ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಲ್ಪಿ.. ಅಂತರಸಂತೆಯ ಅಕ್ಷರ ಸಂತ ʻಬಾಲು ಸರ್‌ʼ!

ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಆಶಾ ಕಿರಣವಾಗಿದ್ದ ಡಾ. ಎ.ಎಸ್.ಬಾಲಸುಬ್ರಹ್ಮಣ್ಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಲ್ಪಿ. 

Written by - Chetana Devarmani | Last Updated : Feb 24, 2025, 12:05 PM IST
  • ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ಬಾಲು ಸರ್
  • ಪ್ರಾದ್ಯಾಪಕನಾಗಿ ದಣಿವರಿಯದೇ ವಿದ್ಯಾರ್ಥಿಗಳಾಗಿ ದುಡಿದ ಜ್ಞಾನಿ
  • ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ
ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಲ್ಪಿ.. ಅಂತರಸಂತೆಯ ಅಕ್ಷರ ಸಂತ ʻಬಾಲು ಸರ್‌ʼ! title=

ಬೆಂಗಳೂರು: ಅಂತರಸಂತೆಯ ಅಕ್ಷರ ಸಂತ, ಒಬ್ಬ ವಿದ್ಯಾರ್ಥಿಯಾಗಿ ಸಂಶೋಧಕನಾಗಿ, ಪ್ರಾದ್ಯಾಪಕನಾಗಿ ದಣಿವರಿಯದೇ ವಿದ್ಯಾರ್ಥಿಗಳಾಗಿ ದುಡಿದ ಜ್ಞಾನಿ ಮೇರು ವ್ಯಕ್ತಿತ್ವದ ಸರಳ ಸಜ್ಜನಿಕೆಯ ಬಾಲು ಸರ್ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕ. ಉತ್ತರ ಕರ್ನಾಟಕದ ವಿದ್ಯಾರ್ಥಿಗಳ ಆಶಾ ಕಿರಣವಾಗಿದ್ದ ಡಾ. ಎ.ಎಸ್.ಬಾಲಸುಬ್ರಹ್ಮಣ್ಯ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಶಿಲ್ಪಿ. 

ಬಾಲಸುಬ್ರಹ್ಮಣ್ಯ ಅವರು ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ತಮ್ಮಲ್ಲಿರುವ ಜ್ಞಾನವನ್ನು ತಮ್ಮ ವಿದ್ಯಾರ್ಥಿಗಳಿಗೆ ಉಣಬಡಿಸಿ ಪತ್ರಿಕೋದ್ಯಮ ವೃತ್ತಿಗೆ, ಕ್ಷೇತ್ರಕ್ಕೆ ಗೌರವ ತಂದು ಕೊಟ್ಟಿದ್ದಾರೆ. ತಾವು ಸಂಪಾದಿಸಿದ ಜ್ಞಾನವನ್ನು ನಿವೃತ್ತಿ ಜೀವನದ ನಂತರವೂ ಉಣಬಡಿಸುತ್ತಿದ್ದಾರೆ ಎಂಬುದೇ ಗಮನಾರ್ಹ. 

ಪತ್ರಿಕೋದ್ಯಮಕ್ಕೆ ಸಮಾಜದ ಅಂಕು ಡೊಂಕು ತಿದ್ದುವ ಅತಿ ದೊಡ್ಡ ಶಕ್ತಿಯಿದೆ. ಅಂತಹ ಪತ್ರಕರ್ತರನ್ನು ಸಿದ್ಧಪಡಿಸಿರುವ ಡಾ. ಎ.ಎಸ್.ಬಾಲಸುಬ್ರಹ್ಮಣ್ಯ ಅವರು ಜೀ ಕನ್ನಡ ನ್ಯೂಸ್‌ ಜೊತೆ ತಮ್ಮ ಅಪಾರ ಅನುಭವವನ್ನು ಹಂಚಿಕೊಂಡಿದ್ದಾರೆ. 

ಬಾಲು ಸರ್‌ ಪತ್ರಿಕೋದ್ಯಮಕ್ಕೆ ಬಂದಿದ್ದು ಹೇಗೆ? 

