Shikakai Benefits: ಕೂದಲು ಉದುರುವುದು, ತಲೆಹೊಟ್ಟು ಮುಂತಾದ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ನಿಮ್ಮ ಕೂದಲಿನ ರಕ್ಷಣೆಯನ್ನು ಮಾಡಲು ಇಂದು ನಾವು ಸುಲಭವಾದ ಪರಿಹಾರಗಳನ್ನು ಹೇಳಲಿದ್ದೇವೆ.. ಈ ಮನೆಮದ್ದಿನಿಂದ ಯಾವುದೇ ಖರ್ಚಿಲ್ಲದೇ ಕಡಿಮೆ ಸಮಯದಲ್ಲಿ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿದೆ..
ಕೂದಲು ಉದುರುವಿಕೆ ಎಲ್ಲ ವಯೋಮಿತಿ ಜನರಿಗೆ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ.. ಇಷ್ಟೇ ಅಲ್ಲ ಇದರೊಂದಿಗೆ ತಲೆ ಹೊಟ್ಟು ಬಿಳಿ ಕೂದಲು ಹೀಗೆ ಹಲವಾರು ಸಮಸ್ಯೆಗಳು ಉಧ್ಭವವಾಗುತ್ತವೆ.. ಇದಕ್ಕೆ ನೈಸರ್ಗಿಕವಾಗಿ ಪರಿಹಾರ ಕಂಡುಕೊಳ್ಳುವುದು ಉತ್ತಮ..
ನಾವು ಗಮನಿಸಿದಾಗ ನಮ್ಮ ಹಿರಿಯರ ಕೂದಲು ಹೆಚ್ಚು ಸುಂದರ ಹಾಗೂ ಉದ್ದವಾಗಿರುತ್ತದೆ.. ಅಷ್ಟೇ ಅಲ್ಲ ಅವರಿಗೆ ಯಾವುದೇ ಕೂದಲು ಸಂಭಂದಿ ಸಮಸ್ಯೆಗಳಿರುವುದಿಲ್ಲ.. ಅದಕ್ಕೆ ಕಾರಣ ಅವರು ಬಳಸುತ್ತಿದ್ದ ಸೀಗೆಕಾಯಿ..
ಈ ಸೀಗೆ ಕಾಯಿಯನ್ನು ವಾರಕ್ಕೆ 2 ರಿಂದ 3 ಬಾರಿ ಕೂದಲಿಗೆ ಹಚ್ಚಿ ಸ್ನಾನ ಮಾಡುವುದರಿಂದ ಕೂದಲು ಬಿಳಿಯಾಗುವುದಿಲ್ಲ ಮತ್ತು ಬಿಳಿ ಕೂದಲಿದ್ದರೂ ಅವು ಕಪ್ಪು ಬಣ್ಣಕ್ಕೆ ತಿರುಗುತ್ತವೆ..
ದುಬಾರಿ ಶಾಂಪೂ, ಹೇರ್ ಪ್ಯಾಕ್ ಬಳಸಿ ಕೂದಲಿಗೆ ಹಾನಿ ಮಾಡಿಕೊಳ್ಳುವುದಕ್ಕಿಂತ ಸೀಗೆಕಾಯಿ ಪುಡಿಯಿಂದ ತಲೆಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರೇ ಹೊಳೆಯುವ ಕೂದಲು ನಿಮ್ಮದಾಗುತ್ತದೆ.
ಇನ್ನು ತಲೆ ಹೊಟ್ಟಿನ ಸಮಸ್ಯೆ.. ಇದರಿಂದ ಬೇಸೋತ್ತಿರುವವರು ಸಾಕಷ್ಟು ಜನ ಇದ್ದಾರೆ.. ಆದರೆ ಶಾಶ್ವತವಾಗಿ ತಲೆಹೊಟ್ಟಿಗೆ ಪರಿಹಾರ ಬಯಸುವವರು ಸೀಗೆಕಾಯಿ ಪುಡಿಯಿಂದ ಮಾಡಿ.. ಇದು ಕೂದಲಿನ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ನೀಡುತ್ತದೆ..
ಸೂಚನೆ: ಆತ್ಮೀಯ ಓದುಗರೇ, ನಮ್ಮ ಸುದ್ದಿಗಳನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮಗೆ ಅರಿವು ಮೂಡಿಸುವ ಉದ್ದೇಶದಿಂದ ಬರೆಯಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.