ನವದೆಹಲಿ: ಚುನಾವಣೆ ಬಂತೆದರೆ ಸಾಕು ರಾಜಕಾರಣಿಗಳಿಗೆ ಪಕ್ಷದ ಕಾರ್ಯಕರ್ತರುಗಳು ಹಲವು ಬಗೆ ಅವತಾರಗಳ ಮೂಲಕ ಚಿತ್ರಿಸುತ್ತಾರೆ.ಅದರಂತೆ ಈಗ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿಯವರನ್ನು ಪೋಸ್ಟರ್ ನಲ್ಲಿ ಶ್ರೀರಾಮನ ಅವತಾರದಲ್ಲಿ ಚಿತ್ರಿಸಿದ್ದಾರೆ.
ಕುತೂಹಲಕಾರಿ ವಿಷಯವೇನೆಂದರೆ ಇತ್ತೀಚಿಗಷ್ಟೇ ಅಧಿಕೃತ ರಾಜಕಾರಣಕ್ಕೆ ಕಾಲಿಟ್ಟಿರುವ ಪ್ರಿಯಾಂಕಾ ಗಾಂಧಿಯವರು ಸಹ ಪೋಸ್ಟರ್ ನಲ್ಲಿ ಸ್ಥಾನ ಪಡೆದಿದ್ದಾರೆ. ಉಳಿದದಂತೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಅಲ್ಲಿನ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ಪೋಸ್ಟರ್ ನಲ್ಲಿ ಚಿತ್ರಿಸಲಾಗಿದೆ.
Bihar: Congress President Rahul Gandhi portrayed as Lord Ram on a poster in Patna. pic.twitter.com/La4ZcL64GY
— ANI (@ANI) January 29, 2019
ಬಿಜೆಪಿಗೆ ಟಾಂಗ್ ಕೊಡುವ ಕಾರಣಕ್ಕೆ"ಅವರು (ಬಿಜೆಪಿ) ರಾಮನ ಜಪ ಮಾಡುತ್ತಾರೆ ನೀವು(ರಾಹುಲ್ ಗಾಂಧಿ) ಶ್ರೀರಾಮನಂತೆ ಬದುಕುತ್ತಿದ್ದಿರಿ" ಎನ್ನುವ ಸಾಲು ಎಲ್ಲರ ಗಮನ ಸೆಳೆಯುತ್ತದೆ. ಬರುವ ಫೆಬ್ರುವರಿ 3 ರಂದು ಪಾಟ್ನಾದಲ್ಲಿ ನಡೆಯಲಿರುವ ಕಾಂಗ್ರೆಸ್ ರ್ಯಾಲಿ ಹಿನ್ನಲೆಯಲ್ಲಿ ಈಗ ಪಕ್ಷದ ನಾಯಕರ ಪೋಸ್ಟರ್ ಗಳನ್ನು ನಗರದಲ್ಲೆಡೆ ಹಾಕಲಾಗಿದೆ.
ಕಳೆದ ವರ್ಷ 2018 ರ ಸೆಪ್ಟೆಂಬರ್ನಲ್ಲಿ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ರಾಹುಲ್ ಗಾಂಧಿಯವರನ್ನು ನಡೆಸುವುದಾಗಿ ಘೋಷಿಸಿದಾಗ,ಭೋಪಾಲ್ನಲ್ಲಿ ಅವರನ್ನು 'ಶಿವಭಕ್ತ ರಾಹುಲ್ ಗಾಂಧಿ ಎನ್ನುವ ಪೋಸ್ಟರ್ ಗಳು ಗಮನ ಸೆಳೆದಿದ್ದವು.