ನವದೆಹಲಿ: ರಾಷ್ಟ್ರಮಟ್ಟದಲ್ಲಿ ಬಿಜೆಪಿ ಅಲೆಗೆ ತಡೆಯೊಡ್ಡಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಾದೇಶಿಕ ಪಕ್ಷಗಳನ್ನೊಳಗೊಂಡ ಮೈತ್ರಿಕೂಟ ರಚನೆಗೆ ಸಿದ್ದತೆ ನಡೆಸಿದ್ದಾರೆ.
ಮುಂಬರುವ 2019 ರ ಸಾರ್ವತ್ರಿಕ ಚುನಾವಣೆಗೆ ಸಿದ್ದತೆ ನಡೆಸುವ ನಿಟ್ಟಿನಲ್ಲಿ ಸೋನಿಯಾ ಗಾಂಧಿ ಒಟ್ಟು 17 ಪಕ್ಷಗಳ ನಾಯಕರನ್ನು ಭೋಜನಕೂಟಕ್ಕೆ ಆಹ್ವಾನ ನೀಡಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ,ಈ ಭೋಜನಕೂಟದಲ್ಲಿ ಎಡಪಕ್ಷಗಳು,ಜೆಡಿಎಸ್, ಕೇರಳಾ ಕಾಂಗ್ರೆಸ್, ಮುಸ್ಲಿಂ ಲೀಗ್, ಆರ್ ಜೆ ಡಿ, ಡಿಎಂಕೆ ,ಸಮಾಜವಾದಿ ಪಕ್ಷದ ನಾಯಕರಿಗೆ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ.ಈ ಭೋಜನ ಕೂಟವು ಜನಪಥ 10 ನಲ್ಲಿರುವ ಸೋನಿಯಾ ಗಾಂಧಿ ಯವರ ಮನೆಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಲಾಗಿದೆ.