Tirupati Vaikunta Dwara Darshan Ticket: ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಪ್ರತಿದಿನವೂ ಲಕ್ಷಾಂತರ ಭಕ್ತರು ಬರುತ್ತಾರೆ, ದೇಶದ ನಾನಾ ಮೂಲೆಗಳಿಂದ ಪ್ರಪಂಚದ ಬೇರೆ ಬೇರೆ ದೇಶಗಳಿಂದ ಜನ ಬರುತ್ತಾರೆ. ಇನ್ನು ವೈಕುಂಠ ಏಕಾದಶಿಯ ಭಕ್ತರ ಸಂಖ್ಯೆ ಇನ್ನೂ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಟಿಟಿಡಿ ಡಿಸಂಬರ್ 23ರಿಂದ ವೈಕುಂಠ ದ್ವಾರ ದರ್ಶನಕ್ಕೆ ಆನ್ಲೈನ್ ಟಿಕೆಟ್ಗಳನ್ನು ಬಿಡುಗಡೆ ಮಾಡಲಿದೆ.
ತಿರುಪತಿಯಲ್ಲಿ ಪ್ರತಿವರ್ಷ ವೈಕುಂಠ ಏಕಾದಶಿಯ ಆಚರಣೆಗಳನ್ನು ಅತ್ಯಂತ ವೈಭವ-ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತದೆ. 2025ರ ಜನವರಿ 10ರಿಂದ 19ರವರೆಗೆ ನಡೆಯಲಿರುವ ಈ ವರ್ಷದ ವೈಕುಂಠ ಏಕಾದಶಿ ಇನ್ನಷ್ಟು ವಿಜೃಂಭಣೆಯಿಂದ ಜರುಗಲಿದೆ. ತಿರುಪತಿಯ ತಿಮ್ಮಪ್ಪ ದೇವಸ್ಥಾನದ ಗರ್ಭಗುಡಿಯನ್ನು ಸುತ್ತುವರೆದಿರುವ ಒಳಗಿನ ಮಾರ್ಗವನ್ನು ವೈಕುಂಠ ದ್ವಾರ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ- ಭಿಕ್ಷುಕರಿಗೆ ಹಣ ಕೊಟ್ಟರೆ ಜೈಲಿಗೆ ಹೋಗಬೇಕಾಗುತ್ತೆ ಹುಷಾರ್! ಜನವರಿಯಿಂದ ಹೊಸ ರೂಲ್ಸ್ ಜಾರಿ..!
ವೈಕುಂಠ ದ್ವಾರ ಜನವರಿ 10ರಿಂದ 19ರವರೆಗೆ ತೆರೆದಿರುತ್ತದೆ. ವೈಕುಂಠ ದ್ವಾರ ದರ್ಶನ ಪಡೆಯುವುದು ಅತ್ಯಂತ ಪುಣ್ಯದ ಕೆಲಸ ಎನ್ನುವುದು ಭಕ್ತರ ನಂಬಿಕೆಯಾಗಿದೆ. ವಿವಿಐಪಿಗಳಿಗೆ ಜನವರಿ 10ರಂದು ಬೆಳಿಗ್ಗೆ 4.45ಕ್ಕೆ ದರ್ಶನ ವ್ಯವಸ್ಥೆ ಇರುತ್ತದೆ. ಬೆಳಿಗ್ಗೆ 9 ರಿಂದ 11ರವರೆಗೆ ಚಿನ್ನದ ರಥದಲ್ಲಿ ತಿಮ್ಮಪ್ಪನ ಮೆರವಣಿಗೆ ಆಗಲಿದೆ. ದ್ವಾದಶಿಯ ದಿನ ಅಂದರೆ ಜನವರಿ 11ರಂದು ಬೆಳಿಗ್ಗೆ 5.30 ರಿಂದ 6.30ರವರೆಗೆ ದೇವಸ್ಥಾನದ ಹೊಂಡದಲ್ಲಿ ಚಕ್ರಸ್ನಾನ ಇರುತ್ತದೆ.
ಇದನ್ನೂ ಓದಿ- ಮಗುವನ್ನು ತಾಯಿಯಿಂದ ದೂರ ಮಾಡುವುದು ಕ್ರೌರ್ಯ ಮತ್ತು ಮಾನಸಿಕ ಕಿರುಕುಳಕ್ಕೆ ಸಮ: ಬಾಂಬೆ ಹೈಕೋರ್ಟ್
ವೈಕುಂಠ ದ್ವಾರ ದರ್ಶನಕ್ಕೆ ಈ ದಿನದಿಂದ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭ:
ಡಿಸೆಂಬರ್ 23ರಂದು ಬೆಳಿಗ್ಗೆ 11ಗಂಟೆಗೆ ಆನ್ಲೈನ್ ಟಿಕೆಟ್ ಬುಕಿಂಗ್ ಆರಂಭವಾಗುತ್ತದೆ. 300 ರೂಪಾಯಿ ಟಿಕೆಟ್ ಗೆ ವೈಕುಂಠ ದ್ವಾರ ದರ್ಶನಕ್ಕೆ ವಿಶೇಷ ಪ್ರವೇಶ ಇರುತ್ತದೆ. ಹೆಚ್ಚಿನ ಸಂಖ್ಯೆಯ ಭಕ್ತರು ತೆಗೆದುಕೊಳ್ಳುವ ಸ್ಲಾಟೆಡ್ ಸರ್ವ ದರ್ಶನ ಟೋಕನ್ ಗಳು ತಿರುಮಲದಲ್ಲಿರುವ ಕೌಸ್ತುಭಮ್ ಗೆಸ್ಟ್ ಹೌಸ್ ನಲ್ಲಿ ಹಾಗು ತಿರುಪತಿಯಲ್ಲಿ ನಿರ್ಮಿಸಿರುವ 8 ಕೌಂಟರ್ ಗಳಲ್ಲಿ ಸಿಗುತ್ತವೆ. ಭಕ್ತರ ಅನುಕೂಲಕ್ಕಾಗಿ ವೈಕುಂಠ ದರ್ಶನದ ವೇಳೆ ಪ್ರತಿದಿನವೂ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಅನ್ನದಾನ ಇರುತ್ತದೆ. ಪ್ರಸಾದ ಕೊಳ್ಳುವವರಿಗಾಗಿ ಈ ಸಲ ಹೆಚ್ಚುವರಿಯಾಗಿ 3.5 ಲಕ್ಷ ಲಡ್ಡುಗಳನ್ನು ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.