ಈ 2 ಹಣ್ಣುಗಳಿಂದ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು

ಡಯಾಬಿಟಿಸ್ ಸಮಸ್ಯೆ ಇರುವವರು ತಮ್ಮ ಆಹಾರಪದ್ದತಿಯ ಬಗ್ಗೆ ತೀವ್ರವಾಗ ಗಮನವಹಿಸಬೇಕು.ಇಲ್ಲದಿದ್ದರೆ, ಗಂಭೀರ ಕಾಯಿಲೆಗಳಿಗೆ ಬಲಿಯಾಗುವ ಸಾಧ್ಯತೆ ಇರುತ್ತದೆ. 

Written by - Yashaswini V | Last Updated : Mar 8, 2023, 10:39 AM IST
  • ಮಧುಮೇಹ ರೋಗಿಗಳು ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬಗ್ಗೆ ಸರಿಯಾದ ನಿಗಾವಹಿಸಬೇಕು.
  • ಅವರು ತಮ್ಮ ಆರೋಗ್ಯದ ವಿಷಯದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ
  • ಇದು ಗಂಭೀರ ಕಾಯಿಲೆಗಳಿಗೂ ಆಹ್ವಾನ ನೀಡುತ್ತದೆ.
ಈ 2 ಹಣ್ಣುಗಳಿಂದ ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸಬಹುದು  title=
Diabetes Diet

ಬೆಂಗಳೂರು: ಜೀವನದಲ್ಲಿ ಒಮ್ಮೆ ಮಧುಮೇಹ ಬಂತೆಂದರೆ ಜೀವನ ಪರ್ಯಂತ ಇದರೊಟ್ಟಿಗೆ ಬದುಕಬೇಕಾಗುತ್ತದೆ. ಡಯಾಬಿಟಿಸ್ ರೋಗಿಯು ಸದಾ ಕಾಲ ತಮ್ಮ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಬಗ್ಗೆ ವಿಶೇಷ ಗಮನಹರಿಸುವುದು ಕೂಡ ತುಂಬಾ ಅಗತ್ಯ. ಇವುಗಳ ವಿಷಯದಲ್ಲಿ ಸ್ವಲ್ಪ ನಿರ್ಲಕ್ಷ್ಯವೂ ಕೂಡ ಬ್ಲಡ್ ಶುಗರ್ ಹೆಚ್ಚಾಗಿ ಗಂಭೀರ ಕಾಯಿಲೆಗಳಿಗೆ ಬಲಿಪಶುವಾಗಿಸಬಹುದು.

ಮಧುಮೇಹ ರೋಗಿಗಳು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಕೆಲವು ಆಹಾರಗಳು ತುಂಬಾ ಪ್ರಯೋಜಕಾರಿ ಎಂದು ಹೇಳಲಾಗುತ್ತದೆ. ತಜ್ಞರ ಪ್ರಕಾರ, ಮಧುಮೇಹಿಗಳಿಗೆ ಕೆಲವು ಹಣ್ಣುಗಳನ್ನು ತುಂಬಾ ಲಾಭದಾಯಕ. ಇವುಗಳ ಸೇವನೆಯಿಂದ ನೈಸರ್ಗಿಕವಾಗಿ ಮಧುಮೇಹವನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.  ಡಯಾಬಿಟಿಸ್ ರೋಗಿಗಳಿಗೆ ಬೆಸ್ಟ್ ಫ್ರೆಂಡ್ಸ್ ಈ ಸೂಪರ್‌ಫುಡ್ಸ್ ಗಳೆಂದರೆ ನೆಲ್ಲಿಕಾಯಿ ಮತ್ತು ಸೀಬೆ. ಇವುಗಳಲ್ಲಿ ಯಾವೆಲ್ಲಾ ಅಂಶಗಳು ಅಡಕವಾಗಿದೆ. ಇವುಗಳ ಸೇವನೆಯಿಂದ ಡಯಾಬಿಟಿಸ್ ಅನ್ನು ಹೇಗೆ ಕಂಟ್ರೋಲ್ ಮಾಡಬಹುದು ಎಂದು ತಿಳಿಯೋಣ...

