ಎಸ್.ಆರ್.ಎಸ್.ಟ್ರಾವೆಲ್ಸ್ ಗೆ ದಂಡ ವಿಧಿಸಿ, ಪರಿಹಾರಕ್ಕೆ ಕೋರ್ಟ್ ಆದೇಶ

ಧಾರವಾಡ ತಾಲ್ಲೂಕಿನ ನಾರಾಯಣಪುರದ ವಾಸಿ ಮಾರುತಿ ಶಾನಬಾಗ್ ಎಂಬುವವರು ದಿ:22/12/2023 ರಂದು ರೂ.10,000/- ಕಿಮ್ಮತ್ತಿನ ಆಯುರ್ವೇದಿಕ್ ಆಹಾರ ಸಾಮಾನುಗಳನ್ನು ಮುಂಬೈಯಲ್ಲಿರುವ ಸಂತೋಷ ಎಂಬುವವರಿಗೆ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ನವರ ಮುಖಾಂತರ ಸರ್ವಿಸ್ ಚಾರ್ಜ ಪಾವತಿಸಿ ಪಾರ್ಸಲ್ ಕಳುಹಿಸಿದ್ದರು. ಆದರೆ ಅದು ಸಂತೋಷ ಅವರಿಗೆ ತಲುಪಿರಲಿಲ್ಲ.

Written by - Manjunath N | Last Updated : Oct 9, 2024, 05:49 PM IST
  • ತಕ್ಷಣ ದೂರುದಾರರು ಎದುರುದಾರರಿಗೆ ಭೇಟಿಯಾಗಿ ಪಾರ್ಸಲ್ ತಲುಪಿರದ ಬಗ್ಗೆ ತಿಳಿಸಿರುತ್ತಾರೆ.
  • ಸಾಕಷ್ಟು ಸಲ ವಿಚಾರಿಸಿದರೂ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ಗೆ ಅದಕ್ಕೆ ಉತ್ತರ ನೀಡದೇ ಸತಾಯಿಸಿರುತ್ತಾರೆ.
  • ಅಲ್ಲದೇ ತಾವು ಕೇವಲ ರೂ.1,000/- ಗೆ ಮಾತ್ರ ಪರಿಹಾರ ಕೊಡಲು ಸೀಮಿತರಾಗಿರುತ್ತೇವೆ ಎಂದು ಉತ್ತರ ನೀಡಿರುತ್ತಾರೆ.
ಎಸ್.ಆರ್.ಎಸ್.ಟ್ರಾವೆಲ್ಸ್ ಗೆ ದಂಡ ವಿಧಿಸಿ, ಪರಿಹಾರಕ್ಕೆ ಕೋರ್ಟ್ ಆದೇಶ title=
ಸಾಂಧರ್ಭಿಕ ಚಿತ್ರ

ಧಾರವಾಡ : ಧಾರವಾಡ ತಾಲ್ಲೂಕಿನ ನಾರಾಯಣಪುರದ ವಾಸಿ ಮಾರುತಿ ಶಾನಬಾಗ್ ಎಂಬುವವರು ದಿ:22/12/2023 ರಂದು ರೂ.10,000/- ಕಿಮ್ಮತ್ತಿನ ಆಯುರ್ವೇದಿಕ್ ಆಹಾರ ಸಾಮಾನುಗಳನ್ನು ಮುಂಬೈಯಲ್ಲಿರುವ ಸಂತೋಷ ಎಂಬುವವರಿಗೆ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ನವರ ಮುಖಾಂತರ ಸರ್ವಿಸ್ ಚಾರ್ಜ ಪಾವತಿಸಿ ಪಾರ್ಸಲ್ ಕಳುಹಿಸಿದ್ದರು. ಆದರೆ ಅದು ಸಂತೋಷ ಅವರಿಗೆ ತಲುಪಿರಲಿಲ್ಲ.

