ಪತ್ನಿ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದು ನಾನೇ: ಸತ್ಯ ಒಪ್ಪಿಕೊಂಡ ಸ್ಯಾಂಟ್ರೋ ರವಿ

ಪ್ರಮುಖವಾಗಿ ಸ್ಯಾಂಟ್ರೋ ರವಿ ಪತ್ನಿಯ ಮೇಲಿನ ಕಾಟನ್ ಪೇಟೆ ಕೇಸ್ ವಿಚಾರವಾಗಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.  ಸಿಸಿಬಿ ಅಧಿಕಾರಿಗಳು ರವಿ ಪತ್ನಿ ಹೇಳಿಕೆಯನ್ನ ದಾಖಲಿಸಿದ್ದು ರವಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಂಚ ಏರಲು ಪೀಡಿಸುತ್ತಿದ್ದ. ಈ ಅಧಿಕಾರಿ ನಂತರ ಇನ್ನೊಂದಷ್ಟು ಅಧಿಕಾರಿಗಳನ್ನ  ಖುಷಿಪಡಿಸಲು ಬಲವಂತ ಮಾಡುತ್ತಿದ್ದ ಎಂದಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Jan 30, 2023, 08:53 PM IST
  • ಪ್ರಮುಖವಾಗಿ ಸ್ಯಾಂಟ್ರೋ ರವಿ ಪತ್ನಿಯ ಮೇಲಿನ ಕಾಟನ್ ಪೇಟೆ ಕೇಸ್ ವಿಚಾರವಾಗಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.
  • ಸಿಸಿಬಿ ಅಧಿಕಾರಿಗಳು ರವಿ ಪತ್ನಿ ಹೇಳಿಕೆಯನ್ನ ದಾಖಲಿಸಿದ್ದು ರವಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಂಚ ಏರಲು ಪೀಡಿಸುತ್ತಿದ್ದ.
  • ಈ ಅಧಿಕಾರಿ ನಂತರ ಇನ್ನೊಂದಷ್ಟು ಅಧಿಕಾರಿಗಳನ್ನ ಖುಷಿಪಡಿಸಲು ಬಲವಂತ ಮಾಡುತ್ತಿದ್ದ ಎಂದಿದ್ದಾರೆ.
ಪತ್ನಿ ಮೇಲೆ ಸುಳ್ಳು ಕೇಸ್ ದಾಖಲಿಸಿದ್ದು ನಾನೇ: ಸತ್ಯ ಒಪ್ಪಿಕೊಂಡ ಸ್ಯಾಂಟ್ರೋ ರವಿ title=
file photo

ಬೆಂಗಳೂರು: ಸ್ಯಾಂಟ್ರೋ ರವಿ  ಸಿಐಡಿ ಕಸ್ಟಡಿ ಇಂದಿಗೆ ಅಂತ್ಯವಾಗಿದ್ದು ಶನಿವಾರವೇ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿಯನ್ನ ಮೈಸೂರು ಜೈಲಿಗೆ ಅಟ್ಟಿದ್ದಾರೆ.

ಪ್ರಮುಖವಾಗಿ ಸ್ಯಾಂಟ್ರೋ ರವಿ ಪತ್ನಿಯ ಮೇಲಿನ ಕಾಟನ್ ಪೇಟೆ ಕೇಸ್ ವಿಚಾರವಾಗಿ ಸಿಸಿಬಿ ವಿಚಾರಣೆ ನಡೆಸುತ್ತಿದೆ.  ಸಿಸಿಬಿ ಅಧಿಕಾರಿಗಳು ರವಿ ಪತ್ನಿ ಹೇಳಿಕೆಯನ್ನ ದಾಖಲಿಸಿದ್ದು ರವಿ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಜೊತೆ ಮಂಚ ಏರಲು ಪೀಡಿಸುತ್ತಿದ್ದ. ಈ ಅಧಿಕಾರಿ ನಂತರ ಇನ್ನೊಂದಷ್ಟು ಅಧಿಕಾರಿಗಳನ್ನ  ಖುಷಿಪಡಿಸಲು ಬಲವಂತ ಮಾಡುತ್ತಿದ್ದ ಎಂದಿದ್ದಾರೆ.

ಇತ್ತ ಸಿಐಡಿ ವಿಚಾರಣೆಯಲ್ಲಿ ಅಧಿಕಾರಿಗಳು ರವಿ ಹೇಳಿಕೆ ದಾಖಲಿಸಿದ್ದು, ರವಿ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.  ಪತ್ನಿ ವಿರುದ್ಧ ನಾನೇ ಕಾಟನ್ ಪೇಟೆಯಲ್ಲಿ ಸುಳ್ಳು ಕೇಸ್ ದಾಖಲಿಸಿದ್ದೇನೆ. ಇನ್ಸ್‌ಪೆಕ್ಟರ್ ಸಹಕಾರ ಪಡೆದು ಸುಳ್ಳು ಕೇಸ್ ಹಾಕಿಸಿದೆ. ಆಕೆಯನ್ನ ನಾನು ಸಾಕಷ್ಟು ನಂಬಿದ್ದೆ. ನನ್ನ ವ್ಯವಹಾರದ ಗುಟ್ಟನೆಲ್ಲ ಆಕೆಗೆ ಹೇಳಿಕೊಂಡಿದ್ದೆ. ನನ್ನ ಪರ್ಸನಲ್ ಲ್ಯಾಪ್ ಟಾಪ್ ಪಡೆದುಕೊಳ್ಳಲು ಆಕೆ ಪ್ಲಾನ್ ನಡೆಸಿದ್ದಳು.  ಅದರಲ್ಲಿ ನನ್ನ ಸಂಪೂರ್ಣ ವ್ಯವಹಾರದ ಗುಟ್ಟು ಹಾಗೂ  ಪ್ರಭಾವಿಗಳ ಖಾಸಗಿ ವಿಡಿಯೋ ಇದ್ದವು. ಆ ವಿಡಿಯೋ ಪಡೆಯಲು ಆಕೆ ಲ್ಯಾಪ್ ಟಾಪ್ ಪಡೆಯಲು ನನ್ನ ಮೇಲೆ ಜೊತೆ ಗಲಾಟೆ ಮಾಡಿದ್ದಳು. ಅದು ಸಾಧ್ಯವಾಗದಿದ್ದಾಗ ನನ್ನ ಮೇಲೆ ಈ ರೀತಿಯ ದೂರು ದಾಖಲಿಸಿದ್ದಾಳೆ ಎಂದು ರವಿ ಹೇಳಿಕೆ ನೀಡಿದ್ದಾನಂತೆ‌.

ಇನ್ನೂ ಸಿಸಿಬಿ ಅಧಿಕಾರಿಗಳು ಬುಧವಾರ ಮೈಸೂರಿಗೆ ತೆರಳಿ ರವಿಯ ಹೇಳಿಕೆ ದಾಖಲಿಸುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸ್ಯಾಂಟ್ರೋ ರವಿ ಬಾಯ್ಬಿಟ್ಟಿರುವ ವಿಚಾರದಿಂದ ಈ ಕೇಸ್ ಮತ್ತೆ ಯಾವ ಸ್ವರೂಪ ಪಡೆದುಕೊಳ್ಳುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News