ನವದೆಹಲಿ: Spg Commandos Suitcase - ಪ್ರಧಾನಿ ನರೇಂದ್ರ ಮೋದಿ (PM Naarendra Modi) ಅವರ ಭದ್ರತೆಯಲ್ಲಿ ನಿಯೋಜಿಸಲಾದ ಎಸ್ಪಿಜಿ ಕಮಾಂಡೋಗಳು (SPG Commandos) ಯಾವಾಗಲೂ ತಮ್ಮ ಕೈಯಲ್ಲಿ ಕಪ್ಪು ಬಣ್ಣದ ಸೂಟ್ಕೇಸ್ ಅನ್ನು ಹಿಡಿದಿರುವುದನ್ನು ನೀವು ಗಮನಿಸಿರಬಹುದು. ಅಷ್ಟೇ ಅಲ್ಲ ಅವರು ಯಾವಾಗಲೂ ತಮ್ಮ ಕಣ್ಣಿಗೆ ಕಪ್ಪು ಕನ್ನಡಕವನ್ನೇ ಧರಿಸಿರುತ್ತಾರೆ. . ಇದರ ಹಿಂದೆ ಎಸ್ ಪಿಜಿ ಕಮಾಂಡೋಗಳ ತಂತ್ರ ಏನು ನಿಮಗೆ ತಿಳಿದಿದೆಯಾ? ಯಾಕೆ ಎಸ್ಪಿಜಿ ಕಮಾಂಡೋಗಳ ಕೈಯಲ್ಲಿ ಕಪ್ಪು ಬಣ್ಣದ ಬ್ರಿಫ್ ಕೇಸ್ ಇರುತ್ತದೆ ಮತ್ತು ಅದರಲ್ಲೆನಿರುತ್ತದೆ? ಅವರು ಯಾಕೆ ಕಪ್ಪು ಬಣ್ಣದ ಕನ್ನಡಕ ಧರಿಸಿರುತ್ತಾರೆ? ಈ ಎಲ್ಲಾ ಪ್ರಶ್ನೆಗಳ ಉತ್ತರ ಹುಡುಕುವ ಪ್ರಯತ್ನ ಮಾಡೋಣ ಬನ್ನಿ.
ಎಸ್ಪಿಜಿ ಕಮಾಂಡೋ ಬ್ರೀಫ್ಕೇಸ್ನಲ್ಲಿ ಏನಿರುತ್ತದೆ? (Viral News)
SPG ಕಮಾಂಡೋಗಳ ಬ್ರೀಫ್ಕೇಸ್, ಲಗೇಜ್ ಬ್ರೀಫ್ಕೇಸ್ ಅಲ್ಲ ಎಂಬುದು ನಿಮಗೆ ತಿಳಿದಿರಲಿ. ಶಿಲ್ದ್ ಆಗಿರುವ ಈ ಬ್ರಿಫ್ ಕೇಸ್ ಬುಲೆಟ್ ಪ್ರೂಫ್ ಆಗಿರುತ್ತದೆ ಮಾತು ಸಾಮಾನ್ಯ ಗನ್ ನಲ್ಲಿರುವ ಗುಂಡುಗಳು ಅದರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನ ಮಂತ್ರಿಯ ಮೇಲೆ ಎಂದಾದರೂ ದಾಳಿಯಾದರೆ, ಎಸ್ಪಿಜಿ ಕಮಾಂಡೋಗಳು ಈ ಬ್ರೀಫ್ಕೇಸ್ ಅನ್ನು ತೆರೆಯುತ್ತಾರೆ ಮತ್ತು ಗುಂಡು ನಿರೋಧಕ ಶೀಲ್ಡ್ನೊಂದಿಗೆ ಪ್ರಧಾನಿಯನ್ನು ರಕ್ಷಿಸುತ್ತಾರೆ. ವಿಶೇಷ ಬ್ರೀಫ್ಕೇಸ್ನಲ್ಲಿ ಗನ್ ಕೂಡ ಇರುತ್ತದೆ, ಇದರಿಂದ ಎಸ್ಪಿಜಿ ಕಮಾಂಡೋಗಳು ಪ್ರತಿದಾಳಿ ನಡೆಸಬಹುದು.
