Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು

ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದನ್ನ ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರಿ ಅನ್ನೋದನ್ನ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸಿಸಿ ಪಾಟೀಲ್ ಗೆ ಟಾಂಗ್ ನೀಡಿದರು.

Written by - Zee Kannada News Desk | Last Updated : Apr 21, 2022, 02:13 PM IST
Dingaleshwar Swamiji : ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ ದಿಂಗಾಲೇಶ್ವರ ಶ್ರೀಗಳು title=

ಗದಗ : ಸಚಿವ ಸಿಸಿ ಪಾಟೀಲ್ರು ನನ್ನ ಬಗ್ಗೆ ಕೆಳಮಟ್ಟದ ಪದ ಬಳಸಿ ನಮಗೆ ಭಕ್ತರು ಆಘಾತ ಮಾಡಿದ್ದಾರೆ ಎಂದು ದಿಂಗಾಲೇಶ್ವರ ಶ್ರೀಗಳು ಸಚಿವ ಸಿಸಿ ಪಾಟೀಲ್ ವಿರುದ್ಧ ಕಿಡಿಕಾರಿದ್ದಾರೆ.

ಬಾಲೆಹೊಸೂರ ಮಠದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ನಾವು ತೋಂಟದಾರ್ಯ ಲಿಂಗೈಕ್ಯ ಸಿದ್ಧಲಿಂಗ ಶ್ರೀಗಳಿಗೆ ಕೊಟ್ಟ ಪ್ರಶಸ್ತಿ ವಿರೋಧಿಸಿಲ್ಲ. ಆದ್ರೆ ಅವರ ಹೆಸರಲ್ಲಿ ಭಾವೈಕ್ಯತೆ ದಿನ ಆಚರಣೆ ಬೇಡ ಎಂದಿದ್ದೇವೆ. ಅದು ಸಚಿವ ಸಿಸಿ ಪಾಟೀಲ್ ಅರ್ಥ ಮಾಡಿಕೊಳ್ಳಬೇಕು. ದಿಂಗಾಲೇಶ್ವರ ಶ್ರೀಗಳು ಸಹಿಸಿಕೊಳ್ತಾಯಿಲ್ಲ ಅಂತ ಸಿ‌ಸಿ ಪಾಟೀಲ್ ಹೇಳಿದ್ದು ಸರಿಯಲ್ಲ. ಈ ಆರೋಪ ಶೋಭೆ ತರವಲ್ಲ. ಶಿರಹಟ್ಟಿ ಪರಂಪರೆ ನಾಶ ಮಾಡಲು ಈ ನಿರ್ಧಾರ ಮಾಡಿದ್ದಾರೆ. ಭಾವೈಕ್ಯತಾ ದಿನಾಚರಣೆ ಘೋಷಣೆ ತಪ್ಪು ಅಂತ ಹೇಳಿದ್ದು ಸಚಿವರಿಗೆ ಸಹಿಸಿಕೊಳ್ಳಲು ಆಗಲ್ಲ. ಪೂರ್ವಾಶ್ರಮದ ಬಗ್ಗೆ ನನಗೆ ಗೋತ್ತಿದೆ ಅಂತ ಸಚಿವ ಸಿಸಿ ಪಾಟೀಲ್ ಅಂದಿದ್ದಾರೆ. 5ನೇ ವರ್ಷದವನಾಗಿದ್ದಾಲೇ ಮಾನಸಿಕವಾಗಿ ನಾನು ಸನ್ಯಾಸಿ ಸ್ವೀಕಾರ ಮಾಡಿದ್ದೇನೆ. ಪೂರ್ವಾಶ್ರಮದ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಮನೆಯಲ್ಲಿ ಸಚಿವ ಸಿಸಿ ಪಾಟೀಲ್ ಮಾಲೀಕರಾಗಿದ್ದಿರೋ. ಜೀತದಾಳು ಆಗಿದ್ದೀರೋ ಸಮಾಜಕ್ಕೆ ಸ್ಪಷ್ಟ ಪಡಿಸಬೇಕು ಎಂದರು. 

ಇದನ್ನೂ ಓದಿ : ಹುಬ್ಬಳ್ಳಿ ಗಲಭೆಗೆ ಬಿಜೆಪಿ ಕುಮ್ಮಕ್ಕು ಕಾರಣ ಹೊರತು ಕಾಂಗ್ರೆಸ್ ಅಲ್ಲ: ಡಿ.ಕೆ. ಶಿವಕುಮಾರ್

