ಪೇ ಸಿಎಂ ಬಳಿಕ ಮಂಡ್ಯ ರೈತರಿಂದ PAY FARMER ಅಭಿಯಾನ

ಮಂಡ್ಯದಲ್ಲಿ ರೈತರು  ಪೇ ಫಾರ್ಮರ್ ಅಭಿಯಾನ ಹಮ್ಮಿಕೊಂಡಿದ್ದಾರೆ.  ರಾಜ್ಯದಲ್ಲಿ ಕಾಂಗ್ರೆಸ್ ನ PAY CM ಪೋಸ್ಟರ್ ಅಭಿಯಾನದ ಬೆನ್ನಲ್ಲೇ , ಇದೀಗ ಸಕ್ಕರೆನಾಡಿನಲ್ಲಿ, ರೈತರು ತಮ್ಮ ಅಭಿಯಾನ ತೀವ್ರಗೊಳಿಸಿದ್ದಾರೆ.   

Written by - Ranjitha R K | Last Updated : Sep 26, 2022, 03:41 PM IST
  • ಮಂಡ್ಯದಲ್ಲಿ ಆರಂಭವಾಯಿತು ಹೊಸ ಅಭಿಯಾನ
  • ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪೇ ಫಾರ್ಮರ್ ಅಭಿಯಾನ
  • ಸಕ್ಕರೆನಾಡಲ್ಲಿ ತೀವ್ರಗೊಂಡ PAY FARMER ಅಭಿಯಾನ.
ಪೇ ಸಿಎಂ ಬಳಿಕ ಮಂಡ್ಯ ರೈತರಿಂದ PAY FARMER ಅಭಿಯಾನ title=
Pay farmer campaign

ಮಂಡ್ಯ : ಪೇ ಸಿಎಂ  ಪೋಸ್ಟರ್ ಬಳಿಕ ಇದೀಗ ರಾಜ್ಯದಲ್ಲಿ ಪೆ ಫಾರ್ಮರ್ ಅಭಿಯಾನ ತೀವ್ರಗೊಳ್ಳುತ್ತಿದೆ. ಮಂಡ್ಯದಲ್ಲಿ ರೈತರೂ ಪೇ ಫಾರ್ಮರ್ ಅಭಿಯಾನ ನಡೆಸುತ್ತಿದ್ದಾರೆ. ಬೆಂ-ಮೈ ಹೆದ್ದಾರಿಯಲ್ಲಿ  ಪೇ ಫಾರ್ಮರ್ ಪೋಸ್ಟ್ ಹಿಡಿದು ನಿಂತ ರೈತರು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೆ ತಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ,  ದಸರಾದಲ್ಲಿ ಹೆದ್ದಾರಿ ತಡೆದು ಉಗ್ರ ಹೋರಾಟ ನಡೆಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. 

ಇಂದಿನಿಂದ ನವರಾತ್ರಿ ಆರಂಭವಾಗಿದೆ. ನಾದ ಹಬ್ಬ ದಸರಾಗೆ ಚಾಲನೆಯೂ ಸಿಕ್ಕಿದೆ. ಈ ನಡುವೆ, ಮಂಡ್ಯದಲ್ಲಿ ರೈತರು  ಪೇ ಫಾರ್ಮರ್ ಅಭಿಯಾನ ಹಮ್ಮಿಕೊಂಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ನ PAY CM ಪೋಸ್ಟರ್ ಅಭಿಯಾನದ ಬೆನ್ನಲ್ಲೇ , ಇದೀಗ ಸಕ್ಕರೆನಾಡಿನಲ್ಲಿ, ರೈತರು ತಮ್ಮ ಅಭಿಯಾನ ತೀವ್ರಗೊಳಿಸಿದ್ದಾರೆ. 

ಇದನ್ನೂ ಓದಿ : ನಾಡಹಬ್ಬ ಮೈಸೂರು ದಸರಾ: ಪ್ರವಾಸಿಗರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ KSRTC

ತಮ್ಮ ಅಭಿಯಾನದ ಹಿನ್ನೆಲೆಯಲ್ಲಿ ರೈತರು, ಬೆಂ-ಮೈ ಹೆದ್ದಾರಿಯಲ್ಲಿ  ಪೇ ಫಾರ್ಮರ್ ಪೋಸ್ಟ್ ಹಿಡಿದು  ಪ್ರತಿಭಟನೆ ನಡೆಸಿದ್ದಾರೆ. ರೈತ ಬೆಳೆದ ಬೆಳೆಗೆ ದರ ನಿಗದಿ ಮಾಡುವಂತೆ ಆಗ್ರಹಿಸಿ, ಪೇ ಫಾರ್ಮರ್ ಪೋಸ್ಟ್ ಅಂಟಿಸಿದ್ದಾರೆ. ಮಂಡ್ಯದ ಸಂಜಯ್ ವೃತ್ತದಲ್ಲಿ ರೈತರು ಅಭಿಯಾನ ಹಮ್ಮಿಕೊಂಡಿದ್ದರು. 

ಯುವ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಹಮ್ಮಿಕೊಂಡ ಅಭಿಯಾನದಲ್ಲಿ ರೈತರು, ಕಾರು, ಹೆದ್ದಾರಿಯ ಗೋಡೆ ಹಾಗೂ ಸಾರಿಗೆ ಬಸ್ ನಿಲ್ದಾಣದ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿದ್ದಾರೆ. ಹೆದ್ದಾರಿಯಲ್ಲಿ KSRTC,ಐರಾವತ,ರಾಜಹಂಸ ಬಸ್ ಗಳ ತಡೆದು PAY FARMER ಪೋಸ್ಟ್ ಅಂಟಿಸಿದ್ದಾರೆ. 

ಇದನ್ನೂ ಓದಿ : Mysuru Dasara Festival: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಸಾಂಸ್ಕೃತಿಕ ನಗರಿ ಮೈಸೂರು

ಸರ್ಕಾರದ ವಿರುದ್ದ ಘೋಷಣೆ ಕೂಗಿದ  ರೈತರು ಟನ್ ಕಬ್ಬಿಗೆ 4500 ರೂ‌ ನಿಗದಿ ಮಾಡುವಂತೆ ಒತ್ತಾಯಿಸಿದ್ದಾರೆ. ತಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ,  ದಸರಾ ವೇಳೆ,  ಹೆದ್ದಾರಿ ತಡೆದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News