ಪತ್ರಕರ್ತನ ಶವವನ್ನು ಕಸದ ವಾಹನದಲ್ಲಿ ಸಾಗಿಸಿದ ಪೊಲೀಸರು!

     

Last Updated : Jan 15, 2018, 07:20 PM IST
ಪತ್ರಕರ್ತನ ಶವವನ್ನು ಕಸದ ವಾಹನದಲ್ಲಿ ಸಾಗಿಸಿದ ಪೊಲೀಸರು! title=
Photo Courtesy: Facebook

ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯಲ್ಲಿ ಸುದ್ದಿ ಟಿವಿ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ಮೌನೇಶ್ ಪೋತರಾಜ್  ಸಂಕ್ರಾಂತಿ ಹಬ್ಬದ ಪ್ರಯುಕ್ತ  ತನ್ನ ಕುಟುಂಬ ಸದಸ್ಯರಿಗೆ ಉಡುಗೊರೆಗಳನ್ನು ನೀಡಲು ಗದಗ ಜಿಲ್ಲೆಯ ಶಿರಹಟ್ಟಿಗೆ ಹೋಗುತ್ತಿದ್ದಾಗ ಗುಂಡೂರಿನ ಕೇಂದ್ರೀಯ ವಿದ್ಯಾಲಯದ ಬಳಿ ಮರಕ್ಕೆ ಡಿಕ್ಕಿ ಹೊಡೆದು ಹಾನಗಲ್-ಬಂಕಾಪುರ್ ರಸ್ತೆಮಾರ್ಗದಲ್ಲಿ ಮೃತಪಟ್ಟಿದ್ದನು. 

ಈ ಘಟನೆ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಆತನ ಮೃತ ದೇಹವನ್ನು ಸ್ಥಳೀಯ ಪೊಲೀಸರು ಕಸ ತುಂಬುವ ವಾಹನದಲ್ಲಿ ಹಾನಗಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮೂಲಕ ಪೊಲೀಸರು ಅಮಾನವೀಯತೆ ಮೆರೆದಿದ್ದಾರೆ. ಕೇವಲ ಇದಷ್ಟೇ ಅಲ್ಲದೆ ಮೌನೇಶನ ಮೃತ ದೇಹವನ್ನು ಹಣ ನಿಡದ ಹೊರತು ಶವವನ್ನು ಮುಟ್ಟುವುದಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರಿಂದ ನಂತರ ಅವರಿಗೆ ಹಣ ನೀಡಲಾಗಿದೆ, ತದನಂತರ ಶವವನ್ನು ಹರಿದಬಟ್ಟೆಯಲ್ಲಿ ಸುತ್ತಿಡಲಾಗಿದೆ ಇದರಿಂದ ದೇಹದಿಂದ ರಕ್ತಸೂಸುತ್ತಿತ್ತು, ಆನಂತರ ಪತ್ರಕರ್ತರೇ ಹೊಸಬಟ್ಟೆಯನ್ನು ಖರೀಧಿಸಿ ಶವಕ್ಕೆ ಹೊದಿಸಿದ್ದಾರೆ  ಎಂದು ಸ್ಥಳೀಯ ಪತ್ರಕರ್ತರು ಆರೋಪಿಸಿದ್ದಾರೆ. 

ಈ ಘಟನೆಯ ಕುರಿತು ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಉನ್ನತ ಪೋಲಿಸ ಅಧಿಕಾರಿಗಳಿಗೆ ವರದಿ ನೀಡಲು ಸೂಚಿಸಿದ್ದಾರೆ.

Trending News