ಟೆಕ್ ಆಫ್ ಆಗುತ್ತಿದ್ದ ವೇಳೆ ಗೋಡೆಗೆ ಅಪ್ಪಳಿಸಿದ ವಿಮಾನ, 136 ಪ್ರಯಾಣಿಕರು ಸೇಫ್

ತಿರುಚಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ  ಗೋಡೆಗೆ ಅಪ್ಪಳಿಸಿದೆ, ಆದರೆ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ. 

Last Updated : Oct 12, 2018, 10:25 AM IST
ಟೆಕ್ ಆಫ್ ಆಗುತ್ತಿದ್ದ ವೇಳೆ ಗೋಡೆಗೆ ಅಪ್ಪಳಿಸಿದ ವಿಮಾನ, 136 ಪ್ರಯಾಣಿಕರು ಸೇಫ್ title=
Photo:ANI

ನವದೆಹಲಿ: ತಿರುಚಿಯಿಂದ ದುಬೈಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ  ಗೋಡೆಗೆ ಅಪ್ಪಳಿಸಿದೆ ಆದರೆ ಪ್ರಯಾಣಿಸುತ್ತಿದ್ದ ಎಲ್ಲ ಪ್ರಯಾಣಿಕರು ಸೇಫ್ ಆಗಿದ್ದಾರೆ ಎಂದು ತಿಳಿದುಬಂದಿದೆ. 

ತಿರುಚಿ ವಿಮಾನ ನಿಲ್ದಾಣದಿಂದ ಹೊರಟಿದ್ದ ವಿಮಾನ ಗೋಡೆಗೆ ಅಪ್ಪಳಿಸಿದ ಪರಿಣಾಮವಾಗಿ ಅದನ್ನು ಮುಂಬೈ ಕಡೆಗೆ ತಿರುಗಿಸಲಾಗಿಯಿತು .ವಿಮಾನವು ಈಗ ಸೇಫಾಗಿ ಮುಂಬೈನಲ್ಲಿ ಇಳಿದಿದೆ. ಇಳಿದ ನಂತರ ವಿಮಾನವನ್ನು ಪರಿಶೀಲಿಸಿದಾಗ ಸ್ವಲ್ಪ ಪ್ರಮಾಣದಲ್ಲಿ ಹಾನಿ ಆಗಿದೆ ಎಂದು ತಿಳಿದುಬಂದಿದೆ. ಇದಾದ ನಂತರ ಮುಂಬೈನಿಂದ ಇನ್ನೊಂದು ವಿಮಾನದ ಮೂಲಕ ದುಬೈ ಗೆ ಪ್ರಯಾಣಿಕರನ್ನು ಸಾಗಿಸಲಾಯಿತು.

ಈಗ ಈ ಘಟನೆ ವಿಚಾರವಾಗಿ ಆಂತರಿಕ ತನಿಖೆಯನ್ನು ನಡೆಸಲಾಗಿದೆ ಹಿರಿಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಿಮಾನದ ಎರಡು ಚಕ್ರಗಳು ಗೋಡೆಯ ಮೇಲಿನ ಭಾಗಕ್ಕೆ ಸ್ಪರ್ಶವಾಗಿವೆ ಇದರಿಂದ ಗೋಡೆಯ ಭಾಗವು ಕುಸಿದಿದೆ ಎಂದು ತಿಳಿದುಬಂದಿದೆ.

Trending News