Bisi Bele Bath History: ಕರ್ನಾಟಕದ ಅತ್ಯಂತ ಪ್ರಸಿದ್ಧ ಆಹಾರದಲ್ಲಿ ಬಿಸಿ ಬೇಳೆ ಬಾತ್. ವಾರದಲ್ಲಿ ಒಮ್ಮೆಯಾದರೂ ಇದು ನಮ್ಮೆಲ್ಲರ ಮನೆಗಳಲ್ಲಿ ತಯಾರಾಗುವ ಅಡುಗೆಯಾಗಿದೆ. ಭಾರತೀಯರು ಅಕ್ಕಿ ಬಳಸಿ ವಿವಿಧ ಖಾದ್ಯಗಳನ್ನು ತಯಾರಿಸುತ್ತಾರೆ. ಬಿಸಿ ಬೇಳೆ ಬಾತ್ ಕೂಡ ಅಕ್ಕಿ ಮತ್ತು ಬೇಳೆ ಬಳಸಿ ತಯಾರಿಸುವ ರುಚಿಕರ ಖಾದ್ಯ.
ಕರ್ನಾಟಕದ ಬಿಸಿ ಬೇಳೆ ಬಾತ್ ಅದರ ಸುವಾಸನೆಯಿಂದ ಹೆಸರುವಾಸಿಯಾಗಿದೆ. ಕರ್ನಾಟಕದ ಸಾಂಪ್ರದಾಯಿಕ ಅಕ್ಕಿ ಮತ್ತು ಬೇಳೆ ಬಳಸಿ ಮಾಡುವ ಬಿಸಿ ಬೇಳೆ ಬಾತ್ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.
ಕರ್ನಾಟಕದಲ್ಲಿ ಬಿಸಿ ಬೇಳೆ ಬಾತ್ ಎಂದರೆ "ಬಿಸಿ ಬೇಳೆ ಅನ್ನ" ಎಂದರ್ಥ. ಈ ಖಾದ್ಯದ ನಿಖರವಾದ ಮೂಲವು ಚರ್ಚೆಯಲ್ಲಿದ್ದರೂ ಇದು ಸಾಮಾನ್ಯವಾಗಿ ಕರ್ನಾಟಕದಲ್ಲಿ ಶತಮಾನಗಳಿಂದಲೂ ಇದೆ ಎಂದು ಪರಿಗಣಿಸಲಾಗಿದೆ.
ಇತಿಹಾಸಕಾರ ಕೆ.ಟಿ.ಆಚಾಯ ಅವರ ಪ್ರಕಾರ, ಬಿಸಿ ಬೇಳೆ ಬಾತ್ ಬಹುಶಃ 10 ನೇ ಶತಮಾನದ ಕಟ್ಟೋಗರ ಎಂಬ ಖಾದ್ಯದ ರೂಪಾಂತರವಾಗಿದೆ. ಇದನ್ನು ಅಕ್ಕಿ, ತುಪ್ಪ, ಉಪ್ಪು ಮತ್ತು ಬೆಳ್ಳುಳ್ಳಿಯಿಂದ ತಯಾರಿಸಲಾಗುತ್ತಿತ್ತು. ಇತರರು ನಂಬುವಂತೆ ಬಿಸಿ ಬೇಳೆ ಬಾತ್ ಮೈಸೂರು ಅರಮನೆಯಲ್ಲಿ ಗೋಡಂಬಿ, ಒಣಕೊಬ್ಬರಿ, ಸಾಸಿವೆ ಮತ್ತು ದಾಲ್ಚಿನ್ನಿಯೊಂದಿಗೆ ಜೀರ್ಣಿಸಿಕೊಳ್ಳಲು ಸುಲಭವಾದ ಊಟವಾಗಿ ಜನಿಸಿತು.
ಹಿಂದಿನ ಕಾಲದಲ್ಲಿ ತಯಾರಿಸುತ್ತಿದ್ದ ಬಿಸಿ ಬೇಳೆ ಬಾತ್ ಗೆ ಯಾವುದೇ ತರಕಾರಿಗಳನ್ನು ಸೇರಿಸುತ್ತಿರಲಿಲ್ಲ ಎಂದು ನಂಬಲಾಗಿದೆ. ಬದಲಾಗಿ ಮೈಸೂರು ರಾಜಮನೆತನವು ಅದನ್ನು ತರಕಾರಿ ಸೇರಿಸಿ ತಯಾರಿಸಿ ತಿನ್ನುತ್ತಿತ್ತು. ಬಿಸಿ ಬೇಳೆ ಬಾತ್ ಮೈಸೂರು ಅರಮನೆಯನ್ನು ಮೀರಿ ಸಾಮಾನ್ಯ ಜನರ ಅಡುಗೆಮನೆಗೆ ತಲುಪುತ್ತಿದ್ದಂತೆ ತರಕಾರಿಗಳ ಸೇರ್ಪಡೆಯು ಹೆಚ್ಚಾಯಿತು. ಬಿಸಿ ಬೇಳೆ ಬಾತ್ ಕರ್ನಾಟಕದ ಪಾಕಪದ್ಧತಿಯ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯ ಸಂಕೇತವಾಗಿದೆ.
ಇದನ್ನೂ ಓದಿ: ತೆಂಗಿನೆಣ್ಣೆಗೆ ಇದನ್ನು ಬೆರೆಸಿ ಹಚ್ಚಿದರೆ ಬಿಳಿ ಕೂದಲು ಕಪ್ಪಾಗಿ ದಷ್ಟಪುಷ್ಟವಾಗಿ ಉದ್ದವಾಗಿ ಬೆಳೆಯುತ್ತದೆ!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.