ಇದನ್ನೂ ಓದಿ: "ಕರ್ನಾಟಕ ಮರ್ಯಾದೆ ತೆಗೆದವರು ಈಗ ನೈತಿಕತೆಯ ಪಾಠ ಮಾಡುತ್ತಿದ್ದಾರೆ"

ತಕ್ಷಣ ದೂರುದಾರರು ಎದುರುದಾರರಿಗೆ ಭೇಟಿಯಾಗಿ ಪಾರ್ಸಲ್ ತಲುಪಿರದ ಬಗ್ಗೆ ತಿಳಿಸಿರುತ್ತಾರೆ. ಸಾಕಷ್ಟು ಸಲ ವಿಚಾರಿಸಿದರೂ ಎದುರುದಾರರಾದ ಎಸ್.ಆರ್.ಎಸ್. ಟ್ರಾವೆಲ್ಸ್‍ಗೆ ಅದಕ್ಕೆ ಉತ್ತರ ನೀಡದೇ ಸತಾಯಿಸಿರುತ್ತಾರೆ. ಅಲ್ಲದೇ ತಾವು ಕೇವಲ ರೂ.1,000/- ಗೆ ಮಾತ್ರ ಪರಿಹಾರ ಕೊಡಲು ಸೀಮಿತರಾಗಿರುತ್ತೇವೆ ಎಂದು ಉತ್ತರ ನೀಡಿರುತ್ತಾರೆ. ಮನನೊಂದ ದೂರುದಾರರು ಎದುರುದಾರರ ಸೇವಾ ನ್ಯೂನ್ಯತೆಗೆ ಧಾರವಾಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದಿ:01/03/2024 ರಂದು ದೂರು ಸಲ್ಲಿಸಿದ್ದರು.

ಇದನ್ನೂ ಓದಿ: ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಂತ ವೇಗವಾಗಿ ಬೌಲಿಂಗ್ ಮಾಡಿದ್ದು ಯಾರು?

ಸದರಿ ದೂರಿನ ಕೂಲಂಕುಷ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ ಕೆ.ಭೂತೆ, ಸದ್ಯಸ್ಯರುಗಳಾದ ವಿಶಾಲಾಕ್ಷಿ ಬೋಳಶೆಟ್ಟಿ, ಪ್ರಭು ಹಿರೇಮಠ. ದೂರುದಾರರು ಎದುರುದಾರರ ಬಳಿ ಸೇವಾ ಶುಲ್ಕ ರೂ.220/- ಕೊಟ್ಟು ಪಾರ್ಸಲನ್ನು ಮುಂಬೈಯಿಗೆ ಕಳುಹಿಸಿರುವುದು ಕಂಡುಬರುತ್ತದೆ. ಅಲ್ಲದೇ ಅದು ಮುಂಬೈಯಿಗೆ ಹೋಗಿ ಮುಟ್ಟಿರದೇ ಇರುವುದು ಸೇವಾ ನ್ಯೂನ್ಯತೆ ಅಂತಾ ಪರಿಗಣಿಸಿ ದೂರುದಾರರಿಗೆ ಆಗಿರುವ ನಷ್ಟಕ್ಕೆ ರೂ.5,000/- ಶೇ8% ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ಬುಕ್ ಮಾಡಿದ ದಿ:22/12/2023 ರಂದು ಪೂರ್ತಿ ಹಣ ಸಂದಾಯವಾಗುವವರೆಗೆ ದೂರುದಾರರಿಗೆ ಕೊಡಲು ಎದುರುದಾರರಿಗೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ ಮತ್ತು ಮಾನಸಿಕ ಹಿಂಸೆಗೆ ರೂ.25,000/- ಪರಿಹಾರ ಮತ್ತು ಪ್ರಕರಣದ ಖರ್ಚು ವೆಚ್ಚಾ ರೂ.10,000/-  ಕೊಡಬೇಕು ಅಂತಾ ಧಾರವಾಡದ ಎಸ್.ಆರ್.ಎಸ್. ಟ್ರಾವೆಲ್ಸ್‍ಗೆ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News