ಅಥವಾ ಪ್ರದೋಷ (ಮುಸ್ಸಂಜೆ ) ಕಾಲದಲ್ಲಿ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಇದೊಂದು ಮಹತ್ವ ಪೂರ್ಣ ಆಚರಣೆಯಾಗಿದ್ದು, ಅಕ್ಕ-ತಂಗಿಯರು ಅಣ್ಣ-ತಮ್ಮಂದಿರಿಗೆ ರಾಖಿಯನ್ನು ಕಟ್ಟುವ ಸಂಪ್ರದಾಯವಿದೆ. ರಕ್ಷಾ ಬಂಧನವು ಸಹೋದರ ಸಹೋದರಿಯರ ಹಬ್ಬವಾಗಿದ್ದು, ಈ ದಿನ ಸಹೋದರಿ ತನ್ನ ಸಹೋದರನ ಕೈ ಮಣಿಕಟ್ಟಿಗೆ ರಾಖಿಯನ್ನು ಕಟ್ಟುತ್ತಾಳೆ. ರಕ್ಷಾ ಬಂಧನ ಹಬ್ಬದ ಸಂಭ್ರಮಕ್ಕೆ ಈ ಬಾರಿ ಅಪ್ಪು ರಾಖಿ ಮೆರಗು ತಂದಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.