ರಾತ್ರಿ ನಿದ್ದೆ ಬರುತ್ತಿಲ್ಲವೇ..? ಈ 3 ಸರಳ ಟಿಪ್ಸ್‌ ಫಾಲೋ ಮಾಡಿ, ಗಾಢ ನಿದ್ರೆ ಬರುತ್ತೆ..

Sleeping tips : ತಡವಾಗಿ ಮಲಗುವ ಅಭ್ಯಾಸವು ಆರೋಗ್ಯಕ್ಕೆ ಹಾನಿಕಾರಕ. ಉತ್ತಮ ನಿದ್ರೆಗಾಗಿ ಮಲಗುವ ಸಮಯ ಮತ್ತು ಏಳುವ ವೇಳಾಪಟ್ಟಿಯನ್ನು ಸರಿಯಾಗಿ ನಿಭಾಯಿಸಬೇಕು. ಕೆಲವರಿಗೆ ರಾತ್ರಿ ಮಲಗಲು ಪ್ರಯತ್ನಿಸಿದರೂ ನಿದ್ದೆ ಬರಲ್ಲ.. ಅದಕ್ಕಾಗಿ ಈ ಕೆಳಗೆ ನೀಡಲಾದ ಸಲಹೆಗಳನ್ನು ಪಾಲಿಸಿ.. ಗಾಢ ನಿದ್ರೆ ಬರುತ್ತದೆ..

1 /7

ಅಧುನಿಕ ಜೀವನದಲ್ಲಿ, ಜನರು ತಡರಾತ್ರಿಯಲ್ಲಿ ಮೊಬೈಲ್ ಬಳಸುತ್ತಾ ಕೂಡುತ್ತಾರೆ.. ಬೆಳಗ್ಗೆ ತಡವಾಗಿ ಏಳುತ್ತಾರೆ.. ಸಾಮಾಜಿಕ ಮಾಧ್ಯಮವನ್ನು ಸ್ಕ್ರೋಲಿಂಗ್ ಮಾಡುವುದು ಅಥವಾ ಕೆಲಸದ ಕಾರಣ ತಡವಾಗಿ ಮಲಗುವುದು ನಿಮ್ಮ ಆರೋಗ್ಯಕ್ಕೆ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತದೆ.   

2 /7

ಉತ್ತಮ ಆರೋಗ್ಯ ಮತ್ತು ಫಿಟ್‌ನೆಸ್‌ಗಾಗಿ ಸಾಕಷ್ಟು ಮತ್ತು ಸಮಯೋಚಿತ ನಿದ್ರೆ ಬಹಳ ಮುಖ್ಯ. ನಿಮಗೆ ರಾತ್ರಿ ಬೇಗ ನಿದ್ದೆ ಮಾಡಲು ಮತ್ತು ಬೆಳಿಗ್ಗೆ ಬೇಗನೆ ಏಳಲು ತೊಂದರೆಯಾಗುತ್ತಿದ್ದರೆ, ಈ 3 ಪರಿಹಾರಗಳನ್ನು ಮಾಡಿ.. ಇದು ನಿದ್ದೆ ಮಾಡಲು ಸಹಾಯ ಮಾಡುತ್ತದೆ.    

3 /7

ನಿಮ್ಮ ನಿದ್ರೆಯ ವಿಧಾನವನ್ನು ಸುಧಾರಿಸಲು ನೀವು ಬಯಸಿದರೆ, ಮೊದಲು ಮಲಗಲು ಮತ್ತು ಏಳಲು ನಿಗದಿತ ಸಮಯವನ್ನು ಹೊಂದಿಸಿಕೊಳ್ಳಿ. ನೀವು ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಏಳುವ ಸಮಯವನ್ನು ದೇಹವೇ ಜೈವಿಕವಾಗಿ ನಿಯಂತ್ರಿಸುತ್ತದೆ.  

4 /7

ಇನ್ನು ಮಲಗುವ ಮುನ್ನ ಮೆದುಳನ್ನು ಸಕ್ರಿಯಗೊಳಿಸುವ ಅಥವಾ ಉತ್ತೇಜಿಸುವ ಯಾವುದೇ ಕೆಲಸವನ್ನು ಮಾಡಬೇಡಿ.. ಇದನ್ನು ತಪ್ಪದೇ ನೆನಪಿಡಿ. ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಟಿವಿಯಿಂದ ದೂರವಿರಿ.  

5 /7

ಮತ್ತೊಂದು ವಿಷಯವೆಂದರೆ ಸರಿಯಾದ ಆಹಾರ... ನಿದ್ರೆ ಮತ್ತು ನಿದ್ರಾಹೀನತೆ ಆಹಾರ ಮತ್ತು ದಿನಚರಿಯೊಂದಿಗೆ ನೇರವಾಗಿ ಸಂಬಂಧಿಸಿದೆ. ನೀವು ತಪ್ಪಾದ ಆಹಾರವನ್ನು ಸೇವಿಸಿದರೆ, ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಮಲಗುವ 2-3 ಗಂಟೆಗಳ ಮೊದಲು ಲಘು ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ.   

6 /7

ಮಲಗುವ ಮುನ್ನ ಹೆಚ್ಚು ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ಸೇವಿಸುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ದಿನವಿಡೀ ಸಕ್ರಿಯವಾಗಿರಲು ಪ್ರಯತ್ನಿಸಿ, ಇದರಿಂದ ದೇಹವು ರಾತ್ರಿಯಲ್ಲಿ ಚೆನ್ನಾಗಿ ನಿದ್ರಿಸುತ್ತದೆ. ಮಲಗುವ ಮುನ್ನ ನೀವು ಚಹಾ ಅಥವಾ ಬೆಚ್ಚಗಿನ ಹಾಲನ್ನು ಕುಡಿಯಬಹುದು, ಇದು ನಿಮಗೆ ವೇಗವಾಗಿ ನಿದ್ರಿಸಲು ಸಹಾಯ ಮಾಡುತ್ತದೆ.  

7 /7

ನೀವು ರಾತ್ರಿ ಬೇಗನೆ ಮಲಗಲು ಮತ್ತು ಬೆಳಿಗ್ಗೆ ಬೇಗನೆ ಏಳಲು ಬಯಸಿದರೆ, 10-15 ನಿಮಿಷಗಳ ಧ್ಯಾನ ಅಥವಾ ಲಘು ವ್ಯಾಯಾಮ ಮಾಡಿ ಇಲ್ಲವೇ ಮಲಗುವ ಮುನ್ನ ಒಳ್ಳೆಯ ಪುಸ್ತಕಗಳನ್ನು ಓದಿ. ಇವು ನಿಮ್ಮ ಮನಸ್ಸನ್ನು ಶಾಂತಗೊಳಿಸಿ ನಿದ್ರೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಮಂದ ಬೆಳಕಿನಲ್ಲಿ ಮಲಗಲು ಪ್ರಯತ್ನಿಸಿ..