ಬೆಂಗಳೂರು: ಶನಿವಾರ ಬೆಂಗಳೂರಿಗೆ ಭೇಟಿ ನೀಡಿದ ಪ್ರಧಾನಿ ಮೋದಿಯವರು HAL ಘಟಕಕ್ಕೆ ಭೇಟಿ ನೀಡಿದ್ದು, ಬಳಿಕ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಗಮನ ಸೆಳೆದರು. ಪ್ರಧಾನಿ ಮೋದಿಯವರ ಬೆಂಗಳೂರು ಭೇಟಿಯನ್ನು ಕಾಂಗ್ರೆಸ್ ಟೀಕಿಸಿದೆ.
ಈ ಬಗ್ಗೆ ಶನಿವಾರ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಮಾರಾಟಗಾರ ಪ್ರಧಾನಿ ಮೋದಿಯವರೇ, ನಮ್ಮ ಹೆಮ್ಮೆಯ ಹೆಚ್ಎಎಲ್ನ್ನು ಮಾರಬೇಡಿ! ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು HALಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ. ಆದರೆ ನಮ್ಮ HALನ್ನು ನಮಗೆ ಬಿಡಿ!’ ಎಂದು ಟೀಕಿಸಿದೆ.
ಮಾರಾಟಗಾರ @narendramodi ಅವರೇ, ನಮ್ಮ ಹೆಮ್ಮೆಯ ಹೆಚ್ಎಎಲ್ ನ್ನು ಮಾರಬೇಡಿ!
ಕೇವಲ ಫೋಟೋಶೂಟ್ ಮಾಡಿಸಿಕೊಳ್ಳಲು HALಗೆ ಬಂದಿದ್ದೀರೋ ಅಥವಾ ಅದಾನಿಯ ಏಜೆಂಟ್ ಆಗಿ ಬಂದಿದ್ದೀರೋ ಗೊತ್ತಿಲ್ಲ.
ಆದರೆ ನಮ್ಮ HALನ್ನು ನಮಗೆ ಬಿಡಿ!
— Karnataka Congress (@INCKarnataka) November 25, 2023
‘HALನಲ್ಲಿ ಫೋಟೋಶೂಟ್ ಮಾಡಿಸಿಕೊಂಡ ಪ್ರಧಾನಿ ಮೋದಿಯವರೇ, ಇದೇ HALನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ? HALಗೆ ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಇದನ್ನೂ ಓದಿ: ಸಾಂತ್ವನ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ
HAL ನಲ್ಲಿ ಫೋಟೋಶೂಟ್ ಮಾಡಿಸಿಕೊಂಡ @narendramodi ಅವರೇ,
ಇದೇ HAL ನೊಂದಿಗೆ ಮಾಡಿಕೊಂಡಿದ್ದ ರಫೆಲ್ ಒಪ್ಪಂದವನ್ನು ರದ್ದುಪಡಿಸಿ ಅಂಬಾನಿ ಜೋಳಿಗೆ ತುಂಬಿಸಿದ್ದೇಕೆ?
HAL ದ್ರೋಹವೆಸಗಿ ಈಗ ಫೋಟೋಶೂಟ್ ಮಾಡಿಸಿಕೊಳ್ಳುವುದಕ್ಕೆ ನಿಮ್ಮ ಮನಸು ಒಪ್ಪಿದ್ದು ಹೇಗೆ?