ಮೂರು ಸಾವಿರ ಮಠದ ವಿಷಯ ಪ್ರಸ್ತಾಪ ಮಾಡಿದ್ದೀರಿ. ಮೂರು ಸಾವಿರ ಮಠದ ಪೀಠಕ್ಕಾಗಿ ರೌಡಿಸಂ‌ ಮಾಡಿದ್ದಾರೆ ಎಂದಿದ್ದಾರೆ. ರೌಡಿಸಂ ಏನ್ ಮಾಡಿದ್ದೇನೆ ಸಚಿವ ಸಿಸಿ ಪಾಟೀಲ್ ತೋರಿಸಬೇಕು. ಸಚಿವ ಸಿಸಿ ಪಾಟೀಲ್ ನನ್ನ ಮೇಲೆ ಮಾಡಿರೋ ಆರೋಪ ಸಾಬೀತು ಮಾಡಿದ್ರೆ ತಕ್ಷಣ ಎಲ್ಲ ಮಠಗಳ ಪೀಠ ತ್ಯಾಗ ಮಾಡ್ತೀನಿ ಎಂದು ಶ್ರೀಗಳು ಸಚಿವ ಸಿಸಿ ಪಾಟೀಲ್ ಗೆ ಸವಾಲು ಹಾಕಿದ್ದಾರೆ. ಈ ಬಗ್ಗೆ ರಾಜ್ಯದ ಜನರಿಗೆ ಸಚಿವ ಸಿಸಿ ಪಾಟೀಲ್ ಸ್ಪಷ್ಟನೆ ನೀಡದಿದ್ರೆ. ಏಪ್ರಿಲ್ 27ರೊಳಗರ ಸಚಿವ ಸಿಸಿ ಪಾಟೀಲ್ ಸ್ಪಷ್ಟನೆ ಕೊಡಬೇಕು. ಒಂದು ವೇಳೆ ಕೊಡದಿದ್ರೆ 27 ರಂದು ಸಚಿವ ಸಿಸಿ ಪಾಟೀಲ್ ನರಗುಂದ ಪಟ್ಟಣದ ಮನೆಯ ಎದುರು ಸತ್ಯಾಗ್ರಹ ಆರಂಭ. ನಂತ್ರ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ. 

ನಮ್ಮನ್ನು ಪೂಜ್ಯರ ಅಂತ ಕರಿಯುವರು ಭಕ್ತರು. ಅನಾಗರಿಕತೆ ಉಳ್ಳವರು ಅಲ್ಲ ಎಂದು ಸಿಸಿ ಪಾಟೀಲ್ ಗೆ ತಿರುಗೇಟು ನೀಡಿದರು. ನಿಮ್ಮ ಮಕ್ಕಳ ಮದುವೆಗೆ ಕರೆದು ಆಶೀರ್ವಾದ ಮಾಡಿಸಿದಾಗ. ನಮ್ಮ ಪೂರ್ವಾಶ್ರಮದ ಮಾಹಿತಿ, ರೌಡಿಸಂ ಗೊತ್ತಿರಲಿಲ್ಲವೇ ಸಿಸಿ ಪಾಟೀಲ್ ರೇ ಅಂತ ವಾಗ್ದಾಳಿ ನಡೆಸಿದರು. 

ಪರಂಪರೆಗೆ ಧಕ್ಕೆ ತರುವ ಕೆಲಸ ಮಾಡಿದ್ರೆ ಸಹಿಸಿಕೊಂಡು ಸುಮ್ಮನಿರಲ್ಲ. ಸ್ವಾಮಿಗಳು ಜಾಮೀನು ಮೇಲೆ ಇದ್ದಾರೆ ಎಂದಿದ್ದೀರಿ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಧ್ವನಿ ಎತ್ತಿದ್ದಾಗ ಈ ರೀತಿ ಮಾಡೋದು ಸರಿನಾ. ನನ್ನ ನೈತಿಕತೆಯ ಬಗ್ಗೆ ಪ್ರಶ್ನೆ ಮಾಡಿದ್ಸೀರಿ. ನಿಮ್ಮ ನೈತಿಕತೆಯ ಬಗ್ಗೆ ನನಗೆ ಬಹಳಷ್ಟು ಆಶ್ಚರ್ಯ ಆಗ್ತಿದೆ. ವಿಧಾನಸೌಧದಲ್ಲಿ ಅಧಿವೇಶನ ನಡೆದಾಗ ಮೊಬೈಲ್ ನಲ್ಲಿ ಏನ್ ನೋಡಿದ್ರಿ ಅನ್ನೋದನ್ನ ಇಡೀ ಜಗತ್ತಿಗೆ ಗೊತ್ತಿದೆ. ಯಾವ ನೈತಿಕೆಯ ಹಿನ್ನೆಲೆಯಲ್ಲಿ ನೀವು ರಾಜೀನಾಮೆ ಕೊಟ್ರಿ ಅನ್ನೋದನ್ನ ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸಿಸಿ ಪಾಟೀಲ್ ಗೆ ಟಾಂಗ್ ನೀಡಿದರು.

ಇದನ್ನೂ ಓದಿ : MP Renukacharya : ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರು ಕಾಂಗ್ರೆಸ್ : ಎಂಪಿ ರೇಣುಕಾಚಾರ್ಯ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News