American Renting Chicken : ಅಮೆರಿಕದಲ್ಲಿ ಮೊಟ್ಟೆಯ ಬೆಲೆ ಗಗನಕ್ಕೇರುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಲ್ಲಿ ಅವುಗಳ ಬೆಲೆಗಳು ಶೇಕಡಾ 15 ಕ್ಕಿಂತ ಹೆಚ್ಚು ಹೆಚ್ಚಾಗಿದೆ. ಹೀಗಾಗಿ ಗ್ರಾಹಕರು ಮೊಟ್ಟೆಗಳನ್ನು ತಿನ್ನಲು ವಿಭಿನ್ನ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ.ಅಮೆರಿಕದಲ್ಲಿ ಮೊಟ್ಟೆಗಳ ಸರಾಸರಿ ಬೆಲೆ ಪ್ರತಿ ಪೆಟ್ಟಿಗೆಗೆ 4.94 ಡಾಲರ್ ಅಂದರೆ 428.65 ರೂಪಾಯಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕೆಲವು ಜನರು ತಮ್ಮ ಹಿತ್ತಲಿನಲ್ಲಿಯೇ ಕೋಳಿಗಳನ್ನು ಸಾಕಲು ಪ್ರಾರಂಭಿಸಿದ್ದಾರೆ.ಆದರೆ ಇವರು ಕೋಳಿ ಖರೀದಿಸುವ ಬದಲು ಅವುಗಳನ್ನು ಬಾಡಿಗೆಗೆ ಪಡೆಯುತ್ತಿದ್ದಾರೆ.
ಬಾಡಿಗೆಗೆ ಕೋಳಿಗಳು :
ಅಮೆರಿಕದಲ್ಲಿ ಏವಿಯನ್ ಇನ್ಫ್ಲುಯೆನ್ಸ್ ಹರಡುವಿಕೆಯಿಂದ ಕೋಳಿ ಸಾಕಣೆ ಕೇಂದ್ರಗಳು ನಾಶವಾಗಿವೆ. ಇದರಿಂದಾಗಿ ಲಕ್ಷಾಂತರ ಕೋಳಿಗಳು ಸಾವನ್ನಪ್ಪಿದ್ದು, ಮೊಟ್ಟೆಗಳ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಗ್ರಾಹಕರು ಕೈಗೆಟುಕುವ ಮತ್ತು ಸುಸ್ಥಿರ ಪರಿಹಾರಗಳತ್ತ ಸಾಗುತ್ತಿದ್ದಾರೆ. 'ರೆಂಟ್ ದಿ ಚಿಕನ್'ಎಂಬ ಕಂಪನಿಯ ಪ್ರಕಾರ, 6 ತಿಂಗಳವರೆಗೆ ಕೋಳಿಗಳನ್ನು ಬಾಡಿಗೆಗೆ ನೀಡುತ್ತಾರೆ. ಆದ್ದರಿಂದ ಜನರು ಕೋಳಿಗಳನ್ನು ದೀರ್ಘಕಾಲ ಇಟ್ಟುಕೊಳ್ಳುವ ಬಗ್ಗೆ ಚಿಂತಿಸಬೇಕಾಗಿಲ್ಲ ಆದರೆ ಆ ಕೋಳಿ ನೀಡುವ ಮೊಟ್ಟೆ ಮಾತ್ರ ಇವರದ್ದಾಗಿರುತ್ತದೆ.
ಇದನ್ನೂ ಓದಿ : ಪ್ರಧಾನಿ ಮೋದಿ ಬೆಂಬಲಕ್ಕೆ ಬಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹೇಳಿದ್ದೇನು..!
ಜೇಬಿಗೆ ಕತ್ತರಿ ಹಾಕುತ್ತಿರುವ ಮೊಟ್ಟೆ :
ಅಮೆರಿಕದಲ್ಲಿ ಅನೇಕ ಮೊಟ್ಟೆಕೇಂದ್ರಗಳು ಕೋಳಿಗಳಿಗೆ ಬೇಡಿಕೆಯಲ್ಲಿ ಹೆಚ್ಚಾಗಿರುವ ಬಗ್ಗೆ ವರದಿ ಮಾಡಿವೆ. ಅಕ್ಟೋಬರ್ನಿಂದ ಕೋಳಿ ಆಹಾರದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಹೇಳಲಾಗಿದೆ. ಒಂದು ಆರೋಗ್ಯವಂತ ಕೋಳಿ ವಾರಕ್ಕೆ 5 ಮೊಟ್ಟೆಗಳನ್ನು ಇಡಬಹುದು. ಹಾಗಾಗಿ ಕೋಳಿಗಳನ್ನು ಬಾಡಿಗೆಗೆ ಪಡೆಯುವುದು ಆಕರ್ಷಕ ಆಯ್ಕೆಯಾಗುತ್ತಿದೆ. ಆದರೆ ದಿನಸಿ ಅಂಗಡಿಯಿಂದ ಮೊಟ್ಟೆಗಳನ್ನು ಖರೀದಿಸಲು ಒಂದು ವರ್ಷಕ್ಕೆ 300 ಡಾಲರ್ (ಭಾರತೀಯ ರೂಪಾಯಿ 26,013) ವೆಚ್ಚವಾಗಬಹುದು.
ಅಮೆರಿಕದಲ್ಲಿ ಹಣದುಬ್ಬರ ಹೆಚ್ಚಾಗಬಹುದು :
ಹಕ್ಕಿ ಜ್ವರದಿಂದಾಗಿ, ಅಮೆರಿಕದಲ್ಲಿ ಮೊಟ್ಟೆಗಳ ಪೂರೈಕೆ ತುಂಬಾ ಸೀಮಿತವಾಗಿದೆ. ಕಳೆದ ವರ್ಷ ಮೊಟ್ಟೆಗಳ ಬೆಲೆ ದ್ವಿಗುಣಗೊಂಡಿತ್ತು. ಅಮೆರಿಕದ ಕಾರ್ಮಿಕ ಅಂಕಿಅಂಶಗಳ ಬ್ಯೂರೋದ ವರದಿಯ ಪ್ರಕಾರ, ಕಳೆದ ತಿಂಗಳ ಒಟ್ಟು ಆಹಾರ ವೆಚ್ಚ ಹೆಚ್ಚಳದಲ್ಲಿ ಮೊಟ್ಟೆಯ ಬೆಲೆಗಳು ಸುಮಾರು ಮೂರನೇ ಎರಡರಷ್ಟು ಪಾಲನ್ನು ಹೊಂದಿವೆ. ಇದು ಹಣದುಬ್ಬರದ ಸಮಸ್ಯೆಯನ್ನು ಹೆಚ್ಚಿಸಬಹುದು.
ಇದನ್ನೂ ಓದಿ : ಮದುವೆಯಾದ 3 ದಿನ ವಧು-ವರ ಮನೆಯಲ್ಲಿ ಲಾಕ್..! ಶೌಚಾಲಯಕ್ಕೂ ಹೋಗುವಂತಿಲ್ಲ.. ಬೆಚ್ಚಿ ಬೀಳಿಸುವಂತಿದೆ ಈ ಸಂಪ್ರದಾಯ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.