ಮೂಲತಃ ಮೈಸೂರಿನವರಾದ ಡಾ. ಎ.ಎಸ್.ಬಾಲಸುಬ್ರಹ್ಮಣ್ಯ ಅವರು ಶಾಲಾ ಶಿಕ್ಷಣವನ್ನು ಸ್ವಂತ ಗ್ರಾಮದಲ್ಲೇ ಮುಗಿಸಿ ಮೈಸೂರಿಗೆ ಪಿಯುಸಿ ವಿದ್ಯಾಭ್ಯಾಸಕ್ಕೆಂದು ಆಗಮಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಸುಮಾರು 70 ವರ್ಷಗಳಿಂದಲೂ ಪತ್ರಿಕೋದ್ಯಮವನ್ನು ಕಲಿಸುತ್ತಿದ್ದರು. ಬಿಎ ಪದವಿಯಲ್ಲಿ ಇದೊಂದು ವಿಷಯವಾಗಿತ್ತು ಹೀಗಾಗಿ ನಾನು ಪತ್ರಿಕೋದ್ಯಮಕ್ಕೆ ಬಂದೆ ಎಂದು ಡಾ. ಎ.ಎಸ್.ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಬಾಲ್ಯದಿಂದಲೇ ಪತ್ರಿಕೆಯಲ್ಲಿ ಆಸಕ್ತಿ

ಇದೆಲ್ಲದರ ಜೊತೆ ಬಾಲ್ಯದಿಂದಲೇ ಪತ್ರಿಕೆ ಓದುವ ಹವ್ಯಾಸ, ರೇಡಿಯೋದಲ್ಲಿ ಬರ್ತಿದ್ದ ವಾರ್ತೆ ಕೇಳುವುದು ಇವೆಲ್ಲ ನನ್ನಲ್ಲಿ ಪತ್ರಿಕೋದ್ಯಮಕ್ಕೆ ಬರಲು ಆಸೆ ಮೂಡಿಸಿತು. ನನಗೆ ಚಿಕ್ಕಂದಿನಿಂದಲೂ ಸುದ್ದಿ ಬಗ್ಗೆ ಕೌತುಕ ಹೆಚ್ಚಿತ್ತು. ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಆಸಕ್ತಿ ಇತ್ತು ಹೀಗಾಗಿ ಮಹಾರಾಜ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ ಬಳಿಕ ಬಿಎ ನಲ್ಲಿ ಜರ್ನಲಿಸಂ ಓದಬೇಕು ಅನಿಸಿ ಈ ಫೀಲ್ಡ್‌ಗೆ ಬಂದೆ ಎಂದು ಹೇಳಿದ್ದಾರೆ. 

ನಾನು ವಿದ್ಯಾರ್ಥಿಯಾಗಿದ್ದಾಗಲೇ ಒಂದಷ್ಟು ಆರ್ಟಿಕಲ್ಸ್‌ ಪ್ರಕಟಿಸಿದ್ದೆ. ಆದಾಯದ ಬಗ್ಗೆ ಆಗಲಿ ಮುಂದೆ ಎದುರಾಗುವ ಕಷ್ಟದ ಬಗ್ಗೆ ಆಗಲಿ ಚಿಂತೆ ಮಾಡಿರಲಿಲ್ಲ. ಕೇವಲ ಪತ್ರಿಕರ್ತನಾಗಬೇಕು ಎಂಬುದು ಮಾತ್ರ ನನ್ನ ಗುರಿಯಾಗಿತ್ತು. ಪತ್ರಕರ್ತನಾಗುವುದು ಮತ್ತು ಪತ್ರಿಕೆಯಲ್ಲಿ ಕೆಲಸ ಮಾಡೋದು ಮಾತ್ರ ನನ್ನ ಉದ್ದೇಶವಾಗಿತ್ತು. ಒಂದು ಸುದ್ದಿ ಬರೆಯುವಾಗ ಆಗುವ ಅನುಭವ, ದೊಡ್ಡ ದೊಡ್ಡವರನ್ನು ಭೇಟಿಯಾಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದಿದ್ದಾರೆ. 

