Mutton and chicken included in telangana govt hostel food menu | ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್..! ಮಧ್ಯಾಹ್ನದ ಊಟದಲ್ಲಿ... ತಿಂಗಳಿಗೆ 2 ಬಾರಿ ಮಟನ್ ಮತ್ತು 4 ಬಾರಿ ಚಿಕನ್..
Mid day meal, Mutton in mid day meal, Telangana hostel food, Mid day meals menu, mutton dishes in govt hostel, Telangana students, Telangana schools, Kannada News, Kannada, Today Kannada News, Zee Kannada News, Latest Kannada News, Latest Kannada News, live news in Kannada, Breaking News in Kannada, Today Kannada News, ಕನ್ನಡ ನ್ಯೂಸ್, ಕನ್ನಡದಲ್ಲಿ ಇತ್ತೀಚಿನ ಸುದ್ದಿ, ಕನ್ನಡದಲ್ಲಿ ಬ್ರೇಕಿಂಗ್ ನ್ಯೂಸ್, ಜೀ ನ್ಯೂಸ್ ಕನ್ನಡ
ಡಿಸೆಂಬರ್ 14 ರಿಂದ ಸರ್ಕಾರಿ ಹಾಸ್ಟೆಲ್ ಮತ್ತು ಗುರುಕುಲದ ವಿದ್ಯಾರ್ಥಿಗಳಿಗೆ ಹೊಸ ಮೆನು ಲಭ್ಯವಿರುತ್ತದೆ. ಇಲ್ಲಿಯವರೆಗೆ ಅನುಸರಿಸುತ್ತಿದ್ದ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ. ಸರ್ಕಾರವು ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಟಿಕಾಂಶವಿರುವ ಮೆನುವನ್ನು ಸಿದ್ಧಪಡಿಸಿದೆ. ಮಧ್ಯಾಹ್ನದ ಊಟದಲ್ಲಿ... ತಿಂಗಳಿಗೆ ಎರಡು ಬಾರಿ ಮಟನ್ ಮತ್ತು 4 ಬಾರಿ ಚಿಕನ್.
Mutton in govt hostel food : ತೆಲಂಗಾಣ ರಾಜ್ಯದ ಕಲ್ಯಾಣ ಹಾಸ್ಟೆಲ್‌ಗಳಲ್ಲಿನ ಸ್ಥಿತಿಗತಿಗಳನ್ನು ತಿಳಿಯಲು ಖುದ್ದು ಮುಖ್ಯಮಂತ್ರಿ ರೇವಂತ ರೆಡ್ಡಿ ಮತ್ತು ಸಚಿವರು ಇಡೀ ಸರ್ಕಾರಿ ಆಡಳಿತದೊಂದಿಗೆ ಹಾಸ್ಟೆಲ್ ಮತ್ತು ಗುರುಕುಲಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಅವರೊಂದಿಗೆ ಊಟ ಸಹ ಮಾಡಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶದ ಜತೆಗೆ ರುಚಿಕರವಾದ ಊಟ ನೀಡುವತ್ತ ಗಮನಹರಿಸಲು ಸರಕಾರ ನಿರ್ಧರಿಸಿದೆ.. ಇದುವರೆಗೆ ಜಾರಿಗೆ ಬಂದಿರುವ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ನೀಡಲು ಮೆನು ಸಿದ್ಧಪಡಿಸಲಾಗಿದೆ.
ಇದುವರೆಗೆ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಪ್ರತಿ ಭಾನುವಾರ ಕೋಳಿ ಮಾಂಸವನ್ನು ನೀಡಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಮಟನ್ ನೀಡಲಾಗುತ್ತಿದೆ. ಇನ್ನು ಮುಂದೆ ಊಟದಲ್ಲಿ ತಿಂಗಳಿಗೆ ಎರಡು ಬಾರಿ ಮಟನ್ ಹಾಗೂ 4 ಬಾರಿ ಚಿಕನ್ ನೀಡಲಾಗುವುದು. ಮಾಂಸಾಹಾರಿ ಊಟದಲ್ಲಿ ಸಾಂಬಾರ್ ಮತ್ತು ಮೊಸರು ಸೇರಿದೆ.
ರಂಗಾರೆಡ್ಡಿ ಜಿಲ್ಲೆಯ ಚಿಲ್ಕೂರಿನ ಸಮಾಜ ಕಲ್ಯಾಣ ವಸತಿ ಶಾಲೆಗೆ ತೆರಳಿದ ಸಿಎಂ ರೇವಂತ್ ರೆಡ್ಡಿ... ಅಲ್ಲಿಂದ ರಾಜ್ಯದ ಎಲ್ಲ ಸರಕಾರಿ ಹಾಸ್ಟೆಲ್, ಗುರುಕುಲಗಳಲ್ಲಿ ಕಾಮನ್ ಡಯಟ್ ಪ್ಲಾನ್ ಆರಂಭಿಸಿದರು. ಬಳಿಕ ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸಿ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು..