ಹಾವೇರಿ: ಇತ್ತೀಚೆಗೆ ಜಮ್ಮು-ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹಾವೇರಿಯಲ್ಲಿ ನಡೆದ ಕಾಂಗ್ರೆಸ್ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿ ನಡೆದಾಗ 40 ಯೋಧರು ಹುತಾತ್ಮರಾದರು. ಇಂದಿನ ಬಿಜೆಪಿ ಸರ್ಕಾರವೇ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮಸೂದ್ ಅಜರ್ ನನ್ನು ಭಾರತದಿಂದ ಪಾಕಿಸ್ತಾನಕ್ಕೆ ಕಳುಹಿಸಿತ್ತು. ಮಸೂದ್ ನನ್ನು ಬಿಡುಗಡೆ ಮಾಡದಿದ್ದರೆ ನಾವು ನಮ್ಮ ಯೋಧರನ್ನು ಕಳೆದುಕೊಳ್ಳುತ್ತಿರಲಿಲ್ಲ. ಇದನ್ನು ಪ್ರಧಾನಿ ಮೋದಿ ಮರೆತಿದ್ದೀರಾ ಎಂದು ಪ್ರಶ್ನಿಸಿದರು.
"My questions to @narendramodi are
Who killed the #CRPF soldiers who were martyred?Who is the chief of Jaish-e-Mohammed?
It is Masood Azhar.Please tell me who sent Masood Azhar back to Pakistan from Indian Jail?@BJP4India escorted him back.":Rahul Gandhi #NammaRahulGandhi
— Karnataka Congress (@INCKarnataka) March 9, 2019
"ಜೈಷ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್, ಹಿಂದೂಸ್ತಾನದ ಜೈಲಿನಿಂದ ಪಾಕಿಸ್ತಾನಕ್ಕೆ ಯಾರು ಕಳುಹಿಸಿದ್ದು? ಪುಲ್ವಾಮಾ ದಾಳಿಗೆ ಯಾರು ಹೊಣೆ? ಇದನ್ನು ನೀವು ಯಾಕೆ ಮಾತನಾಡುತ್ತಿಲ್ಲ? ನಾವು ನಿಮ್ಮ ಹಾಗೆ ಅಲ್ಲ, ನಾವು ಯಾವತ್ತಿಗೂ ಭಯೋತ್ಪಾದನೆಗೆ ತಲೆ ಬಾಗುವುದಿಲ್ಲ. ತಲೆ ಎತ್ತಿ ನಿಲ್ಲುತ್ತೇವೆ, ಜೈಷ್ ಉಗ್ರ ಸಂಘಟನೆ ಮುಖಂಡನನ್ನು ಯಾಕೆ ಪಾಕಿಸ್ತಾನಕ್ಕೆ ಕಳುಹಿಸಿದ್ದು ಎಂಬುದನ್ನು ಪ್ರಧಾನಿ ಮೋದಿಯವರು ಮುಂದಿನ ಭಾಷಣದಲ್ಲಿ ಹೇಳಬೇಕು"ಎಂದು ರಾಹುಲ್ ವಾಗ್ದಾಳಿ ನಡೆಸಿದರು.