ಬರೀ ಶ್ರಮಪಟ್ಟರೆ ಸಾಲೋದಿಲ್ಲ. ಇದರ ಜೊತೆ ಲಕ್ ಕೂಡಾ ಬೇಕು... ಈ ಎರಡು ಸೇರಿದ್ರೆ ಮಾತ್ರ ಸಕ್ಸಸ್.. ಒಂದು ಕಾಲದಲ್ಲಿ ಸಹ ಕಲಾವಿದ ಆದವರು ಬಳಿಕ ಹೀರೋ.. ನಂತರ ನಿರ್ಮಾಪಕ.. ಈ ರೀತಿ ಸಾಧನೆಯ ಹಾದಿಯಲ್ಲಿ ಸಾಗಿರುವವರು ಹಲವು ಮಂದಿ ಇದ್ದಾರೆ.ಆದರೆ ಎಲ್ಲರೂ ಇದೇ ಹಾದಿಯಲ್ಲಿ ಹೆಜ್ಜೆ ಹಾಕೋದಕ್ಕೆ ಆಗಲ್ಲ. ಸಿನಿ ರಂಗಕ್ಕೆ ಕಲಾವಿದರಾಗಿ ಎಂಟ್ರಿ ಕೊಟ್ಟೋರೆಲ್ಲ ನಿರ್ಮಾಪಕರಾಗಲ್ಲ. ಒಂದು ವೇಳೆ ನಿರ್ಮಾಪಕರಾದರೂ ಎಲ್ಲರಿಗೂ ಸಕ್ಸಸ್ ಸಿಗೋದಿಲ್ಲ.
ನಟನೆಯ ಜೊತೆ ನಿರ್ಮಾಣಕ್ಕೆ ಕೈಹಾಕಿ ಗೆದ್ದೋರು ಸ್ಯಾಂಡಲ್‌ವುಡ್‌ದಲ್ಲಿ ಅದೆಷ್ಟೋ ಮಂದಿ. ಮೊದಲು ನಟನೆಯ ಮೂಲಕ ಸಿನಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟವರು ನಂತರ ಸಿನಿಮಾ ನಿರ್ಮಾಪಕರಾಗಿದ್ದಾರೆ..ಈ ರೀತಿ ಸ್ಯಾಂಡಲ್‌ವುಡ್‌ನಲ್ಲಿ ನಟನೆಯ ಜೊತೆ ನಿರ್ಮಾಪಕರಾದವರ ಸಂಖ್ಯೆ ದೊಡ್ಡದಿದೆ.. ಈ ವಿಚಾರದಲ್ಲಿ ಧಾರಾವಾಹಿ ನಟ, ನಟಿಯರು ಕೂಡಾ ಹಿಂದೆ ಬಿದ್ದಿಲ್ಲ. ಇತ್ತೀಚೆಗೆ ಕಿರುತೆರೆಯಲ್ಲಿ ಗುರುತಿಸಿಕೊಂಡ ಕೆಲ ನಟ, ನಟಿಯರು ನಿರ್ಮಾಣಕ್ಕೂ ಕೈ ಹಾಕಿದ್ದಾರೆ.. ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದ ಧಾರಾವಾಹಿಯ ನಟ, ನಟಿಯರು ಕೂಡಾ ಧಾರಾವಾಹಿಗಳಿಗೆ ಬಂಡವಾಳ ಹಾಕ್ತಿದ್ದಾರೆ. ವಿಶೇಷ ಅಂದ್ರೆ ಆ ಧಾರಾವಾಹಿಗಳು ಕಿರಿತೆರೆಯಲ್ಲಿ ಟಾಪ್ 10 ಲಿಸ್ಟ್‌ನಲ್ಲಿ ಸ್ಥಾನ ಪಡೆದಿವೆ.
ಇದನ್ನೂ ಓದಿ: RRR:ಬಾಕ್ಸಾಫೀಸ್ ಕೊಳ್ಳೆ ಹೊಡೆದ ಆರ್‌ಆರ್‌ಆರ್.. ಮೊದಲ ದಿನವೇ 200 ಕೋಟಿ ದಾಟಿದ ಕಲೆಕ್ಷನ್..
ಸ್ವಪ್ನ ಕೃಷ್ಣ: ಇವರು ನಟನೆ ಮಾತ್ರವಲ್ಲದೆ ನಿರ್ಮಾಣ ಕೂಡಾ ಮಾಡ್ತಿದ್ದಾರೆ. ಸ್ವಪ್ನ ಕೃಷ್ಣ ತಮ್ಮದೇ ಪ್ರೊಡೆಕ್ಷನ್ ಹೌಸ್ ನಡೆಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ಡೈರೆಕ್ಷನ್ ಕೂಡಾ ಮಾಡ್ತಿದ್ದಾರೆ. ಸುಬ್ಬಲಕ್ಷ್ಮಿ ಸಂಸಾರ ಹಾಗೂ ಸತ್ಯಾ ಧಾರಾವಾಹಿಯನ್ನ ಡೈರೆಕ್ಷನ್ ಮಾಡುವುದರ ಜೊತೆಗೆ ಇದರ ಪ್ರೊಡ್ಯೂಸರ್ ಕೂಡಾ ಹೌದು..
ವೇದಾಂತ್: ಗಟ್ಟಿಮೇಳ ಧಾರಾವಾಹಿಯ ವೇದಾಂತ್ ಅಂದ್ರೆ ರಕ್ಷ್ ಸಾಕಷ್ಟು ಅಭಿಮಾನಿಗಳನ್ನ ಹೊಂದಿರುವ ನಟ. ಗಟ್ಟಿಮೇಳ ಧಾರಾವಾಹಿಯ ಮುಖ್ಯ ಪಾತ್ರಧಾರಿ.. ಲೀಡ್ ರೋಲ್‌ನಲ್ಲಿ ಮಿಂಚುತ್ತಿರುವ ವೇದಾಂತ್ ಈ ಧಾರಾವಾಹಿಯ ಪ್ರೊಡ್ಯೂಸರ್ ಕೂಡಾ ಆಗಿದ್ದಾರೆ..
