ಕುಂಭಮೇಳದ ರೈಲಿನ ಟಾಯ್ಲೆಟ್‌ ರೂಂನಲ್ಲಿ.. ಥೂ.. ಹುಡುಗಿಯರಾಗಿ ಇಂಥಾ ಕೆಲಸ ಮಾಡೋದೆ..! ವಿಡಿಯೋ ವೈರಲ್..

Kumbha Mela viral video : ಕುಂಭಮೇಳದಲ್ಲಿ ಪಾಲ್ಗೊಳ್ಳಲು ಪ್ರಯಾಗರಾಜ್‌ಗೆ ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈ ಕ್ರಮದಲ್ಲಿ, ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಸಹ ಪ್ರಯಾಣಿಕರಿಂದ ತುಂಬಿ ತುಳುಕುತ್ತಿವೆ.. ಇಂತಹ ಒಂದು ಟ್ರೈನ್‌ನಲ್ಲಿ ಯುವತಿಯರು ಮಾಡಿದ ಕೆಲಸ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..  

Written by - Krishna N K | Last Updated : Feb 8, 2025, 04:05 PM IST
    • ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
    • ಜನವರಿ 13 ರಂದು ಆರಂಭವಾದ ಕುಂಭಮೇಳ ಫೆಬ್ರವರಿ 26 ರವರೆಗೆ ನಡೆಯಲಿದೆ.
    • ಕುಂಭಮೇಳದ ಟ್ರೈನ್‌ನಲ್ಲಿ ಯುವತಿಯರು ಮಾಡಿದ ಕೆಲಸ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ..
ಕುಂಭಮೇಳದ ರೈಲಿನ ಟಾಯ್ಲೆಟ್‌ ರೂಂನಲ್ಲಿ.. ಥೂ.. ಹುಡುಗಿಯರಾಗಿ ಇಂಥಾ ಕೆಲಸ ಮಾಡೋದೆ..! ವಿಡಿಯೋ ವೈರಲ್.. title=

Girl reel on kumbha mele train : ಕುಂಭಮೇಳಕ್ಕೆ ಪ್ರಪಂಚದಾದ್ಯಂತದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಜನವರಿ 13 ರಂದು ಆರಂಭವಾದ ಕುಂಭಮೇಳ ಫೆಬ್ರವರಿ 26 ರವರೆಗೆ ನಡೆಯಲಿದೆ. ಪ್ರಯಾಗರಾಜ್ ಕುಂಭಮೇಳಕ್ಕಾಗಿ ಇದುವರೆಗೆ 39 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ. 

ಮತ್ತೊಂದೆಡೆ, ಕುಂಭಮೇಳಕ್ಕೆ ಬರುವ ಭಕ್ತರಿಗೆ ಎಲ್ಲಿಯೂ ಯಾವುದೇ ತೊಂದರೆಗಳು ಎದುರಾಗದಂತೆ ಯೋಗಿ ಸರ್ಕಾರ ಕ್ರಮ ಕೈಗೊಂಡಿದೆ. ಈ ಕ್ರಮದಲ್ಲಿ, ಕುಂಭಮೇಳಕ್ಕೆ ಹೋಗುವ ರೈಲುಗಳು, ಬಸ್ಸುಗಳು ಮತ್ತು ವಿಮಾನಗಳು ಜನದಟ್ಟಣೆಯಿಂದ ಕೂಡಿರುತ್ತವೆ.

ಇದನ್ನೂ ಓದಿ:13 ರ ವಿದ್ಯಾರ್ಥಿನಿಯ ಮೇಲೆ 3 ಶಿಕ್ಷಕರಿಂದ ಅತ್ಯಾಚಾರ..! ಗರ್ಭಿಣಿಯಾದ ಬಾಲಕಿ ಬಿಚ್ಚಿಟ್ಟಳು ಗುರುಗಳ ಕ್ರೂರ ಮುಖ...