ವಿದ್ಯಾರ್ಥಿಯನ್ನು ಪತ್ರಕರ್ತನನ್ನಾಗಿಸುವ ದಾರಿ

ಪತ್ರಿಕೋದ್ಯಮಕ್ಕೆ ಎಲ್ಲೆ ಇಲ್ಲ. ಅಲ್ಲಿ ಎಲ್ಲವನ್ನೂ ಕಲಿಯಬೇಕು. ಒಂದು ಪತ್ರಿಕೆ ಅಂದರೆ ಅಲ್ಲಿ ಮುಖ್ಯ ಸುದ್ದಿ ಜೊತೆಗೆ ಹಾಸ್ಯ, ಕ್ರೈಂ, ಕ್ರೀಡೆ, ಸಿನಿಮಾ ಸಹ ಸೇರಿರಬೇಕು. ಪತ್ರಿಕೋದ್ಯಮ ಒಂದು ವಿಭಿನ್ನವಾದ ಕೋರ್ಸ್.‌ ನಮ್ಮ ವಿದ್ಯಾರ್ಥಿ ನಾಳೆ ಪತ್ರಿಕಾ ಕಚೇರಿಗೆ ಹೋದಾಗ ಅಲ್ಲಿನ ವಾತಾವರಣಕ್ಕೆ ಹೇಗೆ ಹೊಂದಿಕೊಳ್ಳಬೇಕು ಎಂಬುದರ ಪೂರ್ವ ಸಿದ್ಧತೆ ನೀಡಬೇಕು. ಅದರಲ್ಲೂ ಮುಖ್ಯವಾಗಿ ಬರವಣಿಗೆಯ ಸ್ಕಿಲ್‌ ಅನ್ನು ಕಲಿಸುತ್ತಿದ್ದೆವು. ಕನ್ನಡದ ಸರಳ ಪದಗಳ ಮೂಲಕ ಜನ ಸಾಮಾನ್ಯರನ್ನು ಮುಟ್ಟುವ ಸುಲಭ ತಂತ್ರವನ್ನು ಕಲಿಸ್ತಿದ್ವಿ. ಇದರ ಜೊತೆ ಇಂಗ್ಲೀಷ್‌ ಜ್ಞಾನ ಕೊಡುತ್ತಿದ್ವಿ ಎಂದಿದ್ದಾರೆ.

ಕವಿವಿ ಯಲ್ಲಿ ಪತ್ರಿಕೋದ್ಯಮ ವಿಭಾಗ ಬಂದಿದ್ದು ಹೇಗೆ? 

ಯಾವುದೇ ಶಿಕ್ಷಕನಿರಲಿ ವಿದ್ಯಾರ್ಥಿಗಳು ಒಳ್ಳೆಯ ಪೋಸ್ಟ್‌ ಅಲ್ಲಿರುವುದು ಗೊತ್ತಾದಾಗ ಖುಷಿ ಆಗುತ್ತೆ. ಧಾರವಾಡದಂಥ ಊರಲ್ಲಿ ವಿಶೇವಾಗಿ ಗ್ರಾಮೀಣ ಭಾಗದ ಮಕ್ಕಳಿಗೆ ಕರ್ನಾಟಕ ವಿಶ್ವ ವಿದ್ಯಾಲಯದ ನಮ್ಮ ಪತ್ರಿಕೋದ್ಯಮ ವಿಭಾಗ ಸಾಕಷ್ಟು ಸಹಾಯವಾಯ್ತು. ಯಾಕಂದರೆ 1980 ರಿಂದ 84 ರ ಅವಧಿಯಲ್ಲಿ ನಂಜುಂಡಪ್ಪ ಅವರು ಕುಲಪತಿ ಆಗಿದ್ದರು. ನಮ್ಮ ವಿಭಾಗ ಆರಂಭ ಗೊಂಡಿದ್ದು 1982-83 ಸಾಲಿನಲ್ಲಿ. ನಂಜುಂಡಪ್ಪ ಅವರಿಗೆ ಪತ್ರಿಕೋದ್ಯಮ ಅಂದರೆ ಹೆಚ್ಚಿನ ಒಲವಿತ್ತು. ಹೀಗಾಗಿ ಅವರು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಭಾಗವನ್ನು ತರಲೇಬೇಕು ಎಂದು ಪಣತೊಟ್ಟು ತಂದರು. ಹೀಗಾಗಿ ಅದು ಇಂದಿಗೂ ಅನೇಕ ವಿದ್ಯಾರ್ಥಿಗಳಿಗೆ ನೆರಳಾಗಿದೆ ಎಂದಿದ್ದಾರೆ.  