ಶೃತಿ ನಾಯ್ಡು: ಇವರು ಕನ್ನಡ ಕಿರುತೆರೆಯ ಮತ್ತೊಬ್ಬ ಫೇಮಸ್ ಪ್ರೊಡ್ಯೂಸರ್. ಒಂದಿಷ್ಟು ವರ್ಷಗಳಿಂದ ಸಾಕಷ್ಟು ಧಾರಾವಾಹಿಗಳಿಗೆ ಶೃತಿ ನಾಯ್ಡು ಬಂಡವಾಳ ಹೂಡಿದ್ದಾರೆ. ಇವರು ಬಂಡವಾಳ ಹೂಡಿದ ಹಾಗೂ ನಿರ್ದೇಶನ ಮಾಡಿದ ಸಾಕಷ್ಟು ಧಾರವಾಹಿಗಳು ಸೂಪರ್ಹಿಟ್ ಆಗಿವೆ.. ದೇವಿ, ಮಹಾದೇವಿ, ಬ್ರಹ್ಮಗಂಟು, ಮನಸೆಲ್ಲಾ ನೀನೇ, ಸಂಘರ್ಷ ಸೇರಿದಂತೆ ಹಲವು ಧಾರಾವಾಹಿಗಳಿಗೆ ಶೃತಿ ನಾಯ್ಡು ಪ್ರೋಡ್ಯೂಸರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.
ಜಗನ್: ಲಕ್ಷಣ ಧಾರಾವಾಹಿ ಅಂದ್ರೆ ಮೊದಲು ನೆನಪಾಗೊದು ನಟ ಜಗನ್. ಇವ್ರು ಕನ್ನಡದ ಮತ್ತೊಂದು ಪ್ರತಿಭಾವಂತ ನಟ. ಜಗನ್ ಈವರೆಗೂ ಒಂದಿಷ್ಟು ಧಾರಾವಾಹಿಗಳಲ್ಲಿ ಮಿಂಚಿದ್ದಾರೆ.. ಈ ಮುಂಚೆ ಬಂದ ಸೀತವಲ್ಲಭ ಧಾರಾವಾಹಿಯಲ್ಲಿ ನಟನೆ ಮತ್ರವಲ್ಲದೆ, ಧಾರಾವಾಹಿಯ ಪ್ರೊಡ್ಯೂಸರ್ ಕೂಡಾ ಆಗಿದ್ದರು. ಸದ್ಯ ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ ಲಕ್ಷಣ ಧಾರಾವಾಹಿಯಲ್ಲಿ ಲೀಡ್ ರೋಲ್ ಮಾಡ್ತಿದ್ದಾರೆ. ಇದರ ಜೊತೆ ಜಗನ್ ಹಣ ಹೂಡಿದ್ದಾರೆ.
ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಅಭಿನಯದ ‘ತಲೆದಂಡ’ ಏಪ್ರಿಲ್ 1ರಂದು ತೆರೆಗೆ
ರಮೇಶ್ ಅರವಿಂದ್: ಕನ್ನಡದ ಎವರ್ ಗ್ರೀನ್ ಹ್ಯಾಂಡ್ಸಮ್ ಹಂಕ್ ಅಂದ್ರೆ ರಮೇಶ್ ಅರವಿಂದ್ (Ramesh Arvind).. ನಟನೆಯಲ್ಲಿ ಶಹಬ್ಬಾಸ್ ಅನಿಸಿಕೊಂಡ ರಮೇಶ್ ಅರವಿಂದ್, ಕನ್ನಡ ಕೋಟ್ಯಾದಿಪತಿ ಹಾಗೂ ವೀಕೆಂಡ್ ವಿತ್ ರಮೇಶ್ ಈ ಎರಡು ಶೋಗಳನ್ನ ಹೋಸ್ಟ್ ಮಾಡಿ ಯಾವುದಕ್ಕೂ ಕಮ್ಮಿ ಇಲ್ಲಾ ಅಂತಾ ತೋರಿಸಿಕೊಟ್ಟವರು. ಸದ್ಯ ಕನ್ನಡ ಕಿರುತೆರೆಯ ಸುಂದರಿ ಧಾರಾವಾಹಿಯನ್ನು ತಮ್ಮದೆ ಬ್ಯಾನರ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ.. ಈ ಮುಂಚೆ ನಂದಿನಿ ಧಾರಾವಾಹಿಯ ಸೆಕೆಂಡ್ ಸೀಸನ್ಗೆ ಕೂಡಾ ಹಣ ಹೂಡಿದ್ದರು..
ದಿಲೀಪ್ ರಾಜ್: ಎಜೆ ಅಂದ್ರೆ ದಿಲೀಪ್ ರಾಜ್.. ಸದ್ಯ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಪಡದಿದ್ದಾರೆ.. ಇವ್ರು ಕನ್ನಡದ ದಾರಾವಾಹಿಗಳಾದ ವಿದ್ಯಾ ವಿನಾಯಕ, ಪಾರೂ ಹಾಗೂ ಇತ್ತೀಚೆಗೆ ಲಾಂಚ್ ಆಗಿ ಸದ್ದು ಮಾಡ್ತಾಯಿರುವ ಹಿಟ್ಲರ್ ಕಲ್ಯಾಣ ಧಾರಾವಾಹಿಯ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.