ಕುಂಭಮೇಳಗಳಿಗೆ ಹೋಗುವವರಿಗಾಗಿ ಭಾರತೀಯ ರೈಲ್ವೆ ಈಗಾಗಲೇ ವಿಶೇಷ ರೈಲುಗಳನ್ನು ಬಿಟ್ಟಿದೆ..  ಕುಂಭಮೇಳಕ್ಕೆ ಹೋಗಲು ಭಕ್ತರು ಹೆಚ್ಚಿನ ಆಸಕ್ತಿ ತೋರಿಸುತ್ತಿರುವ ಕಾರಣ ಎಲ್ಲಾ ರೈಲುಗಳ ಎಸಿ ಕೋಚ್‌ಗಳು ಸಹ ಸಾಮಾನ್ಯ ಕೋಚ್‌ಗಳಂತೆ ಭಕ್ತರಿಂದ ತುಂಬಿ ತುಳುಕುತ್ತಿವೆ. ಈ ಅನುಕ್ರಮದಲ್ಲಿ, ಪ್ರಯಾಗ್‌ರಾಜ್‌ಗೆ ಹೋಗುತ್ತಿದ್ದ ಕೆಲವು ಹುಡುಗಿಯರು ರೈಲ್‌ನ ವಾಶ್‌ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ..  

 
 
 
 

 
 
 
 
 
 
 
 
 
 
 

A post shared by Isha Banerjee (@mammam5645)

ಅಲ್ಲಿಗೆ ನಿಲ್ಲದ ಅವರ ಆಟ.. ಅಲ್ಲಿಯೂ ರೀಲ್‌ಗಳನ್ನು ತೆಗೆದುಕೊಳ್ಳುವಲ್ಲಿ ನಿರತರಾಗಿದ್ದರು. ಅವರು ರೀಲ್‌ಗಳನ್ನು ಮಾಡಿ ತಾವು ವಾಶ್‌ರೂಮ್‌ನಲ್ಲಿದ್ದೇವೆ ಮತ್ತು ಬಾಗಿಲು ಲಾಕ್ ಆಗಿದೆ ಎಂದು ಹೇಳುತ್ತಿದ್ದಾರೆ. ಈ ವೀಡಿಯೊದಲ್ಲಿ, ರೈಲು ತುಂಬಿತ್ತು ಮತ್ತು ನಿಲ್ಲಲು ಸಹ ಸ್ಥಳವಿಲ್ಲ, ಆದ್ದರಿಂದ ನಾವು ಬಾತ್‌ ರೂಮ್‌ ಹೋಗಿ ಬಾಗಿಲು ಹಾಕಿಕೊಂಡಿದ್ದೇವೆ ಅಂತ ಯುವತಿಯರು ಹೇಳುವುದನ್ನು ಕಾಣಬಹುದು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ:ಮಾಜಿ ಸಿಎಂ ಕೇಜ್ರಿವಾಲ್‌ಗೆ ಸೋಲಿನ ರುಚಿ ತೋರಿಸಿದ ಬಿಜೆಪಿ ಅಭ್ಯರ್ಥಿ ಯಾರ್‌ ಗೊತ್ತೆ..? ಮುಂದಿನ CM ಇವರೇನಾ..?

ಇದನ್ನು ನೋಡಿದ ನೆಟ್ಟಿಗರು ಹುಡುಗಿಯರು ಮಾಡಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಅಲ್ಲಿನ ವಾಸನೆಯನ್ನು ಅವರು ಹೇಗೆ ಸಹಿಸಿಕೊಳ್ಳುತ್ತಾರೆ ಎಂದು ಕೆಲವು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.. ಇನ್ನೂ ಕೆಲವರು.. ಅರ್ಜೆಂಟ್‌ ಇದ್ದವರು ಪರಿಸ್ಥಿತಿ ಏನು..? ಈ ರೀತಿ ಮಾಡುವುದು ಸರಿಯಲ್ಲ ಅಂತ ಕಿಡಿಕಾರುತ್ತಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News