259.67 ಕೋಟಿ ಮೌಲ್ಯದ ಆಸ್ತಿ ಘೋಷಿರುವ ಇವರೇ ದೆಹಲಿ ಚುನಾವಣಾ ಕಣದಲ್ಲಿರುವ ಸಿರಿವಂತ ಅಭ್ಯರ್ಥಿ:ಯಾವ ಪಕ್ಷದ ನಾಯಕ ಈತ ?

Delhi Election 2025 Richest Candidates:ವರದಿಯ ಪ್ರಕಾರ, 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ.

Written by - Ranjitha R K | Last Updated : Feb 5, 2025, 01:24 PM IST
  • ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ
  • ಫೆಬ್ರವರಿ 8 ರಂದು ಫಲಿತಾಂಶ ಘೋಷಣೆಯಾಗಲಿದೆ.
  • ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ಹೆಚ್ಚುತ್ತಲೇ ಹೋಗುತ್ತಿದೆ
259.67 ಕೋಟಿ ಮೌಲ್ಯದ ಆಸ್ತಿ ಘೋಷಿರುವ ಇವರೇ ದೆಹಲಿ ಚುನಾವಣಾ ಕಣದಲ್ಲಿರುವ ಸಿರಿವಂತ ಅಭ್ಯರ್ಥಿ:ಯಾವ ಪಕ್ಷದ ನಾಯಕ ಈತ ?  title=

Delhi Election 2025 Richest Candidates : ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಫೆಬ್ರವರಿ 8 ರಂದು ಫಲಿತಾಂಶ ಘೋಷಣೆಯಾಗಲಿದೆ. 2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳ ಅಭ್ಯರ್ಥಿ ಗಳು ಕಣದಲ್ಲಿದ್ದಾರೆ. ಈ ಬಾರಿ ದೆಹಲಿ ಸಿಂಹಾಸನದಲ್ಲಿ ಜನ ಯಾರನ್ನು ಕೂರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.  

ಈ ಮಧ್ಯೆ, ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ನಡೆಸಿದ ದೆಹಲಿ ವಿಧಾನಸಭಾ ಚುನಾವಣಾ ವರದಿಯು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಆಸ್ತಿ ಹೆಚ್ಚುತ್ತಲೇ ಹೋಗುತ್ತಿದೆ ಎಂದು ಹೇಳಿದೆ. ವರದಿಯ ಪ್ರಕಾರ, 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿರುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನಲಾಗಿದೆ. 2020 ರಲ್ಲಿ, ಕೇವಲ 13 ಅಭ್ಯರ್ಥಿಗಳು 50 ಕೋಟಿ ರೂ.ಗಳಿಗಿಂತ ಹೆಚ್ಚಿನ ಆಸ್ತಿಯನ್ನು ಹೊಂದಿದ್ದರು. ಆದರೆ ಈ ವರ್ಷ ಆ ಸಂಖ್ಯೆ 23 ಕ್ಕೆ ಏರಿದೆ. 

ಇದನ್ನೂ ಓದಿ : ದೆಹಲಿ ಈ ನಗರದ 16ನೇ ಹೆಸರು !ಹಾಗಿದ್ದರೆ ಉಳಿದ 15 ಹೆಸರುಗಳೇನಿತ್ತು? ಇಲ್ಲಿದೆ ನೋಡಿ ವಿವರ

ಈ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಮೂರು ಪ್ರಮುಖ ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದು, ಇಬ್ಬರು ಸ್ವತಂತ್ರ ಅಭ್ಯರ್ಥಿಗಳು. ಈ ವಿಭಾಗದಲ್ಲಿ ಬಿಜೆಪಿ ಮುಂಚೂಣಿಯಲ್ಲಿದ್ದು, ಅತಿ ಶ್ರೀಮಂತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿಗಳ ಸರಾಸರಿ ಆಸ್ತಿ 22.90 ಕೋಟಿ ರೂ. ಆಗಿದ್ದು, ಕಾಂಗ್ರೆಸ್ ಅಭ್ಯರ್ಥಿಗಳ ಸರಾಸರಿ ಆಸ್ತಿ 14.41 ಕೋಟಿ ರೂ. ಆಗಿದೆ. ಎಎಪಿ ಅಭ್ಯರ್ಥಿಗಳ ಸರಾಸರಿ ಘೋಷಿತ ಆಸ್ತಿ 11.70 ಕೋಟಿ ರೂ.ಗಳಾಗಿದೆ. 

ಬಿಜೆಪಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ: ಬಿಜೆಪಿಯ ಕೋಟ್ಯಾಧಿಪತಿ ಅಭ್ಯರ್ಥಿಗಳಲ್ಲಿ, ಶಕುರ್ ಬಸ್ತಿಯಿಂದ ಸ್ಪರ್ಧಿಸುತ್ತಿರುವ ಕರ್ನೈಲ್ ಸಿಂಗ್ (259.67 ಕೋಟಿ ರೂ.) ಅತ್ಯಂತ ಶ್ರೀಮಂತ ಅಭ್ಯರ್ಥಿ. ಇವರಾದ ನಂತರ ರಾಜೌರಿ ಗಾರ್ಡನ್‌ನಿಂದ ಮಂಜಿಂದರ್ ಸಿಂಗ್ ಸಿರ್ಸಾ (ರೂ. 248.85 ಕೋಟಿ), ನವದೆಹಲಿಯನ್ನು ಪ್ರತಿನಿಧಿಸುವ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ (ರೂ. 115.63 ಕೋಟಿ) ಆಸ್ತಿಯನ್ನು ಹೊಂದಿದ್ದಾರೆ. 

ಇದನ್ನೂ ಓದಿ : Delhi Assembly Election 2025: ಇಂದು ದೆಹಲಿ ವಿಧಾನಸಭಾ ಚುನಾವಣೆ... 70 ಕ್ಷೇತ್ರಗಳಲ್ಲಿ ನಡೆಯಲಿದೆ ಮತದಾನ!

ಕಾಂಗ್ರೆಸ್‌ನ ಅತ್ಯಂತ ಶ್ರೀಮಂತ ಅಭ್ಯರ್ಥಿ: ಗುರುಚರಣ್ ಸಿಂಗ್ ರಾಜು (130.90 ಕೋಟಿ ರೂ.) ಕೃಷ್ಣ ನಗರದಿಂದ ಸ್ಪರ್ಧಿಸುತ್ತಿದ್ದಾರೆ. 

ಎಎಪಿಯ ಅತ್ಯಂತ ಶ್ರೀಮಂತ ಅಭ್ಯರ್ಥಿ: ಧನ್ವತಿ ಚಾಂಡೇಲಾ (ರೂ. 109.90 ಕೋಟಿ) ರಾಜೌರಿ ಗಾರ್ಡನ್ ನಿಂದ ಸ್ಪರ್ಧಿಸುತ್ತಿದ್ದಾರೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News