Brown Rice For Obesity: ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ

Brown Rice For Obesity - ಅಕ್ಕಿ ನಮ್ಮ ಆಹಾರದ ಅವಿಭಾಜ್ಯ ಅಂಗವಾಗಿದೆ. ಆದರೆ, ಬಿಳಿ ಅಕ್ಕಿ ಬೊಜ್ಜು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಆದರೆ, ಅದಕ್ಕೆ ಒಂದು ಪರಿಹಾರ ಇರಬೇಕಲ್ಲ. ಅನ್ನವನ್ನು ತಿಂದ ಸಂತುಷ್ಟಿಯೂ ಇದ್ರಬೇಕು ಮತ್ತು ಬೊಜ್ಜಿನ ಸಮಸ್ಯೆಗೆ ಪರಿಹಾರವೂ ಸಿಗಬೇಕು. ಖಂಡಿತ ಇದೆ. ಬನ್ನಿ ತಿಳಿದುಕೊಳ್ಳೋಣ  

Written by - Nitin Tabib | Last Updated : Aug 2, 2022, 10:23 PM IST
  • ಬ್ರೌನ್ ರೈಸ್ ತೂಕ ಇಳಿಕೆಗೆ ಸಹಾಯ ಮಾಡುತ್ತದೆ
  • ಅತಿಯಾಗಿ ತಿನ್ನುವುದನ್ನು ನಿಮ್ಮ ಅಭ್ಯಾಸಕ್ಕೆ ಕಡಿವಾಣ ಹಾಕುತ್ತದೆ ಬ್ರೌನ್ ರೈಸ್
  • ಕಂದು ಅಕ್ಕಿಯಿಂದ ದೇಹಕ್ಕೆ ಸಾಕಷ್ಟು ಪ್ರಯೋಜನಗಳಿವೆ
Brown Rice For Obesity: ಬೊಜ್ಜಿನ ಸಮಸ್ಯೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ರೈಸ್ ಅನ್ನು ಒಮ್ಮೆ ಟ್ರೈ ಮಾಡಿ ನೋಡಿ title=
Benefits Of Eating Brown Rice

Brown rice for weight loss: ಸಾಮಾನ್ಯವಾಗಿ ನಾವೆಲ್ಲರೂ ಊಟದಲ್ಲಿ ಅನ್ನವನ್ನು ತಿನ್ನಲು ಇಷ್ಟಪಡುತ್ತೇವೆ. ಅನ್ನ ನಮ್ಮ ಆಹಾರದ ಅವಿಭಾಜ್ಯ ಅಂಗವೂ ಹೌದು. ಆದರೆ ಬಿಳಿ ಅಕ್ಕಿ ಸ್ಥೂಲಕಾಯ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎನ್ನಲಾಗುತ್ತದೆ. ಹೀಗಿರುವಾಗ ಅನ್ನ ತಿನ್ನುವುದು ತಪ್ಪಬಾರದು ಮತ್ತು ಬೊಜ್ಜು ಕೂಡ ಹೆಚ್ಚಾಗಬಾರದು ಎಂಬ ಪರ್ಯಾಯದ ಹುಡುಕಾಟದಲ್ಲಿ ಜನರಿಸುತ್ತಾರೆ. ಈ ಸಮಸ್ಯೆಗೆ ಒಂದು ಪರಿಪೂರ್ಣ ಉಪಾಯ ಎಂದರೆ ಅದುವೇ ಬ್ರೌನ್ ರೈಸ್ ಅಥವಾ ಕಂದು ಅಕ್ಕಿ. ಇದು ಅನೇಕ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಕಬ್ಬಿಣ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಾರ್ಬೋಹೈಡ್ರೇಟ್, ಪ್ರೋಟೀನ್ ಮತ್ತು ಫೈಬರ್ ಇದರಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತದೆ.

ಕಂದು ಅಕ್ಕಿ ತೂಕವನ್ನು ಹೇಗೆ ಕಡಿಮೆ ಮಾಡುತ್ತದೆ?
ಬ್ರೌನ್ ರೈಸ್, ಬಿಳಿ ಅಕ್ಕಿಗಿಂತ ಮೂರು ಪಟ್ಟು ಹೆಚ್ಚು ನಾರಿನಂಶವನ್ನು ಹೊಂದಿರುತ್ತದೆ. ಫೈಬರ್ ತೂಕ ಇಳಿಕೆಗೆ ತುಂಬಾ ಸಹಾಯಕವಾಗಿದೆ. ಇದು ಬಿಳಿ ಅಕ್ಕಿಗಿಂತ ಕಡಿಮೆ ಪಿಷ್ಟವನ್ನು ಹೊಂದಿರುತ್ತದೆ. ಆದರೆ ಬಿಳಿ ಅಕ್ಕಿ ಕಾರ್ಬೋಹೈಡ್ರೇಟ್ ಭರಿತ ಆಹಾರವಾಗಿದೆ. ಇದೆ ಕಾರಣದಿಂದ ಹೆಚ್ಚು ಬಿಳಿ ಅಕ್ಕಿ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ. ಬ್ರೌನ್ ರೈಸ್ ಅತಿಯಾಗಿ ತಿನ್ನುವುದರಿಂದ ನೀವು ತೂಕ ಹೆಚ್ಚಳದ ಸಮಸ್ಯೆಯಿಂದ ಪಾರಾಗಬಹುದು.

ಇದನ್ನೂ ಓದಿ-Corbevax Booster Dose: ದೇಶದಲ್ಲಿ ಇದೇ ಮೊದಲ ಬಾರಿಗೆ ಬೂಸ್ಟರ್ ಡೋಸ್ ರೂಪದಲ್ಲಿ 'ಮಿಕ್ಸ್' ಕೊರೋನಾ ವ್ಯಾಕ್ಸಿನ್ ಶಿಫಾರಸ್ಸು

ಕಂದು ಅಕ್ಕಿ ತೂಕ ಇಳಿಕೆಗೆ ತುಂಬಾ ಒಳ್ಳೆಯದು
ಕಂದು ಅಕ್ಕಿಯ ಸೇವನೆಯಿಂದ ಹೊಟ್ಟೆ ಚೆನ್ನಾಗಿ ತುಂಬುತ್ತದೆ. ಇದರಿಂದಾಗಿ ಪದೇ ಪದೇ ಹಸಿವಿನ ಅನುಭವ ಉಂಟಾಗುತುವಿಲ್ಲ ಮತ್ತು ಅತಿಯಾಗಿ ತಿನ್ನುವುದರಿಂದ ನಾವು ಪಾರಾಗುತ್ತೇವೆ. ಇದಕ್ಕೆ ವಿಪರೀತ ಎಂಬಂತೆ ಬಿಳಿ ಅಕ್ಕಿ ತ್ವರಿತವಾಗಿ ಜೀರ್ಣವಾಗುತ್ತದೆ, ಇದರಿಂದಾಗಿ ಒಬ್ಬ ಪದೇ ಪದೇ ಹಸಿವಿನ ಅನುಭವವಾಗುತ್ತದೆ ಮತ್ತು ಇದೇ ತೂಕ ಏರಿಕೆಗೆ ಕಾರಣ ಕೂಡ ಆಗುತ್ತದೆ. ಹೀಗಾಗಿ ಕಂದು ಅಕ್ಕಿ ತೂಕ ಇಳಿಕೆಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ-Weight Loss Tips: ವೇಗವಾಗಿ ಹೆಚ್ಚಾಗುತ್ತಿರುವ ತೂಕಕ್ಕೆ ಕಡಿವಾಣ ಹಾಕುತ್ತೆ ಈ ನೀರು

ಕಂದು ಅಕ್ಕಿಯ ಇತರ ಪ್ರಯೋಜನಗಳು
ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೂ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಇದರ ದೈನಂದಿನ ಸೇವನೆಯಿಂದ ಮಲಬದ್ಧತೆಯೂ ನಿವಾರಣೆಯಾಗುತ್ತದೆ. ಇದು ಜೀವಕೋಶಗಳನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ. ಕಂದು ಅಕ್ಕಿಯಲ್ಲಿ ಸೆಲೆನಿಯಮ್ ಮತ್ತು ಮ್ಯಾಂಗನೀಸ್ ಕಂಡುಬರುತ್ತದೆ. ಸೆಲೆನಿಯಮ್ ಥೈರಾಯ್ಡ್ ಹಾರ್ಮೋನುಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮ್ಯಾಂಗನೀಸ್ ದೇಹವನ್ನು ಶಕ್ತಿಯುತವಾಗಿರಿಸುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News