CD Case : ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ಮುಂದಾದ ಸಿ.ಡಿ ಲೇಡಿ

ಸಿಡಿ ಪ್ರಕರಣದಲ್ಲಿರುವ ಯುವತಿ ಒಂದೊಂದೇ ವೀಡಿಯೊ ರಿಲೀಸ್ ಮಾಡುತ್ತಿದ್ದಾರೆ. ಇದು ಮೂರನೇ ವೀಡಿಯೊ ಬಿಡುಗಡೆ ಮಾಡಿದ್ದು, ತಾನು ಜೀವ ಭಯದಲ್ಲೇ ಬದುಕುತ್ತಿರುವುದಾಗಿ ಹೇಳಿದ್ದಾರೆ.

Written by - Ranjitha R K | Last Updated : Mar 26, 2021, 01:07 PM IST
  • ಸಿ.ಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ
  • ೨೪ ದಿನಗಳಿಂದ ಜೀವಭಯದಲ್ಲೇ ಇರುವುದಾಗಿ ಹೇಳಿಕೆ
  • ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುವುದಾಗಿ ಹೇಳಿಕೆ
CD Case : ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ಮುಂದಾದ  ಸಿ.ಡಿ ಲೇಡಿ  title=
ಸಿ.ಡಿ ಲೇಡಿಯಿಂದ ಮತ್ತೊಂದು ವಿಡಿಯೋ ಬಿಡುಗಡೆ (file hoto)

ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ (Ramesh Jarakiholi) ಸಿಡಿ ಪ್ರಕರಣದ ಯವತಿ ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಲು ನಿರ್ಧರಿಸಿರುವುದಾಗಿ ಯುವತಿ ವೀಡಿಯೊದಲ್ಲಿ ಹೇಳಿದ್ದಾರೆ. ಕಳೆದ ೨೪ ದಿನಗಳಿಂದ ಭಯದಿಂದಲೇ ಬದುಕುತ್ತಿರುವುದಾಗಿ ಅವರು ಹೇಳಿದ್ದಾರೆ. ಅಲ್ಲದ ತನ್ನ ವಕೀಲರಾಗಿರುವ ಜಗದೀಶ್ ಮೂಲಕ ರಮೇಶ್ ಜಾರಕಿಹೊಳಿ ವಿರುದ್ಧ ದೂರು ಸಲ್ಲಿಸುವುದಾಗಿ ಹೇಳಿದ್ದಾರೆ. 

ಸಿಡಿ ಪ್ರಕರಣದಲ್ಲಿರುವ (CD case) ಯುವತಿ ಒಂದೊಂದೇ ವೀಡಿಯೊ ರಿಲೀಸ್ ಮಾಡುತ್ತಿದ್ದಾರೆ. ಇದು ಮೂರನೇ ವೀಡಿಯೊ ಬಿಡುಗಡೆ ಮಾಡಿದ್ದು, ತಾನು ಜೀವ ಭಯದಲ್ಲೇ ಬದುಕುತ್ತಿರುವುದಾಗಿ ಹೇಳಿದ್ದಾರೆ. ತನಗೆ ಬೇರೆ ಬೇರೆ ಪಕ್ಷದ ನಾಯಕರು, ಸಂಘಟನೆಗಳು ಮತ್ತು ರಾಜ್ಯದ ಜನತೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ಯುವತಿ (CD lady) ಹೇಳಿದ್ದಾರೆ. ಎಲ್ಲರೂ ನೀಡುತ್ತಿರುವ ಬೆಂಬಲದಿಂದಾಗಿ ಇದೀಗ ತನಗೆ ಧೈರ್ಯ ಬಂದಿರುವುದಾಗಿಯೂ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವಕೀಲರ ಮೂಲಕ ರಮೇಶ್ ಜಾರಕಿಹೊಳಿ (Ramesh Jarakiholi)  ವಿರುದ್ಧ ದೂರು ದಾಖಲಿಸುವುದಾಗಿ ಯುವತಿ ಹೇಳಿದ್ದಾರೆ. 

ಇದನ್ನೂ ಓದಿ : Karnataka BJP: 'ರಾಜ್ಯ ಕಮಲ ಪಾಳೆಯಲ್ಲಿ' ಭಾರೀ ಬದಲಾವಣೆ, ವರಿಷ್ಠರಿಂದ ಮಹತ್ವದ ಕ್ರಮ..!

ನಿನ್ನೆಯಷ್ಟೇ ಎರಡನೇ ವೀಡಿಯೊ ಬಿಡುಗಡೆ ಮಾಡಿದ್ದ ಯುವತಿ  ಮೊದಲು ನನ್ನ ಅಪ್ಪ-ಅಮ್ಮನಿಗೆ ರಕ್ಷಣೆ ನೀಡಿ. ಅವರಿಗೆ ರಕ್ಷಣೆ ನೀಡಿದ್ದು ಖಚಿತವಾದರೆ ಎಸ್‌ಐಟಿ (SIT) ಮುಂದೆ ಬಂದು ಹೇಳಿಕೆ ದಾಖಲಿಸುವುದಾಗಿ ಹೇಳಿದ್ದರು.  ತನ್ನ ಅಪ್ಪ, ಅಮ್ಮನಿಗೆ ರಕ್ಷಣೆ ನೀಡುವಂತೆ ಮಹಿಳಾ ಸಂಘಟನೆಗಳು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಮೇಶ್ ಕುಮಾರ್ ಅವರಲ್ಲಿ ಮನವಿ ಮಾಡಿಕೊಂಡಿದ್ದರು.   

ಇದನ್ನೂ ಓದಿ : HD Kumaraswamy: ಸರ್ಕಾರದ ಮುಂದೆ 'ಒಂದೇ ಬೇಡಿಕೆ' ಇಟ್ಟ ಡಿಕೆಶಿ, HDK..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

   

Trending News