— Karnataka Congress (@INCKarnataka) November 25, 2023
‘ಮಧ್ಯಪ್ರದೇಶ, ರಾಜಸ್ಥಾನಗಳ ಚುನಾವಣೆ ಪ್ರಚಾರ ಮುಗಿಸಿ ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ ಪ್ರಧಾನಿ ಮೋದಿಯವರೇ, ಕರ್ನಾಟಕಕ್ಕೆ ಕೊಡಬೇಕಾದ ಬರ ಪರಿಹಾರವನ್ನು ತಂದಿದ್ದೀರಾ? ನರೇಗಾ ಬಾಕಿ ಹಣ ತಂದಿದ್ದೀರಾ? ಕೇಂದ್ರ ಯೋಜನೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ, ಆ ಹಣ ತಂದಿದ್ದೀರಾ? ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗುವ ಆತುರದಲ್ಲಿ ನಿಮ್ಮ ಜವಾಬ್ದಾರಿಯನ್ನು ಮರೆತು ಬಂದಿರಾ?! ಚುನಾವಣೆ ಸಂದರ್ಭದಲ್ಲಿ ಕನ್ನಡಿಗರ ಮೇಲೆ ಉಕ್ಕಿ ಹರಿಯುವ ನಿಮ್ಮ ಪ್ರೀತಿ ಚುನಾವಣೆಯ ನಂತರ ಮಾಯವಾಗಿರುವುದೇಕೆ?’ ಎಂದು ಕಾಂಗ್ರೆಸ್ ಕಿಡಿಕಾರಿದೆ.
Successfully completed a sortie on the Tejas. The experience was incredibly enriching, significantly bolstering my confidence in our country's indigenous capabilities, and leaving me with a renewed sense of pride and optimism about our national potential. pic.twitter.com/4aO6Wf9XYO
— Narendra Modi (@narendramodi) November 25, 2023
HAL ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿ
ಮಧ್ಯಪ್ರದೇಶ, ರಾಜಸ್ಥಾನಗಳ ಚುನಾವಣೆ ಪ್ರಚಾರ ಮುಗಿಸಿ ಸದ್ದಿಲ್ಲದೆ ಬೆಂಗಳೂರಿಗೆ ಬಂದಿರುವ @narendramodi ಅವರೇ,
ಕರ್ನಾಟಕಕ್ಕೆ ಕೊಡಬೇಕಾದ ಬರ ಪರಿಹಾರವನ್ನು ತಂದಿದ್ದೀರಾ?
ನರೇಗಾ ಬಾಕಿ ಹಣ ತಂದಿದ್ದೀರಾ?
ಕೇಂದ್ರ ಯೋಜನೆಗಳಿಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ, ಆ ಹಣ ತಂದಿದ್ದೀರಾ?ತೆಲಂಗಾಣದ ಚುನಾವಣಾ ಪ್ರಚಾರಕ್ಕೆ ಹೋಗುವ ಆತುರದಲ್ಲಿ…
— Karnataka Congress (@INCKarnataka) November 25, 2023
ವಿಧಾನಸಭಾ ಚುನಾವಣೆ ಬಳಿಕ ಪ್ರಧಾನಿ ಮೋದಿ ಆ.26ರಂದು ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ್ದರು. ಚಂದ್ರಯಾನ-3 ಯಶಸ್ಸಿ ಹಿನ್ನೆಲೆ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿಯವರು ಬೆಂಗಳೂರಿಗೆ ಆಗಮಿಸಿದ್ದರು. ಇದಾದ 3 ತಿಂಗಳ ಬಳಿಕ ಇದೀಗ ಮತ್ತೆ ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ.
ಶನಿವಾರ ಬೆಳಗ್ಗೆ ವಿಶೇಷ ವಿಮಾನದಲ್ಲಿ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿಯವರು ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗಿಯಾದರು. ತೇಜಸ್ ವಿಮಾನಗಳ ಸೌಲಭ್ಯ ಸೇರಿದಂತೆ ಉತ್ಪಾದನಾ ಸೌಲಭ್ಯಗಳನ್ನು ಪರಿಶೀಲಿಸಿದ ಅವರು ಇದೇ ವೇಳೆ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದರು.
ಇದನ್ನೂ ಓದಿ: ಮದುವೆಗೆ ವಿಮಾ ಸುರಕ್ಷೆ ಇದೆ ಗೊತ್ತಾ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.