ಅಂದಿನ ಪತ್ರಿಕಾರಂಗ ಇಂದಿನ ಪತ್ರಿಕೋದ್ಯಮ 

ಇಂದು ಪತ್ರಿಕಾರಂಗ ಅಲ್ಲ ಅದು ಇಂಡಸ್ಟ್ರಿ ಆಗಿದೆ. ಉದ್ಯಮವಾಗಿ ಮಾರ್ಪಟ್ಟಿದೆ. ಪತ್ರಿಕಾ ವಾದ ಅಥವಾ ಪತ್ರಿಕಾ ತತ್ವ ಅಂತಿರಬೇಕಿತ್ತು. 19ನೇ ಶತಮಾನದಲ್ಲಿ ಸಮಾಜ ಸೇವೆ, ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪತ್ರಿಕರಗಳು ಬರುತ್ತಿದ್ದವು. ಉದ್ಯಮ ಕ್ಷೇತ್ರದಿಂದ ಜರ್ನಲಿಸಂ ದೂರವಿತ್ತು. ಆಗ ಭಾರೀ ಬಂಡವಾಳ ಬೇಕಿದ್ದಿಲ್ಲ. ಯಾವಾಗ ಸ್ಟೀಮ್‌ ಇಂಜಿನ್‌ ತಂದು ಪ್ರಿಂಟಿಂಗ್‌ ಪ್ರೆಸ್‌ಗೆ ಹಾಕಿ ಗಂಟೆಗೆ 5000.. 10000 ಪೇಪರ್‌ ಪ್ರಿಂಟ್‌ ಮಾಡಿ, ರೈಲಿನ ಮುಖಾಂತರ ದೇಶದ ಬೇರೆ ಬೇರೆ ಮೂಲೆಗಳಿಗೆ ಕಳಿಕಲು ಶುರು ಮಾಡಿದರು. ಅದರ ಜೊತೆ ಡಿಸ್ಟ್ರಿಬ್ಯುಷನ್‌, ಆದಾಯಕ್ಕಾಗಿ ಜಾಹೀರಾತು ಪಡೆಯವುದು ಎಲ್ಲ ಶುರುವಾಯ್ತೋ ಆಗ ಆದಾಯ ಗಳಿಕೆ ಉದ್ದೇಶದಿಂದ ಪತ್ರಿಕಾರಂಗ ಇಂದಿನ ಪತ್ರಿಕೋದ್ಯಮವಾಗಿ ಬದಲಾಯಿತು ಎಂದಿದ್ದಾರೆ. 

ಈಗ ಅದು ಇದೇ ರೀತಿ ಮುಂದುವರೆದುಕೊಂಡು ಬಂದು ಬಿಟ್ಟಿದೆ. ಇದರಲ್ಲೇ ಬೆರೆತು ಹೋಗಿದೆ. ಸಮಯ ಕಳೆದಂತೆ ಪತ್ರಿಕಾರಂಗ ಜಾಹೀರಾತು ಆಧಾರಿತ ಪತ್ರಿಕೋದ್ಯಮವಾಗಿ ಬದಲಾಯ್ತು. ಇದರ ಮೂಲ ಉದ್ದೇಶ ಆದಾಯ. ಪತ್ರಿಕ ಬೆಲೆ ಜಾಸ್ತಿ ಆದರೆ ಜನ ಕೊಳ್ಳುವುದಿಲ್ಲ ಎಂದಿದ್ದಾರೆ.

ಡಿಜಿಟಲ್‌ ಯುಗದಲ್ಲೂ ಪತ್ರಿಕೆಯ ಮಹತ್ವ 

ಡಿಜಿಟಲ್‌ ಯುಗದಲ್ಲಿ ಅನೇಕರು ಮೊಬೈಲ್‌ ಕೈಯಲ್ಲೇ ಹಿಡಿದಿರುತ್ತಾರೆ. ಅದರಲ್ಲೂ ಬ್ರ್ಯಾಂಡೆಡ್‌ ಫೋನ್‌ ಇದ್ರೆ ಪ್ರೆಸ್ಟೀಜ್‌. ಆ ಕಾಲದಲ್ಲಿ ಇದೆಲ್ಲ ಇರಲಿಲ್ಲ. ಆ ಸಮಯದಲ್ಲಿ ಜನರಿಗೆ ಬೇಗ ಸುದ್ದಿ ತಲುಪಿಸುವ ಏಕೈಕ ಮಾಧ್ಯಮ ಅಂದ್ರೆ ಅದು ರೇಡಿಯೋ. ಆಮೇಲೆ ಟಿವಿ ಬಂತು. ಆದರೆ ಅದಕ್ಕೂ ಮುನ್ನ ಪ್ರಪಂಚದಲ್ಲಿ ಏನೇ ಆದರ ಅದರ ಸುದ್ದಿಯನ್ನು ಜನಕ್ಕೆ ಮುಟ್ಟಿಸುತ್ತಿದ್ದ ಏಕೈಕ ಮಾಧ್ಯಮ ಪತ್ರಿಕೆ ಆಗಿತ್ತು ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News