Ramesh Jarkiholi : ರಾಜೀನಾಮೆ ಏನಿದ್ರೂ ಮುಂಬೈನಲ್ಲೆ, ಸುತ್ತೂರಲ್ಲಿ ಅಲ್ಲ : ರಮೇಶ್ ಜಾರಕಿಹೊಳಿ

ಸುತ್ತೂರು ಮಠಕ್ಕೆ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅಷ್ಟೇ. ಇಲ್ಲಿ ಬಂದಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ. ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

Last Updated : Jun 25, 2021, 02:43 PM IST
  • ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈ‌ನಲ್ಲಿ
  • ಸುತ್ತೂರಲ್ಲಿ ಅಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ
  • ಸುತ್ತೂರು ಮಠಕ್ಕೆ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅಷ್ಟೇ
Ramesh Jarkiholi : ರಾಜೀನಾಮೆ ಏನಿದ್ರೂ ಮುಂಬೈನಲ್ಲೆ, ಸುತ್ತೂರಲ್ಲಿ ಅಲ್ಲ : ರಮೇಶ್ ಜಾರಕಿಹೊಳಿ title=

ಮೈಸೂರು : ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ವಿಚಾರ ಮುಂಬೈ‌ನಲ್ಲಿ, ಸುತ್ತೂರಲ್ಲಿ ಅಲ್ಲ   ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಸುತ್ತೂರು ಮಠ(Sri Suttur Math)ದ ಸ್ವಾಮೀಜಿಯನ್ನು ಭೇಟಿಯಾಗಲು ಬೆಳಗಾವಿಯಿಂದ ಅವರು ಬರುತ್ತಿದ್ದ ನಡುವೆಯೇ ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಶುರುವಾಗಿತ್ತು. ಸಚಿವ ಸ್ಥಾನಕ್ಕಾಗಿ ಅವರು ಬರುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು.

ಇದನ್ನೂ ಓದಿ : Rekha Kadiresh Murder Case : BBMP ಮಾಜಿ ಸದಸ್ಯೆಯ ಕೊಲೆ ಪ್ರಕರಣ : ಆರೋಪಿಗಳು ಅರೆಸ್ಟ್

ಈ ಸುದ್ದಿಗೆ ತೆರೆ ಎಳೆಯಲು ಪ್ರಯತ್ನಿಸಿದ ಜಾರಕಿಹೊಳಿ(Ramesh Jarkiholi), ಸುತ್ತೂರು ಮಠಕ್ಕೆ ಬಂದಿರೋದು ಸ್ವಾಮೀಜಿ ಅವರನ್ನು ಭೇಟಿ ಮಾಡಲು ಅಷ್ಟೇ. ಇಲ್ಲಿ ಬಂದಿರುವ ಹಿಂದೆ ರಾಜಕೀಯ ಉದ್ದೇಶವಿಲ್ಲ. ಸ್ವಾಮೀಜಿ ಅವರ ತಾಯಿ ಮೃತಪಟ್ಟ ಕಾರಣ ಇಲ್ಲಿಗೆ ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ : H Vishwanath : ಸಿದ್ದರಾಮಯ್ಯಗೆ ಅವಕಾಶ ಸಿಕ್ಕಿದೆ, ಡಿಕೆಶಿಗೆ ಸಿಎಂ ಅವಕಾಶ ಸಿಗಬೇಕು : ಹೆಚ್.ವಿಶ್ವನಾಥ್

ಸರ್ಕಾರ ತಂದವನು ನಾನು, ನಾನು ಮಂತ್ರಿ ಸ್ಥಾನ ಕೇಳ್ತಿನಾ ? ಮಂತ್ರಿಗೋಸ್ಕರ ನಾನು ಸ್ವಾಮೀಜಿ ಅವರನ್ನು ಭೇಟಿ ಮಾಡ್ತಿಲ್ಲ. ಸದ್ಯ ರಾಜೀನಾಮೆ(Resignation) ಇಲ್ಲ. ಎಲ್ಲವನ್ನೂ ಮುಂಬೈನಲ್ಲಿಯೇ ಮಾತನಾಡುವೆ ಎಂದು ಹೇಳಿದರು. ಮೈಸೂರಿಗೆ ಸ್ವಾಮೀಜಿಯವರನ್ನು ಭೇಟಿಯಾಗಲು ಬಂದ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.

ಇದನ್ನೂ ಓದಿ : 1 to 10th Standard Students : ರಾಜ್ಯ ಸರ್ಕಾರದಿಂದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News