SPG ಕಮಾಂಡೋಗಳು ಕಪ್ಪು ಕನ್ನಡಕವನ್ನು ಏಕೆ ಧರಿಸುತ್ತಾರೆ? (Trending News)
ಪ್ರಧಾನಿಯವರ ಭದ್ರತೆಯಲ್ಲಿ ನಿಯೋಜಿಸಲಾದ ಎಸ್ಪಿಜಿ ಕಮಾಂಡೋಗಳು ಯಾವಾಗಲೂ ಕಪ್ಪು ಕನ್ನಡಕವನ್ನು ಧರಿಸಿರುವುದನ್ನು ನೀವು ಗಮನಿಸಿರಬೇಕು. ಇದರ ಹಿಂದೆಯೂ ವಿಶೇಷ ಕಾರಣವಿದೆ. ವಾಸ್ತವದಲ್ಲಿ ಪ್ರಧಾನಿ ಮೋದಿ ಅವರ ಅಂಗರಕ್ಷಕರು ಎಲ್ಲಾ ಕಡೆ ಕಣ್ಣು ಹರಿಸುತ್ತಾರೆ ಮತ್ತು ಕಪ್ಪು ಕನ್ನಡಕವನ್ನು ಧರಿಸಿರುವುದರಿಂದ, ಅವರು ಯಾವ ಕಡೆ ನೋಡುತ್ತಿದ್ದಾರೆಂದು ಯಾರಿಗೂ ತಿಳಿಯುವುದಿಲ್ಲ. ದಾಳಿ ನಡೆಯುವ ಕಡೆಯಿಂದ ಎಸ್ಪಿಜಿ ಕಮಾಂಡೋಗಳು ಸದಾ ಜಾಗರೂಕರಿರುತ್ತಾರೆ.
ಇದನ್ನೂ ಓದಿ-VIDEO: ಕ್ರಿಕೆಟ್ ಇತಿಹಾಸದಲ್ಲಿ ದೊಡ್ಡ ವಿಸ್ಮಯ, ಕ್ಲೀನ್ ಬೌಲ್ಡ್ ಆದ ನಂತರವೂ ಬ್ಯಾಟ್ಸ್ಮನ್ ಔಟಾಗಲಿಲ್ಲ
ಕಪ್ಪು ಕನ್ನಡಕಕ್ಕೆ ಇನ್ನೊಂದು ಕಾರಣವೂ ಇದೆ. ಪ್ರಧಾನಿ ಇರುವ ಜಾಗದ ಸುತ್ತಲು ಒಂದು ವೇಳೆ ಸ್ಫೋಟ ಸಂಭವಿಸಿದರೆ, ಪ್ರಕಾಶಮಾನವಾದ ಬೆಳಕು ಅವರ ಕಣ್ಣಿಗೆ ಹೊಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ವಲ್ಪ ಸಮಯದವರೆಗೆ ವ್ಯಕ್ತಿಗೆ ಏನು ಮಾಡುವುದು ತೋಚುವುದಿಲ್ಲ. ಹೀಗಿರುವಾಗ ಅಂತಹ ಪರಿಸ್ಥಿತಿಯನ್ನು ನಿಭಾಯಿಸಲು, ಎಸ್ಪಿಜಿ ಕಮಾಂಡ್ಗಳು ಯಾವಾಗಲೂ ತಮ್ಮ ಕಣ್ಣುಗಳಿಗೆ ಕಪ್ಪು ಕನ್ನಡಕವನ್ನು ಧರಿಸಿರುತ್ತಾರೆ. ಕಪ್ಪು ಕನ್ನಡಕವು ಬ್ಲಾಸ್ಟ್ ಬೆಳಕಿನ ಪರಿಣಾಮವನ್ನು ತಡೆಯುತ್ತದೆ.
ಇದನ್ನೂ ಓದಿ-Panama Papers Leak Case: ಖ್ಯಾತ ಬಾಲಿವುಡ್ ನಟಿ Aishwarya Rai Bachchan ಗೆ ED ಸಮನ್ಸ್
SPG ಅನ್ನು ಯಾವಾಗ ರಚಿಸಲಾಯಿತು?
ವಿಶೇಷ ರಕ್ಷಣಾ ಗುಂಪು (SPG) 1984ರಲ್ಲಿ ಮೊದಲ ಬಾರಿಗೆ ರಚನೆಗೊಂಡಿದೆ. ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಎಸ್ಪಿಜಿ ರಚನೆಯ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. SPG ಸಿಬ್ಬಂದಿ ತುಂಬಾ ಚುರುಕುಬುದ್ಧಿಯುಳ್ಳವರಾಗಿರುತ್ತಾರೆ. ಎಸ್ಪಿಜಿ ಕಮಾಂಡೋಗಳ ಭದ್ರತೆಯನ್ನು ಪ್ರಧಾನಿ, ಮಾಜಿ ಪ್ರಧಾನಿ ಮತ್ತು ವಿದೇಶಿ ಅತಿಥಿಗಳಿಗೆ ನೀಡಲಾಗುತ್ತದೆ. ಎಸ್ಪಿಜಿ ಕಮಾಂಡೋಗಳು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.
ಇದನ್ನೂ ಓದಿ-ಕರುನಾಡಿಗೆ Omicron ಆಪತ್ತು: ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್! ಜಾರಿಯಾಗುತ್ತಾ ನೈಟ್ ಕರ್ಫ್ಯೂ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.