ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿದ್ವಾಯಿ ಸಿಬ್ಬಂದಿಗಳ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜ.10ರಿಂದ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು.

Last Updated : Jan 17, 2018, 04:01 PM IST
  • 2002ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ನೇಮಕಾತಿ ನಡೆದಿಲ್ಲ.
  • 2011ರಿಂದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಂಡಿರುವ ಕಿದ್ವಾಯಿ ಆಸ್ಪತ್ರೆ.
  • ಕಿದ್ವಾಯಿ ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಏಕೈಕ ಕ್ಯಾನ್ಸರ್ ಆಸ್ಪತ್ರೆ.
ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕಿದ್ವಾಯಿ ಸಿಬ್ಬಂದಿಗಳ ಪ್ರತಿಭಟನೆ  title=

ಬೆಂಗಳೂರು: ರಾಜ್ಯ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಏಕೈಕ ಕ್ಯಾನ್ಸರ್ ಆಸ್ಪತ್ರೆ ಕಿದ್ವಾಯಿಯಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹಿಸಿ ನಗರದ ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಇಂದು ಕಿದ್ವಾಯಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ಜನವರಿ 2 ರಿಂದ 10ನೇ ತಾರೀಕಿನ ಒಳಗೆ ಬೇಡಿಕೆಗಳನ್ನು ಈಡೇರಿಸುವಂತೆ  ಗಡುವು ನೀಡಿದ್ದ ಸಿಬ್ಬಂದಿ, 10ನೇ ತಾರೀಕಿನಿಂದ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು.

ಕಳೆದ 7 ದಿನಗಳಿಂದ ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗುತ್ತಿದ್ದ ಸಿಬ್ಬಂದಿಗೆ ಆಸ್ಪತ್ರೆ ನಿರ್ದೇಶಕರಿಂದ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. 

ವೇತನ ಹೆಚ್ಚಳ, ಐಡಿ ಕಾರ್ಡ್ ಮತ್ತು ಇನ್ಸೆಂಟಿವ್ ನೀಡುವಂತೆ ಒತ್ತಾಯಿಸಿ ಹಲವು ಬೇಡಿಕೆಗಳನ್ನು ಮುಂದಿಟ್ಟು ಕಿದ್ವಾಯಿ ಆಸ್ಪತ್ರೆ ಸಿಬ್ಬಂದಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಏತನ್ಮಧ್ಯೆ ಕಿದ್ವಾಯಿ ಆಸ್ಪತ್ರೆಯಲ್ಲಿರುವ ಪರ್ಮನೆಂಟ್ ಹಾಗೂ ಟೆಕ್ನಿಷಿಯನ್ಸ್ ಗಳಿಂದ ನಿರಂತರ ಸೇವೆ ನೀಡಲು ಆಸ್ಪತ್ರೆ‌ ಆಡಳಿತ ಸೂಚನೆ ನೀಡಿದೆ.

ವಾಸ್ತವವಾಗಿ 2002ರಿಂದ ಕಿದ್ವಾಯಿ ಆಸ್ಪತ್ರೆಯಲ್ಲಿ ನೇಮಕಾತಿ ನಡೆದಿಲ್ಲ. 2011ರಿಂದ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಕಾತಿ ಮಾಡಿಕೊಂಡಿದೆ. ಕಿದ್ವಾಯಿ ಆಸ್ಪತ್ರೆಯಲ್ಲಿ ಪರ್ಮನೆಂಟ್ 80- ನರ್ಸ್'ಗಳು ಹಾಗೂ 25 ಟೆಕ್ನಿಷಿಯನ್ಸ್  ಇದ್ದಾರೆ. ಮತ್ತೊಂದೆಡೆ ಗುತ್ತಿಗೆ ಆಧಾರದಲ್ಲಿ 175 ಸ್ಟಾಫ್ ನರ್ಸ್ ಮತ್ತು 18 ಮಂದಿ ಲಾಬ್ ಟೆಕ್ನಿಷಿಯನ್ಸ್ ಇದ್ದಾರೆ.

Trending News