ಕಾವೇರಿ ಸಮಸ್ಯೆ: ಕೇಂದ್ರ ಸರ್ಕಾರದ ಸ್ಕೀಂ ಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ

    

Last Updated : May 18, 2018, 03:55 PM IST
ಕಾವೇರಿ ಸಮಸ್ಯೆ: ಕೇಂದ್ರ ಸರ್ಕಾರದ ಸ್ಕೀಂ ಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ title=

ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ  ಸಂಬಂಧಿಸಿದಂತೆ ನಿರ್ವಹಣಾ ಮಂಡಳಿ ರಚನೆ ಕುರಿತು ಕೇಂದ್ರ ಸರ್ಕಾರ ಸಲ್ಲಿಸಿದ್ದ ಯೋಜನಾ ಕರಡಿಗೆ ಸುಪ್ರೀಂಕೋರ್ಟ್ ಶುಕ್ರವಾರ ಒಪ್ಪಿಗೆ ಸೂಚಿಸಿದೆ. ಸುಪ್ರೀಂ ತನ್ನ ತೀರ್ಪಿನಲ್ಲಿ  4 ರಾಜ್ಯಗಳ ನಡುವೆ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರ ರೂಪಿಸಿರುವ ಯೋಜನೆಯನ್ನು ಮುಂಗಾರಿಗೂ ಮೊದಲೇ ಜಾರಿ ಮಾಡುವಂತೆ ತಿಳಿಸಿದೆ. 

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಪ್ರಾಧಿಕಾರಕ್ಕೆ ಸಂಪೂರ್ಣ ಅಧಿಕಾರ ಇರಬೇಕು ಎನ್ನುವ  ಪುದುಚೇರಿ  ಬೇಡಿಕೆಗೆ ಸುಪ್ರೀಂಕೋರ್ಟ್ ಸ್ಪಂಧಿಸಿದ್ದು , ಜಲಾಶಯಗಳು ಮತ್ತು ಅಣೆಕಟ್ಟುಗಳು ಆಯಾ ರಾಜ್ಯಗಳ ಹಿಡಿತದಲ್ಲಿಯೇ ಇರುತ್ತವೆ ಎಂದು ತಿಳಿಸಿವೆ.ಸರ್ಕಾರವು  ರೂಪಿಸಿರುವ ಪರಿಷ್ಕ್ರತ ಯೋಜನೆಯು ನೀರು ಹಂಚಿಕೆಯ ಮಾಹಿತಿಯನ್ನು  ತಿಂಗಳಿಗೊಮ್ಮೆ ಸಂಗ್ರಹಿಸಲು ಪ್ರಾಧಿಕಾರಕ್ಕೆ ಅನುವು  ಮಾಡಿಕೊಡಲಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್ ಆದೇಶದಂತೆ ಕಾವೇರಿ ಸ್ಕೀಂ ಕರಡು ನಿರ್ಣಯವನ್ನು ಸುಪ್ರೀಂಕೋರ್ಟ್'ಗೆ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದ ರಾಜ್ಯ ಸರ್ಕಾರವು ಸಧ್ಯ  ರಾಜ್ಯದಲ್ಲಿ  ಸರ್ಕಾರವಿಲ್ಲದ ಕಾರಣ  ಸ್ಕೀಮ್'ನ ಕರಡಿಗೆ ಆಕ್ಷೇಪ ಸಲ್ಲಿಸಲು ಇನ್ನಷ್ಟು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿತ್ತು. ಆದರೆ ಈ ಮನವಿಯನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್ ಸ್ಕೀಮ್ ರಚನೆಯಲ್ಲಿ ಕೇಂದ್ರ ಸರ್ಕಾರದ ಪಾತ್ರ ಮಹತ್ವ ಎಂದು ತಿಳಿಸಿದೆ. ನಂತರ ವಾದವನ್ನು ಆಲಿಸಿದ ಬಳಿಕ ಸುಪ್ರೀಂಕೋರ್ಟ್ ಸ್ಕೀಂ ಕುರಿತ ತನ್ನ ತೀರ್ಪನ್ನು ಕಾದಿರಿಸಿತ್ತು. ಈಗ ಸ್ಕೀಂ ನ ಕರಡಿಗೆ ಒಪ್ಪಿಗೆ ನೀಡಿದೆ.

Trending News