ಇದನ್ನೂ ಓದಿ- ಮಧುಮೇಹ ರೋಗಿಗಳಿಗೆ ಈ ಹಣ್ಣಿನ ವಿನೆಗರ್ ಸೇವನೆ ಒಂದು ವರದನಕ್ಕೆ ಸಮಾನ!

ಡಯಾಬಿಟಿಸ್ ರೋಗಿಗಳಿಗೆ ಬೆಸ್ಟ್ ಫ್ರೆಂಡ್ಸ್ ಈ ಸೂಪರ್‌ಫುಡ್:
ನೆಲ್ಲಿಕಾಯಿ:

ವಿಟಮಿನ್ ಸಿ, ಫೈಬರ್, ಕಾರ್ಬೋಹೈಡ್ರೇಟ್ಗಳು, ಒಮೆಗಾ 3 ಕೊಬ್ಬಿನಾಮ್ಲಗಳು, ಮೆಗ್ನೀಸಿಯಮ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿಯನ್ನು ಪೋಷಕಾಂಶಗಳ ಪವರ್ ಹೌಸ್ ಎಂದು ಕರೆಯಲಾಗುತ್ತದೆ. ಇಂತಹ ನೆಲ್ಲಿಕಾಯಿ ಮಧುಮೇಹಿಗಳಿಗೆ ಯಾವುದೇ ವರದಾನಕ್ಕಿಂತ ಕಡಿಮೆ ಇಲ್ಲ. 

ಮಧುಮೇಹ ನಿಯಂತ್ರಣಕ್ಕಾಗಿ ನೆಲ್ಲಿಕಾಯಿಯನ್ನು ಈ ರೀತಿ ಬಳಸಿ:
* ನೆಲ್ಲಿಕಾಯಿ ರಸದಲ್ಲಿ ಅಲೋವೆರಾ ಜೆಲ್ ಮತ್ತು ಗಿಲೋಯ್ ಅನ್ನು ಬೆರೆಸಿ ಕುಡಿಯುವುದರಿಂದ ಬ್ಲಡ್ ಶುಗರ್ ತಕ್ಷಣವೇ ನಿಯಂತ್ರಣಕ್ಕೆ ಬರುತ್ತದೆ.  

* ನೆಲ್ಲಿಕಾಯಿ  ಜ್ಯೂಸ್‌ನಲ್ಲಿ ಅರಿಶಿನವನ್ನು ಬೆರೆಸಿ ಕುಡಿಯಬಹುದು. 

* ಇದಲ್ಲದೆ ನೆಲ್ಲಿಕಾಯಿಯನ್ನು ನೇರವಾಗಿಯೂ ಸೇವಿಸಬಹುದು.

ಇದನ್ನೂ ಓದಿ- ಹಾಸಿಗೆಯಲ್ಲಿದ್ದುಕೊಂಡೆ ಈ ಒಂದು ಕೆಲಸ ಮಾಡಿ, 7 ದಿನಗಳಲ್ಲಿ ಬೆಣ್ಣೆಯಂತೆ ಕರಗುತ್ತೆ ಹೊಟ್ಟೆ ಭಾಗದ ಬೊಜ್ಜು!

ಪೇರಲ/ ಸೀಬೆ:
ಸೀಬೆ ಅಥವಾ ಪೇರಲವೂ ಸಹ ಮಧುಮೇಹಿಗಳಿಗೆ ದಿವ್ಯೌಷಧವಿದ್ದಂತೆ. ಪೇರಲ ಎಲೆಗಳನ್ನು ಮಧುಮೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಪೇರಲ ಎಲೆಗಳ ಛಾಯಾ ತಯಾರಿಸಿ ಕುಡಿಯುವುದರಿಂದಲೂ ಮಧುಮೇಹವನ್ನು ಕಂಟ್ರೋಲ್ ಮಾಡಬಹುದು.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News