VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ!

Written by - Zee Kannada News Desk | Last Updated : Jan 22, 2025, 05:49 PM IST
VI ನಿಂದ ಹೊಸ ಆಫರ್ - ಮಹಾ ಕುಂಭ ಮೇಳದ ನೇರ ದರ್ಶನ! title=

ಭಾರತದಲ್ಲಿ ವೊಡಾಫೋನ್‌ ಐಡಿಯಾ ಮಾತ್ರ ತಮ್ಮ ಬಳಕೆದಾರರು Shemaroo Entertainment ನೆರವಿನಿಂದ ತ್ರಿವೇಣಿ ಸಂಗಮ ಹಾಗೂ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದ ದರ್ಶನ ನೀಡಲು ಮುಂದಾಗಿದೆ. ವೊಡಾಫೋನ್‌ ಐಡಿಯಾ ಮೂವೀಸ್‌ ಆ್ಯಂಡ್‌ ಟಿವಿ ಆ್ಯಪ್‌ ಅಥವಾ ವೊಡಾಫೋನ್‌ ಐಡಿಯಾ ಅಪ್ಲಿಕೇಶನ್ ನೆರವಿನಿಂದ ಪವಿತ್ರ ಸ್ನಾನ, ಅಖಾರಾ ಮೆರವಣಿಗೆ ಮತ್ತು ಗಂಗಾ ಆರತಿಗಳ ನೇರ ಪ್ರಸಾರವನ್ನು ವೀಕ್ಷಿಸಬಹುದು. ಸಂತರು ಮತ್ತು ಆಧ್ಯಾತ್ಮಿಕ ಮುಖಂಡರ ಜೊತೆಗಿನ ಸಂದರ್ಶನಗಳೂ ಇರಲಿವೆ.

ಪವಿತ್ರ ನದಿಯ ದಂಡೆಯಲ್ಲಿ ಭಕ್ತಾದಿಗಳು ತಿಂಗಳ ಕಾಲ ಇರುವುದು (ಕಲ್ಪವಾಸಿಸ್‌) ಮತ್ತು ಮೊದಲ ಬಾರಿಗೆ ಕುಂಭಮೇಳಕ್ಕೆ ಭೇಟಿ ನೀಡಿದವರ ಹೃದಯಸ್ಪರ್ಶಿ ಕತೆಗಳ ವಿವರಗಳೂ ಇರಲಿವೆ. ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 12 ವರ್ಷಗಳಿಗೊಮ್ಮೆ ನಡೆಯುವ ಈ ಮಹಾ ಕುಂಭ ಮೇಳವು ಇದನ್ನು ಈ ಬಾರಿ 13ನೇ ಜನವರಿ 2025 ರಿಂದ 26ನೇ ಫೆಬ್ರುವರಿ 2025 ರವರೆಗೆ ನಡೆಯಲಿದೆ. ಇದನ್ನು ಬರೋಬ್ಬರಿ 156km ವಿಶಾಲ ಪ್ರದೇಶದಲ್ಲಿ ವ್ಯಾಪಿಸಲಿರುವ ಈ ಮೇಳದಲ್ಲಿ ಭಾಗಿಯಾಗುವವರ ನೆರವಿಗಾಗಿ 22 ತೇಲುವ ಸೇತುವೆಗಳನ್ನು ನಿರ್ಮಿಸಲಾಗಿದೆ.

ಈ ಬೃಹತ್ ಕಾರ್ಯಕ್ರಮದಲ್ಲಿ ಈ ವರ್ಷ 42 ಕೋಟಿ ಯಾತ್ರಿಕರು ಭೇಟಿ ನೀಡುವ ನಿರೀಕ್ಷೆಯಿದೆ. ಅತ್ಯಧಿಕ ಸಂಖ್ಯೆಯಲ್ಲಿ ಜನರು ಸೇರುವ ಅಭೂತಪೂರ್ವ ಕಾರ್ಯಕ್ರಮ ಇದಾಗಿದೆ. ಈ ಮಹಾ ಕುಂಭ ಮೇಳವು ಎಲ್ಲರಿಗೂ ಸುಲಭವಾಗಿ ವೀಕ್ಷಿಸುವಂತೆ ಮಾಡಲು ದೇಶದ ಪ್ರಮುಖ ದೂರ ಸಂಪರ್ಕ ಸೇವಾ ಸಂಸ್ಥೆಯಾಗಿರುವ ವೊಡಾಫೋನ್‌ ಐಡಿಯಾ ತನ್ನ Vi ಮೂವೀಸ್‌ ಆ್ಯಂಡ್‌ ಟಿವಿಯಲ್ಲಿ ನೇರ ಪ್ರಸಾರ ಮಾಡಲು ಶೇಮರೂ ಜೊತೆಗೆ ಪಾಲುದಾರಿಕೆ ಹೊಂದಿದೆ.

ವೊಡಾಫೋನ್‌ ಐಡಿಯಾ ಗ್ರಾಹಕರು ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮವಾಸ್ಯೆ (ಜನವರಿ 29) ಮತ್ತು ಮಹಾ ಶಿವರಾತ್ರಿ (ಫೆಬ್ರುವರಿ 26) ರಂದು ಸಂತರು ಮತ್ತು ಭಕ್ತರು ಪವಿತ್ರ ನದಿ ನೀರಿನಲ್ಲಿ ಪವಿತ್ರ ಸ್ನಾನ (ಶಾಹಿ ಸ್ನಾನ) ಮಾಡುವುದರ ಅನುಭವ ಪಡೆಯಬಹುದು. ಬಳಕೆದಾರರು ಪ್ರತ್ಯೇಕ ಧ್ವನಿಮುದ್ರಿತ ಮಾಹಿತಿ, ಅಖಾರಾಗಳ ಭೇಟಿ, ಜಾನಪದ ಸಂಗೀತ ಮತ್ತು ಭಕ್ತಿಗೀತೆಗಳ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಲಕ್ಷಾಂತರ ಯಾತ್ರಿಕರಿಗೆ ನೆರವಾಗುವ ಬೃಹತ್ ಮೂಲಸೌಲಭ್ಯಗಳ ಮಾಹಿತಿಯನ್ನೂ ಪಡೆದುಕೊಳ್ಳಬಹುದು.

ಈ ಉಪಕ್ರಮವು ಜನರನ್ನು ಸಂಪರ್ಕಿಸಲು ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳುವ ವೊಡಾಫೋನ್‌ ಐಡಿಯಾ ಬದ್ಧತೆಯನ್ನು ಒತ್ತಿಹೇಳುತ್ತದೆ. ಸ್ಥಳೀಯ ಮತ್ತು ಧಾರ್ಮಿಕ ಮಾಹಿತಿಗೆ ಹೆಚ್ಚಿದ ಬೇಡಿಕೆಯಿಂದಾಗಿ 2ನೇ ಮತ್ತು 3ನೇ ಶ್ರೇಣಿಯ ನಗರಗಳಲ್ಲಿನ ಒಟಿಟಿ ವೀಕ್ಷಕರ ಸಂಖ್ಯೆಯು ಗಮನಾರ್ಹ ಎನ್ನಬಹುದಾದ 60% ರಷ್ಟು ಹೆಚ್ಚಳ ಕಂಡಿದೆ. ಮಹಾ ಕುಂಭಮೇಳದ ಸಕಲ ವಿವರಗಳು ಎಲ್ಲರಿಗೂ ಸುಲಭವಾಗಿ ದೊರೆಯಲಿರುವುದನ್ನು Vi ಖಚಿತಪಡಿಸಿದೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News