ತರಕಾರಿ ತರಲು 30 ರೂ. ಕೇಳಿದ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ!

ಕೇಂದ್ರ ಸರ್ಕಾರ ತ್ರಿವಳಿ ತಲಾಕ್​ ಪದ್ಧತಿಗೆ ತಿದ್ದುಪಡಿ ತಂದು ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇಂಥಹ ಘಟನೆ ನಡೆದಿದೆ.   

Last Updated : Jul 1, 2019, 03:11 PM IST
ತರಕಾರಿ ತರಲು 30 ರೂ. ಕೇಳಿದ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಪತಿ! title=

ನವದೆಹಲಿ: ತರಕಾರಿ ತರಲು 30 ರೂ. ಕೇಳಿದ ಪತ್ನಿ ಮೇಲೆ ಹಲ್ಲೆ ಮಾಡಿದ ಪತಿಯೊಬ್ಬ ತ್ರಿವಳಿ ತಲಾಕ್ ನೀಡಿದ ಘಟನೆ ಗ್ರೇಟರ್ ನೋಯ್ಡಾದ ದಾದ್ರಿಯಲ್ಲಿ ಭಾನುವಾರ ನಡೆದಿದೆ. ಈ ಬಗ್ಗೆ ದೂರು ನೀಡಿರುವ 30 ವರ್ಷದ ಮಹಿಳೆ ಜೈನಾಬ್, ಪತಿ ಸಬೀತ್ ತನ್ನ ಮೇಲೆ ಸ್ಕ್ರೂ ಡ್ರೈವರ್'ನಿಂದ ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ತ್ರಿವಳಿ ತಲಾಕ್​ ಪದ್ಧತಿಗೆ ತಿದ್ದುಪಡಿ ತಂದು ಮುಸ್ಲಿಂ ಮಹಿಳೆಯರ ರಕ್ಷಣೆಗೆ ಕಾಯಿದೆ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಇಂಥಹ ಘಟನೆ ನಡೆದಿದೆ. 

"ಆರೋಪಿ ಪತಿ ಸಬೀರ್(32) ತನ್ನ ಮೇಲೆ ಸ್ಕ್ರೂ ಡ್ರೈವರ್ ನಿಂದ ಹಲ್ಲೆ ಮಾಡಿದ್ದಲ್ಲದೆ, ಆಕೆಯ ಮುಖಕ್ಕೆ ಉಗುಳಿ, ತಲಾಖ್ ಹೇಳಿ ಮನೆಯಿಂದ ಹಾಕಿರುವುದಾಗಿ ಹಾಗೂ ಈ ಸಂದರ್ಭದಲ್ಲಿ ಆತನ ಸಂಬಂಧಿಗಳೂ ಹಲ್ಲೆ ನಡೆಸಿದರು" ಎಂದು ಜೈನಾಬ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ವಿವರಿಸಿದ್ದಾರೆ. 

ಸದ್ಯ ದಾದ್ರಿ ಪೊಲೀಸ್​ ಠಾಣೆಯಲ್ಲಿ ಪತಿ ಸಬೀರ್​, ಆತನ ತಾಯಿ ಮತ್ತು ಸೋದರಿಯ ವಿರುದ್ಧ ಎಫ್​ಐಆರ್​ ದಾಖಲಾಗಿದ್ದು, ಪೋಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Trending News